ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

12th Global Achievers Awards in South Africa: ಸಮಾಜವನ್ನು ಪುನರ್‌ ಮಿಲನ ಮಾಡುವ ಪ್ರಯತ್ನ

ಇತ್ತೀಚಿನ ದಿನಗಳಲ್ಲಿ ಅದೆಲ್ಲವೂ ಬದಲಾಗಿ ಗಂಡ, ಹೆಂಡತಿ, ಮಕ್ಕಳು ಇಷ್ಟಕ್ಕೆ ಬಂದು ನಿಂತಿದೆ. ಇಂಥ ಸಮಾಜವನ್ನು ಪುನರ್‌ ಮಿಲನ ಮಾಡಲು ಭಟ್ಟರು ಪ್ರಯತ್ನ ಮಾಡುತ್ತಿದ್ದಾರೆ. ಬೇರೆ ದೇಶಕ್ಕೂ ತಮ್ಮ ಯತ್ನವನ್ನು ವಿಸ್ತರಿಸಿದ್ದಾರೆ ಎಂದು ಮಾಜಿ ಶಾಸಕರು, ಶಿಕ್ಷಣೋದ್ಯಮಿ ಬಿ.ಎಂ. ಸುಕುಮಾರ ಶೆಟ್ಟಿ ಅವರು ಹೇಳಿದರು.

ವಿಶ್ವೇಶ್ವರ ಭಟ್ಟರು ಪೂರ್ವಜನ್ಮದ ಸುಕೃತ ಮಾಡಿದ್ದಾರೆ. ಮನುಷ್ಯ ಎಷ್ಟು ಹಣ ಮಾಡಿದರೂ ಸಮಾಜ ನೆನೆಯುವುದಿಲ್ಲ. ಸಮಾಜ ಒಪ್ಪುವಂಥ ಕೆಲಸ ಮಾಡಿದರೆ ಮಾತ್ರ ಸಮಾಜ ಆತನನ್ನು ನೆನೆಯುತ್ತದೆ. ನಾವು ಹಳ್ಳಿಯಲ್ಲಿ ಭಾವನಾತ್ಮಕ ಬೆಸುಗೆಯಿಂದ ಕೂಡಿದ ಜೀವನ ಕಂಡವರು. ಇತ್ತೀಚಿನ ದಿನಗಳಲ್ಲಿ ಅದೆಲ್ಲವೂ ಬದಲಾಗಿ ಗಂಡ, ಹೆಂಡತಿ, ಮಕ್ಕಳು ಇಷ್ಟಕ್ಕೆ ಬಂದು ನಿಂತಿದೆ. ಇಂಥ ಸಮಾಜವನ್ನು ಪುನರ್‌ಮಿಲನ ಮಾಡಲು ಭಟ್ಟರು ಪ್ರಯತ್ನ ಮಾಡುತ್ತಿದ್ದಾರೆ. ಬೇರೆ ದೇಶಕ್ಕೂ ತಮ್ಮ ಯತ್ನವನ್ನು ವಿಸ್ತರಿಸಿದ್ದಾರೆ ಎಂದು ಮಾಜಿ ಶಾಸಕರು, ಶಿಕ್ಷಣೋದ್ಯಮಿ ಬಿ.ಎಂ. ಸುಕುಮಾರ ಶೆಟ್ಟಿ ಅವರು ಹೇಳಿದರು.

ಭಟ್ಟರ ಕುಟುಂಬ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮಭಕ್ತರು. ಅವರ ಈ ಕಾರ್ಯಕ್ರಮಗಳಿಂದ ಎಷ್ಟೋ ಜನರಿಗೆ ಹೊಸ ಅನುಭವ ಉಂಟಾಗಿದೆ. ಹತ್ತು ಜನರ ಒಡನಾಟ, ಬೇರೆ ದೇಶದ ಜನಜೀವನ ಸಂಸ್ಕೃತಿಯ ಪರಿಚಯ ಆಗುತ್ತಿದೆ. ನಾವು ಅಲ್ಲಿ ಹೇಗಿರಬೇಕು ಎಂಬುದನ್ನೂ ಅವರು ಕಲಿಸಿ ಕೊಡುತ್ತಿದ್ದಾರೆ.

Vishwavani TV

ಪತ್ರಿಕೋದ್ಯಮದಲ್ಲಿ ಅವರೇ ಮುಂಚೂಣಿ. ಹಣಕಾಸಿನ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು, ಸ್ವಂತ ಬರಹ, ಸ್ವಶಕ್ತಿ, ಸಮಾಜದ ತಪ್ಪನ್ನು ಎತ್ತಿ ಹಿಡಿಯುವ ವಿಮರ್ಶೆಗಳಿಂದ ಬೆಳೆದಿದ್ದು, ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಇದನ್ನೂ ಓದಿ: 12th Global Achievers Awards in South Africa: ವಿವಿಧ ಕ್ಷೇತ್ರದವರನ್ನೂ ಒಂದೆಡೆ ಸೇರಿಸುವುದು ಸುಲಭ ಅಲ್ಲ

ಪ್ರತಿದಿನವೂ ನಾನು ಮುಂಜಾನೆ ನಾಲ್ಕೂವರೆ ಗಂಟೆಗೆ ಕೊಲ್ಲೂರು ದೇವಾಲಯಕ್ಕೆ ಹೋಗಿ ಒಂದು ಗಂಟೆ ದೇವಿಯ ಸಾನಿಧ್ಯದಲ್ಲಿರುತ್ತೇನೆ, ಅಷ್ಟು ಹೊತ್ತಿಗೆ ದೇವಿ ಪ್ರಫುಲ್ಲಳಾಗಿರು ತ್ತಾಳೆ. ಆಕೆಯ ಆಶೀರ್ವಾದ ಸಂಪೂರ್ಣ ಶಕ್ತಿಯುತವಾಗಿರುತ್ತದೆ. ಪ್ರತಿ ಮಂಗಳವಾರ ಆನೆಗುಡ್ಡೆ ದೇವಾಲಯಕ್ಕೆ ಹೋಗುತ್ತೇನೆ. ಪ್ರತಿ ಶನಿವಾರ ಸಾಲಿಗ್ರಾಮ ನರಸಿಂಹ ದೇವಸ್ಥಾನಕ್ಕೆ ಹೋಗುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿವರ್ಷ ಕಾಶಿಗೆ ಹೋಗಿ ಅಲ್ಲಿ ನನ್ನ ಜನ್ಮದಿನ ಆಚರಿಸಿಕೊಳ್ತೇನೆ. ಈ ವರ್ಷ ಇಪ್ಪತ್ತೊಂದನೇ ಬಾರಿ ಕಾಶಿಗೆ ಹೋಗಿದ್ದೇನೆ. ಕೇದಾರನಾಥ, ಬದರಿನಾಥಕ್ಕೂ ಹೋಗಿದ್ದೇನೆ. ನಾನು ನಿಮಿತ್ತ ಮಾತ್ರ, ಎಲ್ಲವೂ ಪರಮಾತ್ಮನ ಆಶೀರ್ವಾದ. ದೇವರ ಅನುಗ್ರಹ ಇದ್ದರೆ ಏನು ಬೇಕಾದರೂ ನಡೆಯಬಹುದು. ಭಟ್ಟರ ಮೇಲೂ ದೇವರ ಆಶೀರ್ವಾದವಿದೆ ಎಂದು ಹೇಳಿದರು.

image

ಕೊಲ್ಲೂರಿಗೆ ಎಲ್ಲರೂ ಭೇಟಿ ಕೊಟ್ಟು ದೇವಿಯ ಆಶೀರ್ವಾದ ಪಡೆಯುವಂತಾಗಲಿ. ಅದು ದೇವಿಯ ನೈಜ ಸಾನ್ನಿಧ್ಯ, ವಿಶೇಷ ಶಕ್ತಿ ಇರುವ ಕ್ಷೇತ್ರ. ಶಾಸಕನಾಗುವುದು ದೊಡ್ಡ ವಿಷಯ ವಲ್ಲ. ಆದರೆ ದೇವಸ್ಥಾನದ ಮಂಡಳಿಯಲ್ಲಿ ಹತ್ತು ವರ್ಷ ನಾನಿದ್ದು, ಇಂದು ಸುಕುಮಾರ ಶೆಟ್ಟಿ ಎಂದರೆ ಕೊಲ್ಲೂರು ದೇವಾಲಯ ಎಂದು ಗುರುತಿಸ್ತಾರೆ. ಅದೇ ದೊಡ್ಡ ಸಾರ್ಥಕ್ಯ. ಕೊಲ್ಲೂರಿನಲ್ಲಿ ಇಳಯರಾಜ, ಯೇಸುದಾಸ್ ಮುಂತಾದವರು ದೇವರ ಆಶೀರ್ವಾದ ಪಡೆದಿದ್ದಾರೆ. ಅಲ್ಲಿ ಬಂದವರ ಕಷ್ಟಕಾರ್ಪಣ್ಯ ದೂರವಾಗುತ್ತದೆ.

-ಬಿ.ಎಂ.ಸುಕುಮಾರ ಶೆಟ್ಟಿ ಮಾಜಿ ಶಾಸಕರು, ಶಿಕ್ಷಣೋದ್ಯಮಿ