Iran Israel War: ಇರಾನ್‌ನ ಮೃತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ಧ್ವಂಸಗೊಳಿಸಿದ ಇಸ್ರೇಲ್
ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಫೆಬ್ರವರಿ 28ರಂದು ಹೊಡೆದುರುಳಿಸಿದ್ದು, ಅವರು ಬಳಸುತ್ತಿದ್ದ ವಿಮಾನವನ್ನೂ ಧ್ವಂಸಗೊಳಿಸಲಾಗಿದೆ. ಆ ಮೂಲಕ ಮಹತ್ವದ ಮೇಲುಗೈ ಸಾಧಿಸಿದ್ದಾಗಿ ಇಸ್ರೇಲ್ ಹೇಳಿದೆ.
ಅಯತೊಲ್ಲಾ ಅಲಿ ಖಮೇನಿ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 16: ಸುಮಾರು ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರನ್ನು ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಫೆಬ್ರವರಿ 28ರಂದು ಹೊಡೆದುರುಳಿಸಿದ್ದು, ಅವರು ಬಲಸುತ್ತಿದ್ದ ವಿಮಾನವನ್ನೂ ಧ್ವಂಸಗೊಳಿಸಲಾಗಿದೆ (Iran Israel War). ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಈ ಬಗ್ಗೆ ಮಾಹಿತಿ ನೀಡಿ, ಇರಾನ್ ರಾಜಧಾನಿ ಟೆಹರಾನ್‌ನ ಮೆಹ್ರಾಬಾದ್ ಏರ್‌ಪೋರ್ಟ್ ಮೇಲೆ ದಾಳಿ ನಡೆಸಿ ಖಮೇನಿ ದೇಶದೊಳಗಿನ ಸಂಚಾರಕ್ಕೆ ಮತ್ತು ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಬಳಸುತ್ತಿದ್ದ ವಿಮಾನವನ್ನು ನಾಶಪಡಿಸಿಲಾಗಿದೆ ಎಂದಿದೆ.
ಎಕ್ಸ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಐಡಿಎಫ್, ತನ್ನ ವಾಯುಪಡೆಯು ಟೆಹರಾನ್ ವಿಮಾನ ನಿಲ್ದಾಣದಲ್ಲಿ ಖಮೇನಿ ಅವರ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಈ ವಿಮಾನವನ್ನು ಖಮೇನಿ, ಹಿರಿಯ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳು ಬಳಸುತ್ತಿದ್ದರು ಎಂದು ವಿವರಿಸಿದೆ.
ವಿಮಾನವನ್ನು ನಾಶಪಡಿಸಿದ ಹಿನ್ನೆಲೆಯಲ್ಲಿ ಇರಾನ್‌ಗೆ ಕಾರ್ಯಾಚರಣೆಯನ್ನು ಸಂಘಟಿಸಲು, ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಲು ಕಷ್ಟವಾಗಲಿದೆ ಎಂದು ಐಡಿಎಫ್ ಪ್ರತಿಪಾದಿಸಿದೆ. ಇರಾನ್ ಮಿಲಿಟರಿ ಪಡೆಗಳು ಬಳಸುವ ಸಂಪನ್ಮೂಲಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮುಂದುವರಿಸಲಿದೆ ಎಂದೂ ತಿಳಿಸಿದೆ.
ಇಸ್ರೇಲ್ ಹಂಚಿಕೊಂಡ ಎಕ್ಸ್ ಪೋಸ್ಟ್:
חיל האוויר השמיד את מטוסו של מנהיג משטר הטרור האיראני בשדה התעופה ״מהאראבד״ שבטהרן
— צבא ההגנה לישראל (@idfonline) March 16, 2026
צה״ל השמיד הלילה באופן ממוקד את המטוס של מנהיג משטר הטרור האיראני בשדה התעופה ״מהאראבד״ שבטהרן.
המטוס שימש את עלי ח׳אמנהאי, מנהיג משטר הטרור האיראני, בכירים נוספים ממשטר הטרור וגורמים בצבא… pic.twitter.com/pLximHkbJV
ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ
ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಐಡಿಎಫ್ ವರದಿ ಮಾಡಿದೆ. ಬೆದರಿಕೆಯನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಜತೆಗೆ ನಿವಾಸಿಗಳಿಗೆ ಮೊಬೈಲ್ ಫೋನ್‌ಗಳಿಗೆ ತುರ್ತು ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. ʼʼಸುರಕ್ಷತಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಜೀವ ಉಳಿಸಬಹುದುʼʼ ಎಂದು ಒತ್ತಿ ಹೇಳಿದ ಅಧಿಕಾರಿಗಳು, ʼʼಎಚ್ಚರಿಕೆ ಸಂದೇಶ ಬಂದ ಕೂಡಲೇ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮತ್ತು ಮುಂದಿನ ಸೂಚನೆ ಬರುವವರೆಗೂ ಅಲ್ಲಿಯೇ ಇರಬೇಕುʼʼ ಎಂದು ಸೂಚಿಸಿದರು.
ಖಮೇನಿ ಹತ್ಯೆಗೆ ತಿರುಗೇಟು ನೀಡಲು ಇರಾನ್ ಸಜ್ಜು; ಮಸೀದಿ ಮೇಲೆ ಹಾರಾಡಿತು ಕೆಂಪು ಧ್ವಜ
ಅದಾಗ್ಯೂ ವಿಮಾನ ನಾಶವಾದ ಬಗ್ಗೆ ಇರಾನಿನ ಅಧಿಕಾರಿಗಳು ಯಾವುದೇ ದೃಢೀಕರಣ ನೀಡಿಲ್ಲ. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದ್ದು, ಈ ಪ್ರದೇಶದಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.
ಇರಾನಿನ ಪ್ರಮುಖ ವಿಮಾನ ನಿಲ್ದಾಣ
ಮೆಹ್ರಬಾದ್ ಟೆಹರಾನ್ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿದ್ದು, ದೇಶೀಯ ವಿಮಾನ ಸೇವೆ ಸಲ್ಲಿಸುತ್ತಿದೆ. ಇದು ಅತ್ಯಂತ ಜನನಿಬಿಡ ನಾಗರಿಕ ವಿಮಾನ ನಿಲ್ದಾಣವಾಗಿರುವುದರ ಜತೆಗೆ, ವಾಯುಪಡೆಗೂ ಬಳಕೆಯಾಗುತ್ತಿದೆ.
ವೈಮಾನಿಕ ದಾಳಿಯ ಮೂಲಕ ಹತ್ಯೆ
ವೈಮಾನಿಕ ದಾಳಿ ಮೂಲಕ ಟೆಹರಾನ್‌ನಲ್ಲಿದ್ದ ಖಮೇನಿ ಅವರನ್ನು ಫೆಬ್ರವರಿ 28ರಂದು ಹತ್ಯೆ ಮಾಡಲಾಗಿದೆ. ಇಸ್ರೇಲ್ ಮತ್ತು ಅಮೆರಿಕ ಆರಂಭಿಸಿದ ಜಂಟಿ ಕಾರ್ಯಾಚರಣೆಯ ಮೊದಲ ದಿನವೇ ಖಮೇನಿ ಹತ್ಯೆ ನಡೆದಿದೆ. ಇದರಿಂದ ಮಧ್ಯಪ್ರಾಚ್ಯ ಸಂಘರ್ಷ ಪೀಡಿತವಾಗಿದ್ದು, ಇರಾನ್ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿದ್ದು, ಇಂಧನ, ಎಲ್‌ಪಿಜಿ ಸಾಗಾಟಕ್ಕೆ ಬ್ರೇಕ್ ಬಿದ್ದಿದೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.