ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ

ದಕ್ಷಿಣ ಅಮೆರಿಕದ ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ (ಆಗಸ್ಟ್‌ 10) ಸಂಭವಿಸಿದ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ವರೆಗೆ 111 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿಕೊಂಡಿದ್ದಾರೆ. ಹಲವರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಕೊಲಂಬಿಯಾದಲ್ಲಿ ಭೂಕಂಪ

ವಾಷಿಂಗ್ಟನ್‌: ದಕ್ಷಿಣ ಅಮೆರಿಕದ ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ (ಆಗಸ್ಟ್‌ 10) ಸಂಭವಿಸಿದ 7.4 ತೀವ್ರತೆಯ ಭೂಕಂಪ (Colombia Earthquake) ಸಂಭವಿಸಿದ್ದು, ಈ ವರೆಗೆ 111 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿಕೊಂಡಿದ್ದಾರೆ. ಹಲವರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಬೊಗೋಟಾದಿಂದ ಪಶ್ಚಿಮಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಚೋಕೊ ಪ್ರದೇಶದಲ್ಲಿ ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್‌ನಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ನೆರೆಯ ಈಕ್ವೆಡಾರ್‌ನಲ್ಲಿಯೂ ಭೂಕಂಪದ ಅನುಭವವಾಗಿದೆ.

ಭೂಕಂಪ ಸಂಭವಿಸುತ್ತಿದ್ದಂತೆ ಜನರು ಮನೆ, ಕಟ್ಟಡಗಳಿಂದ ಬೀದಿಗೆ ಓಡಿಬಂದಿದ್ದಾರೆ. ಕೆಲವರು ಮಾಲ್ ಗಳಲ್ಲಿ ಸಿಲುಕಿದ್ದಾರೆ. ತಮ್ಮ ಕಣ್ಣೆದುರೇ ತಮ್ಮ ಮನೆ, ಅಪಾರ್ಟ್ ಮೆಂಟ್ ಗಳು ಉರುಳುತ್ತಿರುವುದನ್ನು ಕಂಡು ಬಹಳಷ್ಟು ಮಂದಿ ಕಣ್ಣೀರಾಗಿದ್ದಾರೆ. ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ 120 ಕಿ.ಮೀ ದೂರದಲ್ಲಿರುವ ಮನಿಜಾಲೆಸ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳು ಬಿರುಕು ಬಿಟ್ಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪೆರೇರಾ, ಕ್ವಿಬ್ಡೊ, ಕ್ಯಾಲಿ ಮತ್ತು ಮನಿಜೇಲ್ಸ್ ಸೇರಿದಂತೆ ಪಶ್ಚಿಮ ಕೊಲಂಬಿಯಾದಾದ್ಯಂತದ ನಗರಗಳು ತೀವ್ರವಾಗಿ ಹಾನಿಗೊಳಗಾದವು. ಕೊಲಂಬಿಯಾದ ಆಂತರಿಕ ಸಚಿವರು 20 ಕ್ಕೂ ಹೆಚ್ಚು ಪುರಸಭೆಗಳಿಗೆ ಹಾನಿಯಾಗಿದೆ. ಕ್ಯಾಲಿಯಲ್ಲಿ, ಕುಸಿದ ಕನಿಷ್ಠ 19 ಕಟ್ಟಡಗಳಲ್ಲಿ ನಿವಾಸಿಗಳು ಸಿಲುಕಿಕೊಂಡಿದ್ದಾರೆ ಎಂದು ಮೇಯರ್ ಅಲೆಜಾಂಡ್ರೊ ಎಡರ್ ಹೇಳಿದ್ದಾರೆ. "ನನ್ನ ಇಡೀ ಮನೆ ನಡುಗಿತು. ನಾನು ಎಂದಿಗೂ ಅಂತಹ ಪ್ರಬಲ ಭೂಕಂಪವನ್ನು ಅನುಭವಿಸಿಲ್ಲ" ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.



ಭೂಕಂಪದ ಕೇಂದ್ರಬಿಂದು ಇರುವ ಕೊಲಂಬಿಯಾದ ಪೆಸಿಫಿಕ್ ಕರಾವಳಿ ಪ್ರದೇಶವು ಪೆಸಿಫಿಕ್ ಸಾಗರವನ್ನು ಸುತ್ತುವರಿದಿರುವ ಭೂಕಂಪನ ದೋಷರೇಖೆಗಳ ವಲಯವಾದ ‘ರಿಂಗ್ ಆಫ್ ಫೈರ್’ನಲ್ಲಿದೆ. ವಿಶ್ವದ ಬಹುತೇಕ ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ. ಕೊಲಂಬಿಯಾದ ಭೂವೈಜ್ಞಾನಿಕ ಸೇವಾ ಸಂಸ್ಥೆ ಸೋಮವಾರ, “ಕಳೆದ ಒಂದು ದಶಕದಲ್ಲಿ ಕೊಲಂಬಿಯಾದಲ್ಲಿ ದಾಖಲಾಗಿರುವ ಅತ್ಯಂತ ಹೆಚ್ಚಿನ ತೀವ್ರತೆಯ ಭೂಕಂಪ” ಇದಾಗಿದೆ ಎಂದು ತಿಳಿಸಿತು. ಇದರ ಬಳಿಕ 2.8 ಮತ್ತು 4.8 ತೀವ್ರತೆಯ ಎರಡು ಕಂಪನಗಳು ಸಂಭವಿಸಿವೆ.

Vishakha Bhat Heggar

View all posts by this author