ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದರಸಾ ನಿರ್ಮಾಣಕ್ಕೆ ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ; ಅಕ್ರಮ ಭೂ ಕಬಳಿಕೆ ಆರೋಪ

Hindu temple demolished: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ. ಆ. 21 ರಂದು ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ದೇವಾಲಯದ ಜಮೀನನ್ನು ಪಕ್ಕದ ಮದರಸಾಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಈ ದೇವಾಲಯವನ್ನು ಧ್ವಂಸಗೊಳಿಸಿದೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ

ಇಸ್ಲಾಮಾಬಾದ್, ಆ.1: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ (Hindu temple demolished). ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ದೇವಸ್ಥಾನವನ್ನು ಪುನರ್ನಿರ್ಮಿಸಬೇಕೆಂದು ಅಲ್ಪಸಂಖ್ಯಾತ ಹಿಂದೂಗಳು ಒತ್ತಾಯಿಸಿದ್ದಾರೆ. ಲಾಹೋರ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ ಈ ದೇವಾಲಯವಿದೆ. ಇದು ಸುಮಾರು 100 ರಿಂದ 125 ವರ್ಷಗಳಷ್ಟು ಹಳೆಯದಾಗಿದ್ದು, ಸುಮಾರು 1,000 ಚದರ ಮೀಟರ್ ಪ್ರದೇಶದಲ್ಲಿ ವಿಸ್ತಿರಿಸಿತ್ತು.

ಆಗಸ್ಟ್ 21 ರಂದು ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ದೇವಾಲಯದ ಜಮೀನನ್ನು ಪಕ್ಕದ ಮದರಸಾಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಈ ದೇವಾಲಯವನ್ನು ಧ್ವಂಸಗೊಳಿಸಿದೆ ಎಂದು ಸ್ಥಳೀಯ ನಿವಾಸಿಗಳು, ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ರಾಜಕೀಯ ಪಕ್ಷವೊಂದು ಆರೋಪಿಸಿವೆ. ಆದರೆ, ಸರ್ಕಾರಿ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದು, ಭಾರಿ ಮಳೆಯಿಂದಾಗಿ ಹಳೆಯ ಕಟ್ಟಡವು ಕುಸಿದುಬಿದ್ದಿದೆ ಎಂದು ಹೇಳಿದ್ದಾರೆ.

ದೇವಾಲಯದ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಮಾಸಿಹಾ ಮಿಲ್ಲತ್ ಪಕ್ಷ (ಪಿಎಂಎಂಪಿ) ಈ ದೇವಾಲಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ದೇವಾಲಯವನ್ನು ಪುನರ್ನಿರ್ಮಿಸುವಂತೆ ಒತ್ತಾಯಿಸಿದೆ. ಪಿಎಂಎಂಪಿ ಅಧ್ಯಕ್ಷ ಅಸ್ಲಾಂ ಪರ್ವೇಜ್ ಸಹೋತ್ರಾ ಅವರು ಆಗಸ್ಟ್ 28 ರಂದು ಪಂಜಾಬ್‌ನ ಹೆಚ್ಚುವರಿ ಗೃಹ ಕಾರ್ಯದರ್ಶಿಯನ್ನು ಭೇಟಿ ಮಾಡಿ, ದೇವಾಲಯ ಧ್ವಂಸ ಪ್ರಕರಣದಲ್ಲಿ ಭಾಗಿಯಾದವರ ಹಾಗೂ ರಕ್ಷಣೆ ನೀಡಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ಸಲ್ಲಿಸಿದ್ದಾರೆ.

ಎಸಿ ಕಂಪ್ರೆಸರ್ ಸ್ಫೋಟ: ಪಾಕಿಸ್ತಾನ ಆಸ್ಪತ್ರೆಯಲ್ಲಿ ಸುಟ್ಟು ಕರಕಲಾದ 15 ಶಿಶುಗಳು

ದೇವಾಲಯವನ್ನು ಕೆಡವಿದ ಜನರು ನಿಷೇಧಿತ ಬಲಪಂಥೀಯ ಇಸ್ಲಾಮಿಕ್ ರಾಜಕೀಯ ಪಕ್ಷವಾದ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಗೆ ಸೇರಿದವರು ಎಂದು ಪರ್ವೇಜ್ ಸಹೋತ್ರಾ ಆರೋಪಿಸಿದ್ದಾರೆ. ದೇವಾಲಯದ ಪಕ್ಕದಲ್ಲಿರುವ ಭೂಮಿಯನ್ನು ಈ ಹಿಂದೆ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮದರಸಾಕ್ಕಾಗಿ ಗುತ್ತಿಗೆಗೆ ನೀಡಿತ್ತು. ಹಲವಾರು ವರ್ಷಗಳಿಂದ ಬಾಡಿಗೆ ಪಾವತಿಸದೆ ಇದ್ದ ಕಾರಣ ಮತ್ತು ಆವರಣವನ್ನು ಅವುಗಳ ಉದ್ದೇಶಕ್ಕಾಗಿ ಬಳಸದ ಕಾರಣ ಗುತ್ತಿಗೆಯನ್ನು ರದ್ದುಗೊಳಿಸಲಾಯಿತು ಎಂದು ಪರ್ವೇಜ್ ಸಹೋತ್ರಾ ಹೇಳಿದ್ದಾರೆ.

ಇನ್ನು ಈ ದೇವಸ್ಥಾನವು ಸುಮಾರು 100 ರಿಂದ 125 ವರ್ಷಗಳಷ್ಟು ಹಳೆಯದು ಎಂದು ಇಟಿಪಿಬಿಯ ಹಿರಿಯ ಅಧಿಕಾರಿ ರಾಣಾ ಇಫ್ತಿಕರ್ ದೃಢಪಡಿಸಿದರು. “ನಮ್ಮ ದಾಖಲೆ ಪುಸ್ತಕಗಳಲ್ಲಿ ಈ ದೇವಾಲಯದ ಹೆಸರು ಇಲ್ಲ. ಆದರೆ, ಇದು ತುಂಬಾ ಹಳೆಯದು. 100 ರಿಂದ 125 ವರ್ಷಗಳಿಗಿಂತ ಹೆಚ್ಚು ಹಳೆಯದು. ಭಾರಿ ಮಳೆಯಿಂದಾಗಿ ದೇವಸ್ಥಾನ ಕುಸಿದಿದೆ” ಎಂದು ಹೇಳಿದರು.

ದೇವಾಲಯದ ಪಕ್ಕದಲ್ಲಿರುವ ಭೂಮಿಯನ್ನು ಮದರಸಾಕ್ಕಾಗಿ ಗುತ್ತಿಗೆಗೆ ನೀಡಲಾಗಿದೆ. ಆದರೆ ದೇವಾಲಯದ ಸ್ವಂತ ಭೂಮಿಯನ್ನು ಯಾರಿಗೂ ಗುತ್ತಿಗೆಗೆ ನೀಡಲಾಗಿಲ್ಲ ಎಂದು ಅವರು ಒತ್ತಿ ಹೇಳಿದರು. ದೇವಾಲಯವನ್ನು ಪುನಃಸ್ಥಾಪಿಸಬೇಕೆ ಅಥವಾ ಬೇಡವೇ ಎಂಬುದನ್ನು ಇಟಿಪಿಬಿ ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಇಫ್ತಿಕರ್ ಹೇಳಿದರು.