ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹತ್ಯೆಯಾಗಿ 7 ವಾರ ಕಳೆದರೂ ಅಯತೊಲ್ಲಾ ಅಲಿ ಖಮೇನಿ ಅಂತ್ಯ ಸಂಸ್ಕಾರ ನಡೆದಿಲ್ಲ; ಕಾರಣವೇನು?

Ayatollah Ali Khamenei: ಸುಮಾರು ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಿ 7 ವಾರ ಕಳೆದಿದ್ದು, ಇನ್ನೂ ಅಂತ್ಯಕ್ರಿಯೆ ನೆರವೇರಿಲ್ಲ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಅಯತೊಲ್ಲಾ ಅಲಿ ಖಮೇನಿ (ಸಂಗ್ರಹ ಚಿತ್ರ)

ಟೆಹರಾನ್‌, ಏ. 19: ಸುಮಾರು ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರನ್ನು ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಿ 7 ವಾರ ಕಳೆದಿದ್ದು, ಇನ್ನೂ ಅಂತ್ಯಕ್ರಿಯೆ ನೆರವೇರಿಲ್ಲ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ಕುತೂಹಲ ಕೆರಳಿಸಿದ್ದು, ಸುಮಾರು 2 ತಿಂಗಳು ಕಳೆದರೂ ಅಯತೊಲ್ಲಾ ಅಲಿ ಖಮೇನಿ ಅವರ ಮೃತದೇಹವನ್ನು ಮಣ್ಣು ಮಾಡದಿರುವುದು ಯಾಕೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸುರಕ್ಷತೆಯ ಕಾರಣ ನೀಡಿ ಇನ್ನೂ ಅಯತೊಲ್ಲಾ ಅಲಿ ಖಮೇನಿ ಅವರ ಮೃತದೇಹವನ್ನು ಮಣ್ಣು ಮಾಡಿಲ್ಲ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಯಾಕಾಗಿ ವಿಳಂಬ?

ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಅನುಯಾಯಿಗಳು, ಸಾರ್ವಜನಿಕರು ಸೇರುವ ಸಾಧ್ಯತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜನರನ್ನು ಈಗ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಅಂತ್ಯಕ್ರಿಯೆಯನ್ನು ಮುಂದೂಡಿದ್ದಾರೆ. ಅಲ್ಲದೆ ಇಸ್ರೇಲ್‌ ದಾಳಿ ಮಾಡುವ ಸಾಧ್ಯತೆ ಮುಂದಿಟ್ಟು ಈ ನಿರ್ಧಾರಕ್ಕೆ ಬರಲಾಗಿದೆ. ಆಡಳಿತವು ಸದ್ಯ ಯಾವುದೇ ಅಪಾಯ ಎದುರಿಸಲು ಸಜ್ಜಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇರಾನ್‌ನ ಮೃತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ಧ್ವಂಸಗೊಳಿಸಿದ ಇಸ್ರೇಲ್‌

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್‌ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಇದು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ ಕಾರಣವಾಯಿತು. ಬಳಿಕ ಇರಾನ್‌ ಪ್ರತೀಕಾರದ ಪ್ರತಿಜ್ಞೆ ಕೈಗೊಂಡಿದ್ದು, ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ.

1989ರಲ್ಲಿ ಅಯತೊಲ್ಲಾ ರುಹೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯನ್ನು ನಡೆಸಿದಾಗ, ಲಕ್ಷಾಂತರ ಇರಾನ್‌ ನಾಗರಿಕರು ಟೆಹರಾನ್‌ನ ಬೀದಿಗಳಲ್ಲಿ ನೆರೆದಿದ್ದರು. ಸದ್ಯ ಪರಿಸ್ಥಿತಿ ಹದಗೆಟ್ಟಿದ್ದು, ಅಧಿಕಾರಿಗಳು ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿಧಿ ವಿಧಾನ ನೆರವೇರಿಸಲು ಮುಂದಾಗಿಲ್ಲ. ಸದ್ಯ ಅಮೆರಿಕ-ಇರಾನ್‌ ನಡುವಿನ ಕದನ ವಿರಾಮ ಬುಧವಾರ (ಏಪ್ರಿಲ್‌ 22) ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಇರಾನ್ ಸದ್ಯ ಕಟ್ಟೆಚ್ಚರದಲ್ಲಿದೆ.

ಇರಾನ್‌ನ ಅಧಿಕಾರಿಗಳು ಈಶಾನ್ಯ ಇರಾನ್‌ನಲ್ಲಿರುವ ಖಮೇನಿ ಅವರ ತವರು ಮಷಾದ್‌ನಲ್ಲಿ ಸಮಾಧಿ ನಿರ್ಮಿಸಲು ಮುಂದಾಗಿದ್ದಾರೆ. ಈ ನಗರವು ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಧಾರ್ಮಿಕ ಮಹತ್ವ ಹೊಂದಿರುವ ಪ್ರದೇಶದಲ್ಲಿ ಖಮೇನಿ ಅವರ ಸಮಾಧಿ ನಿರ್ಮಿಸುವುದು ಅತ್ಯಂತ ಸೂಕ್ತ ಎಂದ ಧಾರ್ಮಿಕ ಮುಖಂಡರೂ ಅಭಿಪ್ರಾಯಪಟ್ಟಿದ್ದಾರೆ.

ಖಮೇನಿ ಪುತ್ರ ಮೊಜ್ತಬಾ ಖಮೇನಿ ಇರಾನ್‌ನ ಹೊಸ ಸರ್ವೋಚ್ಚ ನಾಯಕ

ಇರಾನ್‌ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಆರಂಭದಲ್ಲಿ ಮಾರ್ಚ್ 4ರಿಂದ 3 ದಿನಗಳ ಸರ್ಕಾರಿ ಅಂತ್ಯಕ್ರಿಯೆ ಕಾರ್ಯ ನಡೆಸುವ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ನಂತರ ದೊಡ್ಡ ಪ್ರಮಾಣದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಯಿತು. ಏಪ್ರಿಲ್ 8ರಂದು ಸಹಿ ಹಾಕಲಾದ ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಅನಿಶ್ಚಿತತೆಯಿಂದ ಕೂಡಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author