ವಾಷಿಂಗ್ಟನ್: ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಸುಂಕ ಬೆದರಿಕೆ (tariffs threat) ಒಡ್ಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಇದೀಗ ಫ್ರಾನ್ಸ್ ಗೆ (france) ಭಾರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ಶಾಂತಿ ಮಂಡಳಿಗೆ ಸೇರಲು ಫ್ರಾನ್ಸ್ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಫ್ರೆಂಚ್ ವೈನ್ ಮತ್ತು ಷಾಂಪೇನ್ (French wine and champagne) ಮೇಲೆ ಶೇ. 200ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಈ ಕುರಿತು ಟ್ರೂತ್ ಸೋಶಿಯಲ್ ನಲ್ಲಿ ಡೊನಾಲ್ಡ್ ಟ್ರಂಪ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಡೆನ್ಮಾರ್ಕ್‌ನ ಭಾಗವಾಗಿರುವ ಆರ್ಕ್ಟಿಕ್ ಪ್ರದೇಶದ ಬಗ್ಗೆ ಟ್ರಂಪ್ ಯಾಕೆ ಸ್ಥಿರ ನಿಲುವು ಹೊಂದಿದ್ದಾರೆ ಎಂದು ಹೇಳಿರುವುದನ್ನು ಫ್ರಾನ್ಸ್ ಅಪಹಾಸ್ಯ ಮಾಡಿದ್ದು ಇದು ವಾಷಿಂಗ್ಟನ್ ಅನ್ನು ಅಪಹಾಸ್ಯ ಮಾಡಿದಂತೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ವಿದೇಶಿ ನೆರವು ರದ್ದು; ಹೆಚ್ಐವಿ, ಕ್ಷಯ ವಿರುದ್ಧ ಬಡ ರಾಷ್ಟ್ರಗಳ ಹೋರಾಟಕ್ಕೆ ಎದುರಾಯ್ತು ಬಹುದೊಡ್ಡ ಸವಾಲು
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕಳುಹಿಸಿರುವ ಖಾಸಗಿ ಸಂದೇಶವನ್ನು ಹಂಚಿಕೊಂಡಿರುವ ಟ್ರಂಪ್, ತಮ್ಮ ಶಾಂತಿ ಮಂಡಳಿಗೆ ಸೇರಲು ನೀಡಿರುವ ಆಹ್ವಾನವನ್ನು ಫ್ರಾನ್ಸ್ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ. 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ.
ಅವರು ಶಾಂತಿ ಮಂಡಳಿಗೆ ಸೇರಬೇಕಿಲ್ಲ. ನಾನು ಅವರ ವೈನ್ ಮತ್ತು ಷಾಂಪೇನ್‌ಗಳ ಮೇಲೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ. ಯುದ್ಧಪೀಡಿತ ಗಾಜಾದ ಪುನರ್ ರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಅಮೆರಿಕ ಶಾಂತಿ ಮಂಡಳಿಯನ್ನು ಸ್ಥಾಪಿಸಿದೆ. ಆದರೆ ಇದರಲ್ಲಿ ಸೇರಲು ಫ್ರಾನ್ಸ್ ನಿರಾಕರಿಸಿದೆ.
ಟ್ರಂಪ್ ಗೆ ಸಂದೇಶ ಕಳುಹಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು, ಇರಾನ್ ಮತ್ತು ಸಿರಿಯಾದ ವಿಷಯಗಳ ಬಗ್ಗೆ ಒಪ್ಪುತ್ತೇನೆ. ಆದರೆ ಗ್ರೀನ್‌ಲ್ಯಾಂಡ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಹಳಿ ತಪ್ಪಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಅಪಘಾತ; 21 ಸಾವು
ಡಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಹೊರತು ಟ್ರಂಪ್ ಮತ್ತು ಇತರ ಜಿ7 ನಾಯಕರನ್ನು ಭೇಟಿ ಮಾಡುವುದಾಗಿ ಹೇಳಿದ ಎಮ್ಯಾನುಯೆಲ್ ಮ್ಯಾಕ್ರನ್, ಈ ಸಭೆಗೆ ಉಕ್ರೇನ್, ಡೇನ್ಸ್, ಸಿರಿಯಾ ಮತ್ತು ರಷ್ಯಾದ ನಾಯಕರನ್ನು ಕೂಡ ಆಹ್ವಾನಿಸುವಂತೆ ತಿಳಿಸಿದರು. ಟ್ರಂಪ್ ಅವರೊಂದಿಗೆ ಭೋಜನ ಕೂಟ ನಡೆಸುವ ಪ್ರಸ್ತಾಪವನ್ನು ಕೂಡ ಮಾಡಿದ್ದಾರೆ.
ಟ್ರಂಪ್ ಸುಂಕ ಬೆದರಿಕೆಗೆ ಪ್ರತಿಕ್ರಿಯಿಸಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರ ಆಪ್ತ ಮೂಲಗಳು, ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಅಮೆರಿಕ ಶೇ. 200 ರಷ್ಟು ಸುಂಕ ವಿಧಿಸುವ ಬೆದರಿಕೆಗಳು ಸ್ವೀಕಾರಾರ್ಹವಲ್ಲ ಎಂದು ತಿಳಿಸಿವೆ.