ಖೈಬರ್ ಪಖ್ತುಂಖ್ವಾ, ಏ.27: ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ನ (Hafiz Saeed) ಮತ್ತೊಬ್ಬ ಆಪ್ತ ಸಹಚರನನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಲಷ್ಕರ್ ಭಯೋತ್ಪಾದಕನ ನಿಗೂಢ ಹತ್ಯೆಯು ನಿಷೇಧಿತ ಸಂಘಟನೆಯ ಹಿರಿಯ ಭಯೋತ್ಪಾದಕರ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಲಾಗುತ್ತಿದ್ದ ದಾಳಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ವರದಿಗಳ ಪ್ರಕಾರ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎಲ್‌ಇಟಿಯ ( Lashkar-e-Taiba) ಉನ್ನತ ಕಮಾಂಡರ್ ಎಂದು ಕರೆಯಲ್ಪಡುವ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಭದ್ರತಾ ಮೂಲಗಳು ದೃಢಪಡಿಸಿವೆ.
ಗುಂಡಿನ ದಾಳಿ ಹಠಾತ್ತನೆ ನಡೆದಿದೆ. ದಾಳಿಕೋರರು ಪದೇ ಪದೇ ಗುಂಡು ಹಾರಿಸಿದ್ದರಿಂದ ಅಫ್ರಿದಿಗೆ ತಪ್ಪಿಸಿಕೊಳ್ಳಲು ಅಥವಾ ರಕ್ಷಣೆ ಪಡೆಯಲು ಯಾವುದೇ ಅವಕಾಶ ಸಿಗಲಿಲ್ಲ ಎಂದು ಸೂಚಿಸಿವೆ. ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸುವ ಹೊತ್ತಿಗೆ, ದಾಳಿಕೋರರು ಅದಾಗಲೇ ತಪ್ಪಿಸಿಕೊಂಡರು. ಈ ಘಟನೆಯು ಮತ್ತೊಮ್ಮೆ ಗುರುತಿಸಲಾಗದ ಬಂದೂಕುಧಾರಿಗಳು ಯಾರು ಎಂಬ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ.
ಉಗ್ರರ ಸ್ವಂತ ತಾಯ್ನಾಡಿನಲ್ಲಿ ಉನ್ನತ ಪಾಕಿಸ್ತಾನಿ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ. ವಿಶೇಷವಾಗಿ, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯವು ಕಳೆದ ವರ್ಷದಿಂದ ಹಿಂಸಾಚಾರದಲ್ಲಿ ತೀವ್ರ ಏರಿಕೆ ಕಂಡಿದ್ದು, ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ದಾಳಿಕೋರರ ಗುರಿಯಾಗಿದ್ದಾರೆ. ಈ ಹತ್ಯೆಯಲ್ಲಿ, ದಾಳಿಯ ವಿಧಾನವು ಯೋಜಿತ ಹತ್ಯೆಯ ಹಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಆದರೂ ಅಧಿಕಾರಿಗಳು ಅಫ್ರಿದಿ ಹತ್ಯೆಯ ಬಗ್ಗೆ ಯಾವುದೇ ಗುಂಪು ನಡೆಸಿರಬಹುದು ಎಂದು ಇನ್ನೂ ಸಂಶಯ ಹೊಂದಿಲ್ಲ.
ಭಯೋತ್ಪಾದನಾ ವಿರುದ್ಧದ ತನಿಖೆಯಲ್ಲಿ ಮಹತ್ವದ ಪ್ರಗತಿ: ಪ್ರಮುಖ ಲಷ್ಕರ್ ಉಗ್ರ ಹ್ಯಾರಿಸ್ ಸೌದಿ ಅರೇಬಿಯಾದಲ್ಲಿ ಪತ್ತೆ
ಎಲ್‌ಇಟಿ ಜಾಲದ ಪ್ರಮುಖ ಉಗ್ರನ ಹತ್ಯೆ
ಭದ್ರತಾ ಮೂಲಗಳ ಪ್ರಕಾರ, ಶೇಖ್ ಯೂಸುಫ್ ಅಫ್ರಿದಿ ಬಹಳ ಹಿಂದಿನಿಂದಲೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲಷ್ಕರ್-ಎ-ತೊಯ್ಬಾದ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದ.
ಫೆಬ್ರವರಿ 2025 ರಲ್ಲಿ, ಎಲ್‌ಇಟಿಯ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದ ಮತ್ತು ಸಯೀದ್‌ನ ಸೋದರ ಮಾವ ಮೌಲಾನಾ ಕಾಶಿಫ್ ಅಲಿಯನ್ನು ಖೈಬರ್ ಪಖ್ತುನ್ಖ್ವಾದ ಸ್ವಾಬಿಯಲ್ಲಿರುವ ಅವನ ನಿವಾಸದಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದರು. ದಾಳಿಕೋರರು ಇನ್ನೂ ಪತ್ತೆಯಾಗಿಲ್ಲ.
ಆದರೆ, ಲಷ್ಕರೆ ಸಂಘಟನೆಯ ಅಫ್ರಿದಿಯ ಹತ್ಯೆಯನ್ನು ಒಂದು ಪ್ರಮುಖ ಘಟನೆ ಎಂದು ಕರೆಯಲಾಗಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಪಾಕಿಸ್ತಾನ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಎಲ್‌ಇಟಿ ನಿಷೇಧಿತವಾಗಿದ್ದರೂ, ಅದರ ಕಾರ್ಯಕರ್ತರು ಖೈಬರ್ ಪಖ್ತುಂಖ್ವಾ ಮತ್ತು ಅದರಾಚೆಗೆ ಹೆಚ್ಚುತ್ತಲೇ ಇದ್ದಾರೆ, ಸ್ಥಳೀಯ ಮೂಲಗಳ ಪ್ರಕಾರ, ಅಫ್ರಿದಿ ಹತ್ಯೆಯು ಈ ಪ್ರದೇಶದಲ್ಲಿ ಗುಂಪಿನ ಕಾರ್ಯಾಚರಣೆಯನ್ನು ಅಡ್ಡಿಪಡಿಸುವ ಸಾಧ್ಯತೆಯಿದೆ.
ಮಾರಕ ಗುಂಡಿನ ದಾಳಿಯ ನಂತರ, ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ವಿಧಿವಿಜ್ಞಾನ ತಂಡಗಳು ಘಟನಾ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸಂಘಟನೆಯು ಇಲ್ಲಿಯವರೆಗೆ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿಲ್ಲ.