ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಧನ ಟ್ಯಾಂಕರ್ ಸ್ಫೋಟ: 31 ಮಂದಿ ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯ

sparks massive fire in Egypt's Cairo: ಘಟನಾ ಸ್ಥಳಕ್ಕೆ 39 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದ್ದು, ಗಾಯಗೊಂಡ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Egypt Cairo

ನವದೆಹಲಿ, ನ.26: ಈಜಿಪ್ಟ್‌ನ ಕೈರೋದಲ್ಲಿ ಹೆದ್ದಾರಿಯೊಂದರ ಮೇಲೆ ಇಂಧನ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್‌ನಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ರಸ್ತೆ ಅಪಘಾತಗಳಲ್ಲಿ ಒಂದಾಗಿದೆ.

ಗೀಜಾ ಗವರ್ನರೇಟ್‌ನ ಇಂಬಾಬಾ ಪ್ರದೇಶದಲ್ಲಿರುವ ವರ್ರಾಕ್ ಜಿಲ್ಲೆಯ ಅಶಾರಾ ಸುರಂಗದಲ್ಲಿ, ಪೆಟ್ರೋಲಿಯಂ ಸಾಗಿಸುತ್ತಿದ್ದ ಇಂಧನ ಟ್ರಕ್ ಒಂದು ಪಲ್ಟಿಯಾದ ಪರಿಣಾಮ ಈ ಘಟನೆ ನಡೆಯಿತು.

ಈಜಿಪ್ಟ್ ಆರೋಗ್ಯ ಸಚಿವಾಲಯದ ಪ್ರಕಾರ, ಅಪಘಾತದಲ್ಲಿ ಮೃತಪಟ್ಟವರ ಪ್ರಾಥಮಿಕ ಸಂಖ್ಯೆ 30 ಎಂದು ದಾಖಲಾಗಿತ್ತು. ಆದರೆ, ಅಂತಿಮ ಮೌಲ್ಯಮಾಪನದ ನಂತರ, ಈಜಿಪ್ಟ್‌ನ ಆರೋಗ್ಯ ಮತ್ತು ಜನಸಂಖ್ಯಾ ಸಚಿವ ಡಾ. ಖಾಲಿದ್ ಅಬ್ದೆಲ್ ಘಫಾರ್ ಅವರು, ಮೃತರ ಸಂಖ್ಯೆ 31 ಎಂದು ತಿಳಿಸಿದರು. ಆರಂಭಿಕ ಹೇಳಿಕೆಗಳಲ್ಲಿ 25 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿತ್ತಾದರೂ, ನಂತರ ಆ ಸಂಖ್ಯೆಯನ್ನು 21 ಎಂದು ಪರಿಷ್ಕರಿಸಲಾಯಿತು.

Gururaj Gantihole Column: ನಕ್ಸಲ್‌ ಮುಕ್ತ, ಲಷ್ಕರ್‌ ಮುಕ್ತ: ಸಂಭ್ರಮಾಚರಣೆಗೆ ಯಾವ ಸೂತಕ ?

ಘಟನಾ ಸ್ಥಳಕ್ಕೆ 39 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದ್ದು, ಗಾಯಗೊಂಡ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.



ಗ್ರೇಟರ್ ಕೈರೋ ವ್ಯಾಪ್ತಿಯ ಗಿಜಾ ಗವರ್ನರೇಟ್‌ನ ಜನನಿಬಿಡ ವಾರಾಕ್ ಪ್ರದೇಶದ ಬಳಿಯ ರಿಂಗ್ ರೋಡ್ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಈಜಿಪ್ಟ್‌ನ ಸರ್ಕಾರಿ ಪತ್ರಿಕೆ ಅಲ್-ಅಹ್ರಾಮ್ ವರದಿಯ ಪ್ರಕಾರ, ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಚಲಿಸುತ್ತಿದ್ದಾಗ ಅದರ ಮುಂಭಾಗಕ್ಕೆ ಹೈ-ವೋಲ್ಟೇಜ್ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದೆ. ಇದರಿಂದ ಗಾಬರಿಗೊಂಡ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಟ್ಯಾಂಕರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ ಭಾರಿ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡು ಈ ಅನಾಹುತ ಸಂಭವಿಸಿದ್ದು, ಟ್ಯಾಂಕರ್‌ನಿಂದ ಸೋರಿಕೆಯಾದ ಇಂಧನಕ್ಕೆ ಬೆಂಕಿ ತಗುಲಿದ ಪರಿಣಾಮ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಸುಮಾರು 27ಕ್ಕೂ ಹೆಚ್ಚು ಕಾರುಗಳು ಮತ್ತು ಬೈಕ್‌ಗಳು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿವೆ.