ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೆನ್‌ ಜಿ ದಂಗೆ ಬಳಿಕ ನೇಪಾಳದ 275 ಸ್ಥಾನಗಳಿಗೆ ಇಂದು ಮತದಾನ

ಜೆನ್‌ ಜಿ ದಂಗೆಯ ಬಳಿಕ ಮೊದಲ ಬಾರಿಗೆ ನೇಪಾಳದಲ್ಲಿ ಗುರುವಾರ ಮತದಾನ ಪ್ರಾರಂಭವಾಗಿದೆ. ಒಟ್ಟು 275 ಸ್ಥಾನಗಳಿಗೆ 65 ರಾಜಕೀಯ ಪಕ್ಷಗಳು ಕಣದಲ್ಲಿದ್ದು, 18.9 ಮಿಲಿಯನ್ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ನೇಪಾಳದ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ಅಂಶಗಳು ಇಂತಿವೆ.

ಸಂಗ್ರಹ ಚಿತ್ರ

ನೇಪಾಳ: ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಜೆನ್‌ ಜಿ ದಂಗೆ (Gen Z coup) ಬಳಿಕ ಬಳಿಕ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ (Nepal election 2026) ನಡೆಯುತ್ತಿದೆ. ಇದಕ್ಕಾಗಿ ಗುರುವಾರ ಮತದಾನ (Nepal votes) ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 275 ಸ್ಥಾನಗಳಿಗೆ 65 ರಾಜಕೀಯ ಪಕ್ಷಗಳು ಕಣದಲ್ಲಿದ್ದು, 18.9 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಉನ್ನತ ಹುದ್ದೆಗೆ ಮೂವರು ಮುಂಚೂಣಿಯಲ್ಲಿದ್ದು, ಅವರಲ್ಲಿ ರ‍್ಯಾಪರ್ ಆಗಿರುವ ರಾಜಕಾರಣಿ ಬಾಲೇಂದ್ರ ಶಾ (Balendra Shah) ಅವರನ್ನು ಪ್ರಮುಖರಾಗಿದ್ದಾರೆ.

2025ರ ಸೆಪ್ಟೆಂಬರ್ ತಿಂಗಳಲ್ಲಿ ಜನರಲ್ ಝಡ್ ನೇತೃತ್ವದಲ್ಲಿ ನಡೆದ ಬೃಹತ್ ದಂಗೆಯ ಪರಿಣಾಮ ಕೆಪಿ ಶರ್ಮಾ ಓಲಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಇದರ ಬಳಿಕ ಇದೀಗ ನೇಪಾಳವು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ.

ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಶಾಂತಿ ನೇಪಾಳದ ಗುರುತು. ಮತದಾನವು ದೇಶದ ಸ್ಥಿರತೆ ಮತ್ತು ಸಮೃದ್ಧಿಯನ್ನು ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದರು.

Iran Israel War: ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ನೇಪಾಳ ಮತದಾನದ ಪ್ರಮುಖ ಅಂಶಗಳು

ಮತದಾನದ ಸಮಯ

ನೇಪಾಳದ ಪ್ರತಿನಿಧಿ ಸಭೆ 275 ಸದಸ್ಯರ ಬಲವನ್ನು ಹೊಂದಿರುತ್ತದೆ. ಇದಕ್ಕಾಗಿ ಗುರುವಾರ ಸ್ಥಳೀಯ ಸಮಯ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆಗಳು ದೇಶಾದ್ಯಂತ ನಡೆಯಲಿದೆ.

ಮತದಾರರು

ನೇಪಾಳದ ಮುಂದಿನ ಸರ್ಕಾರವನ್ನು ನಿರ್ಧರಿಸಲು ದೇಶಾದ್ಯಂತ ಇರುವ ಒಟ್ಟು 18.9 ಕೋಟಿ ಅರ್ಹ ಮತದಾರರು ರಾಷ್ಟ್ರೀಯ ಮತದಾನದಲ್ಲಿ ಭಾಗವಹಿಸಲಿದ್ದಾರೆ.

ಸ್ಥಾನಗಳ ನಿರ್ಧಾರ

275 ಸಂಸತ್ ಸ್ಥಾನಗಲ್ಲಿ 165 ಸದಸ್ಯರನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಉಳಿದ 110 ಸ್ಥಾನಗಳನ್ನು ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯನ್ನು ಬಳಸಿಕೊಂಡು ಹಂಚಲಾಗುತ್ತದೆ.

ಫಲಿತಾಂಶ

ಮತದಾನ ಪ್ರಕ್ರಿಯೆ ಮುಗಿದ ಮೇಲೆ ಮತಪೆಟ್ಟಿಗೆಗಳನ್ನು ಸಂಗ್ರಹಿಸಿದ 24 ಗಂಟೆಗಳ ಒಳಗೆ ನೇರ ಮತದಾನದ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ. ಇದಕ್ಕಾಗಿ ಚುನಾವಣಾ ಅಧಿಕಾರಿಗಳು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಅನುಪಾತದ ಫಲಿತಾಂಶಗಳು ಒಂದು ಅಥವಾ ಎರಡು ಹೆಚ್ಚುವರಿ ದಿನಗಳನ್ನು ತೆಗೆದುಕೊಳ್ಳಲಿದೆ.

ಹೊಸ ಮತದಾರರು

ಜನರಲ್ ಝಡ್ ಪ್ರತಿಭಟನೆಗಳ ಬಳಿಕೆ ಸುಮಾರು ಒಂದು ಕೋಟಿ ಹೊಸ ಮತದಾರರನ್ನು, ಹೆಚ್ಚಾಗಿ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

ಪ್ರಮುಖ ರಾಜಕೀಯ ಸ್ಪರ್ಧಿಗಳು

ಒಟ್ಟು 65 ರಾಜಕೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದು, ಉನ್ನತ ಹುದ್ದೆಗೆ ಬಾಲೇಂದ್ರ ಶಾ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ. ಬಳಿಕ ಗಗನ್ ಥಾಪಾ ಗುರುತಿಸಿಕೊಂಡಿದ್ದು, ಇವರು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ನೇಪಾಳಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಮಾಜಿ ಪ್ರಧಾನಿ ಖಡ್ಗ ಪ್ರಸಾದ್ ಓಲಿ ಅವರ ಸರ್ಕಾರ ಉರುಳಿದ ಮೇಲೆ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದು, ಇವರ ಪಕ್ಷದಿಂದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಕಣದಲ್ಲಿದ್ದಾರೆ.

ಮತದಾನದ ಮೇಲೆ ಬೀರುವ ಪ್ರಭಾವ ಅಂಶಗಳು

ಭ್ರಷ್ಟಾಚಾರ, ನಿರುದ್ಯೋಗ, ಬಡತನ ದೇಶದ ಮತದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ಇದರೊಂದಿಗೆ ವ್ಯಾಪಾರ ಪಾಲುದಾರರಾದ ನೆರೆಯ ಭಾರತ ಮತ್ತು ಚೀನಾದೊಂದಿಗಿನ ಸಂಬಂಧಗಳು ಕೂಡ ಇಲ್ಲಿನ ಮತದಾನದ ಮೇಲೆ ಪರಿಣಾಮ ಬೀರುತ್ತದೆ.

ಪ್ರಚಾರ ನಿಯಮ

ಫೆಬ್ರವರಿ 16 ರಿಂದ ಮಾರ್ಚ್ 2 ರವರೆಗೆ ಇಲ್ಲಿ ಚುನಾವಣಾ ಪ್ರಚಾರ ಕಾರ್ಯಗಳನ್ನು ನಡೆಸಲಾಗಿದ್ದು, ಬಳಿಕ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಮತದಾನದ ಮೊದಲು ಅಭಿಪ್ರಾಯ ಸಂಗ್ರಹದ ಫಲಿತಾಂಶಗಳನ್ನು ಪ್ರಕಟಿಸದಂತೆ ಚುನಾವಣಾ ಆಯೋಗವು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ದೇಶದ ಶಾಂತಿಗೆ ಭಂಗ ತರುವ ತಂತ್ರಜ್ಞಾನದ ದುರುಪಯೋಗದ ವಿರುದ್ಧವು ಆಯೋಗ ಕಣ್ಣಿಟ್ಟಿದೆ.

ಬಿಗಿ ಭದ್ರತಾ ವ್ಯವಸ್ಥೆಗಳು

ದೇಶಾದ್ಯಂತ 80,000 ನೇಪಾಳ ಸೇನಾ ಅಧಿಕಾರಿಗಳು ಸೇರಿದಂತೆ ಸುಮಾರು 3,30,000 ಭದ್ರತಾ ಸಿಬ್ಬಂದಿಯನ್ನು ಮತದಾನದ ಭದ್ರತಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಅಧಿಕಾರಿಗಳು ವೈಮಾನಿಕ ಗಸ್ತು, ಕಾವಲು ಮತಗಟ್ಟೆಗಳು ಮತ್ತು ಮತಪೆಟ್ಟಿಗೆಗಳ ಸಂರಕ್ಷಿತ ಸಾಗಣೆಯೊಂದಿಗೆ ಮೂರು ಹಂತದ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ.

Bidar news: ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಭಾರಿ ಪ್ರತಿಭಟನೆ, ಠಾಣೆಗೆ ಮುತ್ತಿಗೆ

ವಿಶೇಷ ಕ್ರಮಗಳು

ನೇಪಾಳದಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಮೂರು ದಿನಗಳು ಅಂದರೆ ಮಾರ್ಚ್ 4 ರಿಂದ ಮಾರ್ಚ್ 6 ರವರೆಗೆ ಸಾರ್ವಜನಿಕ ರಜಾದಿನವನ್ನು ಘೋಷಿಸಲಾಗಿದೆ. ಭಾರತ ಮತ್ತು ನೇಪಾಳ ಗಡಿಯನ್ನು ಮಾರ್ಚ್ 2 ರ ಮಧ್ಯರಾತ್ರಿಯಿಂದ ಮಾರ್ಚ್ 5 ರ ಮಧ್ಯರಾತ್ರಿಯವರೆಗೆ ಮುಚ್ಚಲಾಗಿದೆ. ಮತದಾನಕ್ಕೆ ಏಳು ದಿನಗಳ ಮೊದಲು ಸರ್ಕಾರವು ದೇಶಾದ್ಯಂತ ಮದ್ಯಪಾನವನ್ನು ನಿಷೇಧಿಸಿದೆ. ಅಂತಿಮ ಫಲಿತಾಂಶಗಳು ಪ್ರಕಟವಾಗುವವರೆಗೆ ಈ ನಿಷೇಧ ಮುಂದುವರಿಯುತ್ತದೆ.

ವಿದ್ಯಾ ಇರ್ವತ್ತೂರು

View all posts by this author