ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಗ್ಗ ಜೋಡಿಸಲು ಮರೆತ ಸಿಬ್ಬಂದಿ; ರೋಪ್ ಜಂಪಿಂಗ್‌ನಿಂದ ಜಿಗಿದ 21 ವರ್ಷದ ಯುವತಿ ಸಾವು: ಅವಘಡದ ವಿಡಿಯೊ ವೈರಲ್‌

Rope Jumping Death: ರೋಪ್ ಜಂಪಿಂಗ್ ವೇಳೆ ಆಯೋಜಕರು ಸುರಕ್ಷತಾ ಹಾರ್ನೆಸ್ ಅನ್ನು ಮುಖ್ಯ ಹಗ್ಗಕ್ಕೆ ಸರಿಯಾಗಿ ಜೋಡಿಸಲು ಮರೆತಿದ್ದರಿಂದ ಕಳುಹಿಸಿದ್ದರಿಂದ ಸುಮಾರು 40 ಮೀಟರ್ (130 ಅಡಿ) ಎತ್ತರದಿಂದ ಕೆಳಗೆ ಬಿದ್ದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಬ್ರೆಜಿಲ್‌ನ ಸಾಂಪೌಲೊ ರಾಜ್ಯದ ಲಿಮೈರಾ ನಗರದಲ್ಲಿ ದುರ್ಘಟನೆ ನಡೆದಿದೆ.

ರೋಪ್ ಜಂಪಿಂಗ್‌ನಿಂದ ಜಿಗಿದ 21 ವರ್ಷದ ಯುವತಿ ದುರ್ಮರಣ

ಬ್ರಸೀಲಿಯಾ, ಜೂ. 14: ರೋಪ್ ಜಂಪಿಂಗ್ ಸಾಹಸ ಚಟುವಟಿಕೆಯ ವೇಳೆ 21 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ಬ್ರೆಜಿಲ್‌ನ (Brazil) ಸಾಂಪೌಲೊ ರಾಜ್ಯದ ಲಿಮೈರಾ ನಗರದಲ್ಲಿ ನಡೆದಿದೆ. ಮಾರಿಯಾ ಎಡುವಾರ್ಡಾ ರೋಡ್ರಿಗ್ಸ್ ಡಿ ಫ್ರೈಟಾಸ್ ಮೃತ ಯುವತಿ. ರೋಪ್ ಜಂಪಿಂಗ್ (Rope Jumping) ವೇಳೆ ಆಯೋಜಕರು ಅವರ ಸುರಕ್ಷತಾ ಹಾರ್ನೆಸ್ ಅನ್ನು ಮುಖ್ಯ ಹಗ್ಗಕ್ಕೆ ಸರಿಯಾಗಿ ಜೋಡಿಸದೇ ಕಳುಹಿಸಿದ್ದರಿಂದ ಸುಮಾರು 40 ಮೀಟರ್ (130 ಅಡಿ) ಎತ್ತರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಆರಂಭದಲ್ಲಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅವರಲ್ಲಿ ಮೂವರನ್ನು ಸಂಭಾವ್ಯ ಪರಿಣಾಮಗಳ ಅರಿವಿದ್ದರೂ ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದರು ಎಂಬ ಶಂಕೆಯ ಮೇರೆಗೆ ಮಾನವ ಹತ್ಯೆ ಆರೋಪದಡಿ ಅಧಿಕೃತವಾಗಿ ಬಂಧಿಸಿದರು. ಈ ಮಾರಣಾಂತಿಕ ಘಟನೆ, ಸೂಕ್ತ ನಿರ್ವಹಣೆ ಇಲ್ಲದೆ ನಡೆಸಲಾಗುತ್ತಿರುವ ಸಾಹಸ ಕ್ರೀಡೆಗಳು ಮತ್ತು ಅತಿ ಅಪಾಯಕಾರಿ ಚಟುವಟಿಕೆಗಳ ಸುರಕ್ಷತಾ ಮಾನದಂಡಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.

ಇಲ್ಲಿದೆ ವಿಡಿಯೊ:



ಎಂಟ್ರೆ ಕಾರ್ಡಾಸ್ ಎಂಬ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಕಂಪನಿಗೆ ಸೇರಿದ ಸಾಹಸ ಚಟುವಟಿಕೆಯ ತಾಣದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೈರಲ್‌ ವಿಡಿಯೊದಲ್ಲಿ ಸಿಬ್ಬಂದಿ ಫ್ರೀಟಾಸ್‌ ಅವರನ್ನು ಜಂಪಿಂಗ್ ಮಾಡಲು ಸೇತುವೆಯತ್ತ ಕರೆದೊಯ್ಯುತ್ತಿರುವುದನ್ನು ನೋಡಬಹುದು. ಹಗ್ಗ ವ್ಯವಸ್ಥೆಯನ್ನು ಜೋಡಿಸಲಾಗಿದೆಯೇ ಎಂದು ಪರಿಶೀಲಿಸದೆ ನಿರ್ವಾಹಕರು ಆಕೆಯನ್ನು ತಳ್ಳಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಳುಗಿದ 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ದೋಣಿ

ಯುವತಿಯು ಅನಿಯಂತ್ರಿತವಾಗಿ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದವರು ತಕ್ಷಣ ಜೋರಾಗಿ ಕೂಗಿದರು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ತೀವ್ರವಾದ ಆಘಾತದಿಂದಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ದುರಂತದ ನಂತರ ಇಬ್ಬರು ಸಂಘಟಕರು ತಪ್ಪಿಸಿಕೊಂಡು ಓಡಿ ಹೋದರು. ಅವರಿಗಾಗಿ ಹುಡುಕಾಟ ನಡೆಸಲಾಯಿತು. ತಪ್ಪಿಸಿಕೊಂಡ ಸಿಬ್ಬಂದಿಯನ್ನು ಪತ್ತೆಹಚ್ಚಲು ರಾಜ್ಯ ಪೊಲೀಸರು ಮಿಲಿಟರಿ ಪೊಲೀಸ್ ಹೆಲಿಕಾಪ್ಟರ್ ಅನ್ನು ನಿಯೋಜಿಸಿದ್ದರು.

ಆರಂಭದಲ್ಲಿ ಈವೆಂಟ್ ಕಂಪನಿಗೆ ಸಂಬಂಧಿಸಿದ ಆರು ವ್ಯಕ್ತಿಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದರು. ನಂತರ ಬಂಧಿತರಲ್ಲಿ ಮೂವರನ್ನು ಬಿಡುಗಡೆ ಮಾಡಿದರು. 27, 32 ಮತ್ತು 47 ವರ್ಷ ವಯಸ್ಸಿನ ಉಳಿದ ಮೂವರು ವಿರುದ್ಧ ಪ್ರಕರಣ ದಾಖಲಿಸಿದರು. ಬಂಧಿತ ಶಂಕಿತರಲ್ಲಿ ಒಬ್ಬರು ಪ್ರಮಾಣೀಕೃತ ನಾಗರಿಕ ಅಗ್ನಿಶಾಮಕ ದಳದವರಾಗಿದ್ದರೆ, ಉಳಿದ ಇಬ್ಬರು ಜಂಪ್ ಅಸಿಸ್ಟೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.