ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳದಲ್ಲಿ ಭಾರೀ ಹಿಮಪಾತ; ಶೇ-ಫೋಕ್ಸುಂಡೋ ಸರೋವರದ ಬಳಿ ಸಿಲುಕಿದ 6 ಭಾರತೀಯರು

ನೇಪಾಳದಲ್ಲಿ ಭಾರೀ ಹಿಮಪಾತದಿಂದಾಗಿ ಆರು ಮಂದಿ ಭಾರತೀಯ ಪ್ರವಾಸಿಗರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. . ಇಬ್ಬರು ಮಹಿಳೆಯರು ಸೇರಿದಂತೆ ಆರು ಪ್ರವಾಸಿಗರು ಶನಿವಾರ ಮಧ್ಯಾಹ್ನ ಶೇ-ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಕಠ್ಮಂಡು: ನೇಪಾಳದಲ್ಲಿ (Nepal) ಭಾರೀ ಹಿಮಪಾತದಿಂದಾಗಿ (Snowfall) ಆರು ಮಂದಿ ಭಾರತೀಯ ಪ್ರವಾಸಿಗರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. . ಇಬ್ಬರು ಮಹಿಳೆಯರು ಸೇರಿದಂತೆ ಆರು ಪ್ರವಾಸಿಗರು ಶನಿವಾರ ಮಧ್ಯಾಹ್ನ ಶೇ-ಫೋಕ್ಸುಂಡೋ (Shey-Phoksundo Lake) ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಿಲುಕಿರುವ ಪ್ರವಾಸಿಗರನ್ನು ಮೌಮಿತಾ ಹಾಲ್ಡರ್, ಪಿಯಾಲಿ ಕೋಲೆ, ಜಜ್ಲಾ ತ್ರಿವೇದಿ ಕುಮಾರ್, ಆದಿತ್ಯ ಸಿಂಹ, ಡಿಪ್ಲಿನಾ ಬಿಸ್ವಾಸ್ ಮತ್ತು ರಾಜೇಶ್ ದೇ ಎಂದು ಡೊಲ್ಪಾ ಜಿಲ್ಲಾಡಳಿತ ಗುರುತಿಸಿದೆ. ಸ್ಥಳೀಯ ಭದ್ರತಾ ಸಿಬ್ಬಂದಿ ಹಾಗೂ ಅವರ ಜೊತೆಯಲ್ಲಿದ್ದ ನೇಪಾಳಿ ಮಾರ್ಗದರ್ಶಿ (ಗೈಡ್) ಹವಾಮಾನ ವೈಪರೀತ್ಯದ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ಪ್ರವಾಸಿಗರು ಮುಂದುವರಿದಿದ್ದರು ಎನ್ನಲಾಗಿದೆ.

ಇವರು ಶೇ-ಫೋಕ್ಸುಂಡೋ ಗ್ರಾಮೀಣ ಮುನ್ಸಿಪಾಲಿಟಿಯ 'ಧೋ' ಪ್ರದೇಶದಿಂದ ದೇಶದ ಅತ್ಯಂತ ಆಳವಾದ ಸರೋವರವಾದ ಫೋಕ್ಸುಂಡೋಗೆ ಮರಳುತ್ತಿದ್ದಾಗ ನುಮ್ಲಾ ಪಾಸ್ ಮತ್ತು ಬಾಗ್ಲಾ ಪಾಸ್ ಬೆಟ್ಟದ ಹಾದಿಗಳ ನಡುವೆ ಸಿಲುಕಿದ್ದಾರೆ. ಶನಿವಾರ ರಾತ್ರಿಯಿಂದಲೇ ಇವರೊಂದಿಗಿನ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಅಷ್ಟೇ ಅಲ್ಲದೇ ಭಾರೀ ಹಿಮಪಾತದ ನಡುವೆಯೂ ಮಾರ್ಗದರ್ಶಿಯನ್ನು ಬಿಟ್ಟು ಸರೋವರದ ಕಡೆಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರು ಸಿಲುಕಿರುವ ನಿಖರವಾದ ಜಾಗವನ್ನು ಅಧಿಕಾರಿಗಳು ಈಗಾಗಲೇ ಪತ್ತೆಹಚ್ಚಿದ್ದಾರೆ. ದಟ್ಟವಾದ ಹಿಮದ ನಡುವೆ ಸಿಲುಕಿರುವ ಇವರನ್ನು ಸುರಕ್ಷಿತವಾಗಿ ಕರೆತರಲು ನೇಪಾಳ ಸೇನೆಯ ವಿಶೇಷ ರಕ್ಷಣಾ ತಂಡವನ್ನು ನಿಯೋಜಿಸಲಾಗಿದ್ದು, ಸೇನಾ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡೊಲ್ಪಾ ಮುಖ್ಯ ಜಿಲ್ಲಾಧಿಕಾರಿ ಜೂನು ಧಾಕಲ್ ತಿಳಿಸಿದ್ದಾರೆ.

ಸಿಕ್ಕಿಂನಲ್ಲಿ ಭಾರೀ ಹಿಮಪಾತ; ಟ್ರಾಫಿಕ್‌ನಿಂದ ಜನ ಹೈರಾಣು, 2 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರ ರಕ್ಷಣೆ

ಶೇ-ಫೋಕ್ಸುಂಡೋ ಸರೋವರವು ನೇಪಾಳದ ಅತ್ಯಂತ ಆಳವಾದ ಮತ್ತು ಎರಡನೇ ಅತಿ ದೊಡ್ಡ ಸರೋವರವಾಗಿದೆ. ಇದರ ಗರಿಷ್ಠ ಆಳ ಸುಮಾರು 145 ಮೀಟರ್ ಇದೆ. ಈ ಸರೋವರವು ತನ್ನ ಗಾಢ ನೀಲಿ ಅಥವಾ ವೈಡೂರ್ಯದ ಬಣ್ಣಕ್ಕೆ ಹೆಸರುವಾಸಿಯಾಗಿದೆ. ಹವಾಮಾನ ಮತ್ತು ಸೂರ್ಯನ ಬೆಳಕಿಗೆ ತಕ್ಕಂತೆ ಇದರ ಬಣ್ಣ ಬದಲಾಗುತ್ತಿರುವಂತೆ ಭಾಸವಾಗುತ್ತದೆ.

Vishakha Bhat Heggar

View all posts by this author