ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳದ ಬಳಿಕ ಅಮೆರಿಕದಲ್ಲಿಯೂ ಭೀಕರ ಪ್ರವಾಹ; 20 ಜನರು ನಾಪತ್ತೆ

US Floods: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. 700 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3000 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಅಮೆರಿಕದಲ್ಲಿ ಪ್ರವಾಹ

ವಾಷಿಂಗ್ಟನ್‌: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. 700 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3000 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ಅಮೆರಿಕದ (US Floods) ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಆಗಸ್ಟ್ 29ರ ಶನಿವಾರದಂದು ಕೇವಲ 30 ನಿಮಿಷಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಣಿವೆಯ ಕಡಿದಾದ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಪ್ರವಾಹದ ನೀರು ನುಗ್ಗಿ ಈ ದುರಂತ ಸಂಭವಿಸಿದೆ.

ಪ್ರವಾಹದ ಭೀಕರತೆಗೆ ಕಣಿವೆಯೊಳಗಿನ ಪ್ರಮುಖ ಕಾಲ್ಸೇತುವೆಗಳು (Footbridges) ಕೊಚ್ಚಿಹೋಗಿವೆ ಮತ್ತು ವಸತಿ ಗೃಹಗಳು ಹಾನಿಗೊಳಗಾಗಿವೆ. ಸಿಲುಕಿಕೊಂಡಿದ್ದ ಸುಮಾರು 62 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು ಹೈಕರ್‌ಗಳನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಗಿದೆ. ಹಠಾತ್ ಪ್ರವಾಹವು ಬ್ರೈಟ್ ಏಂಜಲ್ ಕ್ಯಾನ್ಯನ್ ಮತ್ತು ಫ್ಯಾಂಟಮ್ ರಾಂಚ್ ಪ್ರದೇಶವನ್ನು ಅಪ್ಪಳಿಸಿತು. ದೊಡ್ಡ ಬಂಡೆಗಳು, ಲೋಹದ ರಚನೆಗಳು ಮತ್ತು ಇತರ ಭಗ್ನಾವಶೇಷಗಳು ಅದರ ಮೂಲಕ ಹರಿಯುವ ಕೊಲೊರಾಡೋ ನದಿಗೆ ನುಗ್ಗಿದವು ಎಂದು ರಾಷ್ಟ್ರೀಯ ಉದ್ಯಾನವನ ಸೇವೆ ತಿಳಿಸಿದೆ.

ವಿಡಿಯೋ ನೋಡಿ



ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಕೊಲೊರಾಡೋ ನದಿಗೆ ಹರಿಯುವ ಬ್ರೈಟ್ ಏಂಜೆಲ್ ಕ್ರೀಕ್‌ನಲ್ಲಿ ಹಠಾತ್ ಪ್ರವಾಹ ಪ್ರಾರಂಭವಾಯಿತು. ಧಾರಾಕಾರವಾಗಿ ಹರಿದ ನೀರು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಪಾದಚಾರಿ ಸೇತುವೆಗಳು ನಾಶವಾದವು. ಕಡಿದಾದ ಕಲ್ಲಿನ ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಸುಮಾರು ಅರ್ಧ ಇಂಚಿನಿಂದ 1 ಇಂಚಿನವರೆಗೆ (1 ಸೆಂಟಿಮೀಟರ್‌ನಿಂದ 2.5 ಸೆಂಟಿಮೀಟರ್‌ವರೆಗೆ) ಮಳೆಯಾಗಿದೆ ಎಂದು ಫ್ಲ್ಯಾಗ್‌ಸ್ಟಾಫ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಜಸ್ಟಿನ್ ಜಾನ್ಡ್ರೋ ತಿಳಿಸಿದ್ದಾರೆ.

ನೇಪಾಳ ಪ್ರವಾಹ: ತೇಲಿಬಂದ ಸೇಫ್‌ ಲಾಕರ್ ಒಡೆದು 93 ಲಕ್ಷ ರುಪಾಯಿ ದೋಚಿದ ಖದೀಮರು

ಸೋಮವಾರದವರೆಗೆ ಹೆಚ್ಚಿನ ಗುಡುಗು ಸಹಿತ ಮಳೆ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಭಾನುವಾರ ಬೆಳಗ್ಗೆಯ ಹೊತ್ತಿಗೆ, ಫ್ಯಾಂಟಮ್ ರಾಂಚ್‌ನಿಂದ 62 ಜನರನ್ನು ಸ್ಥಳಾಂತರಿಸಲಾಗಿದೆ. ಇದು ಐತಿಹಾಸಿಕ ಕ್ಯಾಂಟೀನ್ ಮತ್ತು ವಸತಿ ನಿಲಯಗಳನ್ನು ಹೊಂದಿದೆ. ಇತರರನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. , ಬ್ರೈಟ್ ಏಂಜಲ್ ಕ್ಯಾಂಪ್‌ಗ್ರೌಂಡ್, ಫ್ಯಾಂಟಮ್ ರಾಂಚ್ ಮತ್ತು ಉತ್ತರ ಕೈಬಾಬ್ ಹಾದಿಯ ಕೆಲವು ಭಾಗಗಳು ಸೇರಿದಂತೆ ಜನಪ್ರಿಯ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

Vishakha Bhat Heggar

View all posts by this author