ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'AKKA' Silver Jubilee Celebration: ಸಾವಿರಾರು ಕನ್ನಡಿಗರ ಸಂಗಮ: ಸಂಭ್ರಮ-ಸಡಗರದ ʼಅಕ್ಕʼ ರಜತ ಮಹೋತ್ಸವ

ಅಕ್ಕ ಅಧ್ಯಕ್ಷ ಮಧು ರಂಗಯ್ಯ ಹಾಗೂ ಸಮ್ಮೇಳನದ ಅಧ್ಯಕ್ಷ ಅಮರನಾಥ ಗೌಡ ಅವರ ನೇತೃತ್ವ ದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ನೂರಾರು ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅಕ್ಕ ಸಂಸ್ಥೆಯ 25 ವರ್ಷಗಳ ಪಯಣದ ಐತಿಹಾಸಿಕ ಸಂದರ್ಭದಲ್ಲಿ ವಿಶ್ವದ ಕನ್ನಡಿಗರನ್ನು ಒಂದೇ ವೇದಿಕೆಯಡಿ ಸೇರಿಸಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಹಿರಿಮೆ ಜಾಗತಿಕ ಮಟ್ಟದಲ್ಲಿ ಸಾರುವುದು ಸಮ್ಮೇಳನದ ಪ್ರಮುಖ ಆಶಯವಾಗಿದೆ.

ಬೆಂಕಿ ಬಸಣ್ಣ, ಫಿಲಡೆಲ್ಫಿಯಾ

ಮೆರವಣಿಗೆ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗು

‘ಅಮೆರಿಕ ಕನ್ನಡ ಕೂಟ’ಗಳ ಒಕ್ಕೂಟದ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದ ಫಿಲಡೆಲ್ಫಿಯಾ ಸಾಕ್ಷಿಯಾಗಿದ್ದು, ಮೂರು ದಿನಗಳ ಕನ್ನಡ ಜಾತ್ರೆಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿ, ಉದ್ಯಮ ಮತ್ತು ಪರಂಪರೆಯ ವೈಭವ ಅನಾವರಣ ಗೊಂಡಿದೆ. ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಅಮೆರಿಕದ ವಿವಿಧ ರಾಜ್ಯಗಳು, ಕೆನಡಾ, ಕರ್ನಾಟಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಆಗಮಿಸಿದ್ದಾರೆ.

ಅಕ್ಕ ಅಧ್ಯಕ್ಷ ಮಧು ರಂಗಯ್ಯ ಹಾಗೂ ಸಮ್ಮೇಳನದ ಅಧ್ಯಕ್ಷ ಅಮರನಾಥ ಗೌಡ ಅವರ ನೇತೃತ್ವ ದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ನೂರಾರು ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಸ್ವಯಂಸೇವಕರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅಕ್ಕ ಸಂಸ್ಥೆಯ 25 ವರ್ಷಗಳ ಪಯಣದ ಐತಿಹಾಸಿಕ ಸಂದರ್ಭದಲ್ಲಿ ವಿಶ್ವದ ಕನ್ನಡಿಗರನ್ನು ಒಂದೇ ವೇದಿಕೆಯಡಿ ಸೇರಿಸಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಹಿರಿಮೆ ಜಾಗತಿಕ ಮಟ್ಟದಲ್ಲಿ ಸಾರುವುದು ಸಮ್ಮೇಳನದ ಪ್ರಮುಖ ಆಶಯವಾಗಿದೆ.

ಇದನ್ನೂ ಓದಿ: Dr Murli Mohan Chuntaru Column: ಶಿಕ್ಷಣ ಸೊರಗದಿರಲಿ ಶಿಕ್ಷಕ ಬಲಿಷ್ಠನಾಗಲಿ

ವೈವಿಧ್ಯಮಯ ಕಾರ್ಯಕ್ರಮಗಳು: ಸೆ.4ರ ಸಂಜೆ ಸಂಜೆ ಗಣೇಶ ಪೂಜೆ ಹಾಗೂ ಕೃಷ್ಣ ಜನ್ಮಾ ಷ್ಟಮಿ ಕಾರ್ಯಕ್ರಮಗಳೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ವಿದ್ಯಾಭೂಷಣ ಮತ್ತು ಮೇಧಾ ವಿದ್ಯಾಭೂಷಣ ಅವರ ಭಕ್ತಿ ಸಂಗೀತ, ಡಾ.ಸುಚೇತನ್ ರಂಗಸ್ವಾಮಿ ಹಾಗೂ ಸಿಂಚನ್ ದೀಕ್ಷಿತ್ ಅವರ ಸ್ವರಲಹರಿ ಸೇರಿದಂತೆ ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಿರುಚಿತ್ರೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ಮೊದಲ ದಿನವೇ ಕನ್ನಡ ಹಬ್ಬದ ವಾತಾವರಣ ನಿರ್ಮಿಸಿದವು.

ಡಿಕೆಶಿಯಿಂದ ಸಮ್ಮೇಳನ ಉದ್ಘಾಟನೆ: ಶನಿವಾರ ನಡೆದ ಭವ್ಯ ಕನ್ನಡ ಮೆರವಣಿಗೆ ಸಮ್ಮೇಳನದ ಪ್ರಮುಖ ಆಕರ್ಷಣೆಯಾಯಿತು. ಅಮೆರಿಕದ ಸುಮಾರು 40-50 ಕನ್ನಡ ಕೂಟಗಳ ಪ್ರತಿನಿಧಿಗಳು ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ, ಕೆಂಪು-ಹಳದಿ ಬಾವುಟಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ಕರ್ನಾಟಕದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ಮತ್ತು ಪರಂಪರೆ ಪ್ರತಿಬಿಂಬಿಸಿದ ಮೆರವಣಿಗೆ ಬಳಿಕ ನಡೆದ ವೀರಗಾಸೆ ಪ್ರದರ್ಶನವೂ ಜನಮನ ಸೆಳೆಯಿತು. ನಂತರ ನಡೆದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಕಾನರೆ ಮೂಲಕ ಭಾಗವಹಿಸಿ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು.

philadelphia2 ok

ವಿಶ್ವದ ವಿವಿಧೆಡೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುತ್ತಿರುವ ಅನಿವಾಸಿ ಕನ್ನಡಿಗರ ಕೊಡುಗೆ ಯನ್ನು ಸಿಎಂ ಡಿಕೆಶಿ ಶ್ಲಾಘಿಸಿದರು. ಉದ್ಘಾಟನಾ ಸಮಾರಂಭದಲ್ಲಿ ತರಳ ಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾ ಚಾರ್ಯ ಮಹಾಸ್ವಾಮೀಜಿ, ಆದಿಚುಂಚನ ಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಲಾ ನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅಮೆರಿಕದ ಮಾಜಿ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

philadelphia3 lead

ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ರಸಸಂಜೆಯು ಸಮ್ಮೇಳನದ ಮತ್ತೊಂದು ಪ್ರಮುಖ ಆಕರ್ಷಣೆಯಾಯಿತು. ಜನಪ್ರಿಯ ಕನ್ನಡ ಗೀತೆಗಳ ಮೂಲಕ ಸಭಿಕರನ್ನು ರಂಜಿಸಿದರು. ಸಾವಿರಾರು ಕನ್ನಡಿಗರು ಹಾಡಿಗೆ ಹೆಜ್ಜೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು, ಸಂಗೀತ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತವಾಯಿತು.

ಮಹಿಳಾ ವೇದಿಕೆಯಲ್ಲಿ ಗೋಷ್ಠಿ-ಚರ್ಚೆ

ಸಾಹಿತ್ಯ ಗೋಷ್ಠಿ, ಮಹಿಳಾ ವೇದಿಕೆ, ಯುವಜನ ಕಾರ್ಯಕ್ರಮ, ಆರೋಗ್ಯ ಮತ್ತು ಸಾಮಾಜಿಕ ವಿಚಾರಗಳ ಚರ್ಚೆ, ಉದ್ಯಮ ಹಾಗೂ ವೃತ್ತಿಪರ ಕ್ಷೇತ್ರದ ಕಾರ್ಯಕ್ರಮ ಮತ್ತು ನೃತ್ಯ-ಸಂಗೀತ ಪ್ರದರ್ಶನಗಳು ಸಮ್ಮೇಳನಕ್ಕೆ ವೈವಿಧ್ಯಮಯ ಮೆರುಗು ನೀಡಿದವು. ಮಹಿಳಾ ವೇದಿಕೆಯಲ್ಲಿ ನಾಯ ಕತ್ವ, ಆರೋಗ್ಯ ಹಾಗೂ ಉದ್ಯಮಶೀಲತೆಯ ಕುರಿತು ಚರ್ಚೆಗಳು ನಡೆದರೆ, ಯುವ ವೇದಿಕೆಯ ಕಾರ್ಯಕ್ರಮಗಳು ಅಮೆರಿಕದಲ್ಲಿ ಬೆಳೆದ ಹೊಸ ಪೀಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವ ಪ್ರಯತ್ನಕ್ಕೆ ಸಾಕ್ಷಿಯಾದವು.

image

ಅಕ್ಕ ಸಂಸ್ಥೆಯ 25 ವರ್ಷಗಳ ಪಯಣದ ರಜತ ಮಹೋತ್ಸವವು ವಿಶ್ವದ ವಿವಿಧೆಡೆ ನೆಲೆಸಿರುವ ಕನ್ನಡಿ ಗರನ್ನು ಒಂದೇ ವೇದಿಕೆ ಯಲ್ಲಿ ಒಗ್ಗೂಡಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಜಾಗತಿಕ ಸಂಭ್ರಮವಾಗಿ ಮೂಡಿಬಂದಿದೆ. ಫಿಲಡೆಲ್ಫಿಯಾದಲ್ಲಿ ರಾರಾಜಿಸುತ್ತಿರುವ ಕೆಂಪು-ಹಳದಿ ಬಾವುಟ ಗಳು, ಮೊಳಗುತ್ತಿರುವ ಕನ್ನಡದ ಮಾತು- ಹಾಡುಗಳು ಹಾಗೂ ಸಾವಿರಾರು ಕನ್ನಡಿಗರ ಸಂಭ್ರಮ ಸಮ್ಮೇಳನ ಅವಿಸ್ಮರಣೀಯ ಕನ್ನಡ ಹಬ್ಬವನ್ನಾಗಿಸಿವೆ.

- ಬೆಂಕಿ ಬಸಣ್ಣ, ನ್ಯೂಯಾರ್ಕ್