ವಾಷಿಂಗ್ಟನ್: ಭಾರತ ಮತ್ತು ಚೀನಾಕ್ಕೆ (India and china) ಅಮೆರಿಕ (america) ಬಿಗ್ ರಿಲೀಫ್ ನೀಡಿದೆ. ಕಳೆದ ಸುಮಾರು ಒಂದು ವರ್ಷದಿಂದ ರಷ್ಯಾ ತೈಲ (russian oil) ಆಮದಿಗೆ ಸುಂಕ ಬೆದರಿಕೆಯೊಡ್ಡುತ್ತಿದ್ದ ಅಮೆರಿಕವು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಭಾಗಿಯಾದ ಮೇಲೆ ಈ ನಿಟ್ಟಿನಲ್ಲಿ ನಿಯಮಗಳನ್ನು ಕೊಂಚ ಸಡಿಲಿಸಿತ್ತು. ಇದೀಗ ರಷ್ಯಾ ತೈಲ ಆಮದಿನ ಮೇಲೆ ಶೇಕಡಾ 500ರಷ್ಟು ಸುಂಕ ಬೆದರಿಕೆಯೊಡ್ಡುತ್ತಿದ್ದ (US tariff threat) ಅಮೆರಿಕ ಈಗ ಅದನ್ನು ಶೇಕಡಾ 100ಕ್ಕೆ ಇಳಿಕೆ ಮಾಡಿದ್ದು ಇದು ಭಾರತ ಮತ್ತು ಚೀನಾಕ್ಕೆ ಸಿಕ್ಕಿರುವ ಬಹುದೊಡ್ಡ ಪರಿಹಾರವಾಗಿದೆ.
ರಷ್ಯಾ ತೈಲ ಆಮದಿನ ಮೇಲೆ ಶೇಕಡಾ 500ರಷ್ಟು ಸುಂಕ ಬೆದರಿಕೆಯೊಡ್ಡುತ್ತಿದ್ದ ಅಮೆರಿಕ ಈಗ ಸುಂಕವನ್ನು ಶೇಕಡಾ 100ಕ್ಕೆ ಇಳಿಕೆ ಮಾಡಿದೆ. ರಷ್ಯಾದಿಂದ ನೈಸರ್ಗಿಕ ಅನಿಲ ಆಮದಿನಲ್ಲಿ ಶೇಕಡಾ 15 ಕ್ಕಿಂತ ಕಡಿಮೆ ಆಮದು ಮಾಡಿಕೊಳ್ಳುವ ದೇಶಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಭಾರತ, ಚೀನಾ ಸೇರಿದಂತೆ ಜಪಾನ್, ಫ್ರಾನ್ಸ್, ಹಂಗೇರಿ ಮತ್ತು ಬೆಲ್ಜಿಯಂಗೆ ಈ ವಿನಾಯಿತಿ ಪ್ರಯೋಜನ ಸಿಗಲಿದೆ.
ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ; ಯಾವೆಲ್ಲ ವಸ್ತುಗಳು ಅಗ್ಗವಾಗಲಿದೆ?
ರಷ್ಯಾ ತೈಲ ನಿರ್ಬಂಧ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಯುಎಸ್ ಶಾಸಕರು ಅನಾವರಣಗೊಳಿಸಿದ್ದಾರೆ. ಇದರಲ್ಲಿ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಸುಂಕ ಇಳಿಕೆ ಪ್ರಸ್ತಾವನೆಯನ್ನು ಉಲ್ಲೇಖಿಸಲಾಗಿದೆ. ಇದು ಜಾರಿಯಾದರೆ ರಷ್ಯಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಸುಂಕದ ದರಗಳನ್ನು ಶೇಕಡಾ 100ಕ್ಕೆ ಇಳಿಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರವಿರಲಿದೆ.
ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾವನ್ನು ಬಗ್ಗು ಬಡಿಯಲು ಅಮೆರಿಕವು ರಷ್ಯಾ ತೈಲವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾ ಮತ್ತು ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಸುಂಕ ಬೆದರಿಕೆಯನ್ನು ಒಡ್ಡಿತ್ತು. ಚೀನಾ, ಭಾರತ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ರಷ್ಯಾದ ಕಚ್ಚಾ ತೈಲದ ಆಮದುದಾರದಲ್ಲಿ ಅಗ್ರ ಐದು ಖರೀದಿದಾರರಾಗಿದ್ದಾರೆ. ಚೀನಾ, ಫ್ರಾನ್ಸ್, ಜಪಾನ್, ಹಂಗೇರಿ ಮತ್ತು ಬೆಲ್ಜಿಯಂ ರಷ್ಯಾದ ನೈಸರ್ಗಿಕ ಅನಿಲದ ಅಗ್ರ ಐದು ಆಮದುದಾರರಾಗಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಸುಂಕಗಳನ್ನು ವಿಧಿಸಿದರೆ ಅದು ಚೀನಾ ಮತ್ತು ಭಾರತದೊಂದಿಗಿನ ಈಗಾಗಲೇ ಅಸ್ಥಿರವಾಗಿರುವ ಯುಎಸ್ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಬೀರಲಿದೆ.
ರಷ್ಯಾ ತೈಲ ನಿರ್ಬಂಧ ಮಸೂದೆಯನ್ನು ಇತ್ತೀಚೆಗೆ ನಿಧನರಾದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಸೇರಿದಂತೆ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರು ಪರಿಚಯಿಸಿದ್ದರು. ಇದರ ಪರಿಷ್ಕೃತ ಆವೃತ್ತಿಯನ್ನು ಇದೀಗ ಅನಾವರಣಗೊಳಿಸಲಾಗಿದೆ.
ಮಸೂದೆ ಕಾನೂನಾಗಬಹುದು
ಮಸೂದೆ ಕುರಿತು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಹೆಜ್ಬೊಲ್ಲಾ ಮೇಲಿನ ನಿರ್ಬಂಧಗಳನ್ನು ಕೂಡ ಈ ಮಸೂದೆಯಲ್ಲಿ ಸೇರಿಸಿದರೆ ಅದು ದೊಡ್ಡ ವಿಷಯವಾಗುತ್ತದೆ. ಈ ಮಸೂದೆ ಅಂಗೀಕರಿಸಿ್ದರೆ ಅದು ಕಾನೂನಾಗುತ್ತದೆ. ಈ ಮಸೂದೆ ಲಿಂಡ್ಸೆ ಅವರ ಗೌರವಾರ್ಥವಾಗಿದೆ. ಅದು ಈಗ ನೆರವೇರುವ ಸಾಧ್ಯತೆ ಇದೆ ಎಂದರು.
Photo gallery of 'Lokadhvani' Awardees: ಮೇಘಾಲಯದಲ್ಲಿ ʼಲೋಕಧ್ವನಿʼ ಪ್ರಶಸ್ತಿ ಪುರಸ್ಕೃತರು
ಮಸೂದೆ ಮೊದಲು ಪರಿಚಯಿಸಿದ್ದ ಬ್ಲೂಮೆಂಥಾಲ್ ಅವರು ಮಸೂದೆಯಲ್ಲಿ ಹೊಸ ವಿಷಯಗಳನ್ನು ಸೇರಿಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಹೊಸ ವಿಷಯಗಳನ್ನು ತೆರೆಯುವ ಬದಲು ಮಸೂದೆಯಲ್ಲಿರುವ ವಿಷಯಗಳೊಂದಿಗೆ ಮುಂದುವರಿಯಬೇಕು ಎಂದು ತಿಳಿಸಿದರು.