ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಯನ್ಮಾರ್‌ನಲ್ಲಿ ಬೌದ್ಧ ಮಠದ ಮೇಲೆ ಭೀಕರ ಬಾಂಬ್‌ ದಾಳಿ; 14 ಜನರು ಸಾವು, 20 ಮಂದಿಗೆ ಗಾಯ

Myanmar military airstrike monastery: ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಸತತ 15 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ಗಳನ್ನು ಬೀಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಯನ್ಮಾರ್‌ನಲ್ಲಿ ಬೌದ್ಧ ಮಠದ ಮೇಲೆ ಭೀಕರ ಬಾಂಬ್‌ ದಾಳಿ

ನೈಪೀಡಾವ್ : ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮಯನ್ಮಾರ್ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದು, (Myanmar military airstrike monastery) 20 ಜನರು ಗಾಯಗೊಂಡಿದ್ದಾರೆ. ವರದಿಯ ಪ್ರಕಾರ, ಮಂಡಲೆಯಿಂದ ಪಶ್ಚಿಮಕ್ಕೆ ಸುಮಾರು 75 ಕಿ.ಮೀ ದೂರದಲ್ಲಿರುವ ಮೈಯಾಂಗ್ ಪಟ್ಟಣದ ಸ್ವೆಲ್ ಲೆ ಓಹ್ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಯ ಸುಮಾರಿಗೆ (ಸ್ಥಳೀಯ ಸಮಯ) 100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಧ್ಯಾನ ಕೇಂದ್ರದ ಮೇಲೆ ಈ ದಾಳಿ ನಡೆದಿದೆ.

ಮೈಯಾಂಗ್ ಟೌನ್‌ಶಿಪ್‌ನ ನಾಗರಿಕ ರಕ್ಷಣಾ ಮತ್ತು ಭದ್ರತಾ ಸಂಸ್ಥೆಯ (CDSOM) ವಕ್ತಾರ ಈ ಕುರಿತು ಮಾತನಾಡಿದ್ದು, ಫೈಟರ್ ಜೆಟ್ ಆಶ್ರಮದ ಕಾಂಪೌಂಡ್‌ ಒಳಗೆ ದಾಳಿ ನಡೆದಿದ್ದು, ಮೂವರು ಮಹಿಳೆಯರು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಸತತ 15 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ಗಳನ್ನು ಬೀಳಿಸಲಾಗಿದ್ದು, ಎರಡನೇ ಬಾಂಬ್ ಮಠದ ಪಕ್ಕದ ಮನೆಗೆ ಹಾನಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕ ಪಡೆಗಳು ಮತ್ತು ಜುಂಟಾ ಮಿಲಿಟರಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ವಿವಿಧ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ಮಯನ್ಮಾರ್ ಸೇನೆಯು ನಿರಂತರ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದು, ಇದರಿಂದಾಗಿ ನಿರಪರಾಧಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನೇಮಿಸಿದ ತನಿಖಾಧಿಕಾರಿಗಳ ಪ್ರಕಾರ, ಮ್ಯಾನ್ಮಾರ್ ಸೇನೆಯು ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ.

ಮಯನ್ಮಾರ್‌ನಲ್ಲಿ ಫೆಬ್ರವರಿ 2021 ರ ಮಿಲಿಟರಿ ದಂಗೆಯ ನಂತರ ತೀವ್ರವಾದ ಅಂತರ್ಯುದ್ಧ ಮತ್ತು ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಮಿಲಿಟರಿ ಆಡಳಿತ (ಜುಂಟಾ) ಹಾಗೂ ವಿವಿಧ ಜನಾಂಗೀಯ ಸಶಸ್ತ್ರ ಗುಂಪುಗಳು ಮತ್ತು ಪ್ರಜಾಪ್ರಭುತ್ವ ಪರ ಪ್ರತಿರೋಧ ಪಡೆಗಳ ನಡುವೆ ಭೀಕರ ಹೋರಾಟ ನಡೆಯುತ್ತಿದ್ದು, ಲಕ್ಷಾಂತರ ಜನರು ಈ ವರೆಗೆ ಸ್ಥಳಾಂತರಗೊಂಡಿದ್ದಾರೆ.

ಐಎಸ್‌ಐ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್‌ಗಳನ್ನು ಭೇದಿಸಿದ ಪೊಲೀಸರು: ಶಸ್ತ್ರಾಸ್ತ್ರ, ಪೆಟ್ರೋಲ್ ಬಾಂಬ್‌ಗಳು ವಶಕ್ಕೆ, 9 ಜನರ ಬಂಧನ

ಮಯನ್ಮಾರ್ ಮಿಲಿಟರಿ ಆಡಳಿತವು (ಜುಂಟಾ) ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಪ್ರತಿರೋಧ ಪಡೆಗಳನ್ನು ಹತ್ತಿಕ್ಕಲು ಸಾಮಾನ್ಯ ನಾಗರಿಕರನ್ನೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.ಬಂಡುಕೋರ ಗುಂಪುಗಳಿಗೆ (PDF ಮತ್ತು EAOs) ಸ್ಥಳೀಯ ನಾಗರಿಕರು ಆಶ್ರಯ, ಆಹಾರ ಮತ್ತು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂದು ಮಿಲಿಟರಿ ಶಂಕಿಸಿದ್ದು, ನಾಗರಿಕರ ಗ್ರಾಮಗಳನ್ನೇ ಧ್ವಂಸಗೊಳಿಸುವ ಮೂಲಕ ಬಂಡುಕೋರರಿಗೆ ಸಿಗುವ ಜನಬೆಂಬಲ ಮತ್ತು ಸಂಪನ್ಮೂಲಗಳ ಸರಪಳಿಯನ್ನು ಕತ್ತರಿಸುವುದು ಮಿಲಿಟರಿಯ ಮುಖ್ಯ ತಂತ್ರವಾಗಿದೆ.

Vishakha Bhat Heggar

View all posts by this author