Air Strike: ಇಸ್ರೇಲ್ನಿಂದ ಯಮನ್ ಮೇಲೆ ಏರ್ ಸ್ಟ್ರೈಕ್; 35 ಮಂದಿ ಸಾವು, 130ಕ್ಕೂ ಅಧಿಕ ಜನರಿಗೆ ಗಾಯ
ಯೆಮೆನ್‌ನಲ್ಲಿ ಇಸ್ರೇಲ್ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ. ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ರಾಜಧಾನಿ ಸನಾ ಸೇರಿದಂತೆ ಯೆಮೆನ್‌ನ ಹಲವಾರು ಭಾಗಗಳಲ್ಲಿ ಇಸ್ರೇಲ್ ಬುಧವಾರ ಹೌತಿ ಬಂಡುಕೋರರ ಮೇಲೆ ವಾಯುದಾಳಿ ನಡೆಸಿದೆ.

-

ಸನಾ: ಯೆಮೆನ್‌ನಲ್ಲಿ ಇಸ್ರೇಲ್ ಮತ್ತೊಂದು ಸುತ್ತಿನ ವೈಮಾನಿಕ ದಾಳಿ (Air Strike) ನಡೆಸಿದೆ. ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ರಾಜಧಾನಿ ಸನಾ ಸೇರಿದಂತೆ ಯೆಮೆನ್‌ನ ಹಲವಾರು ಭಾಗಗಳಲ್ಲಿ ಇಸ್ರೇಲ್ ಬುಧವಾರ ಹೌತಿ ಬಂಡುಕೋರರ ಮೇಲೆ ವಾಯುದಾಳಿ ನಡೆಸಿದೆ. ಕತಾರ್‌ನಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಇಸ್ರೇಲ್ ಈ ದಾಳಿ ನಡೆಸಿದೆ. ಯೆಮೆನ್ ಸರ್ಕಾರಿ ಅಧಿಕಾರಿಗಳ ಪ್ರಕಾರ, ದಾಳಿಯಲ್ಲಿ ಮಿಲಿಟರಿ ನೆಲೆಗಳು ಮತ್ತು ಇಂಧನ ಕೇಂದ್ರವನ್ನು ಗುರಿಯಾಗಿಸಲಾಗಿದೆ. ಇಸ್ರೇಲ್ ಯುದ್ಧ ವಿಮಾನಗಳ ಮೂಲಕ ಈ ದಾಳಿಯನ್ನು ನಡೆಸಿದೆ.
ಏತನ್ಮಧ್ಯೆ, ಇಸ್ರೇಲ್ ಸೇನೆಯು ಗುರುವಾರ ಯೆಮೆನ್‌ನಿಂದ ಹಾರಿಸಲಾದ ಕ್ಷಿಪಣಿಯನ್ನು ತಡೆಹಿಡಿದಿದೆ ಎಂದು ಹೇಳಿದೆ. ಇಸ್ರೇಲ್ ರಕ್ಷಣಾ ಪಡೆಗಳ (IDF) ಪ್ರಕಾರ, ಕಾರ್ಯಾಚರಣೆಯು ಹೌತಿಗಳು "ಗುಪ್ತಚರ ಮಾಹಿತಿ ಸಂಗ್ರಹಿಸಿ ಇಸ್ರೇಲ್ ವಿರುದ್ಧ ದಾಳಿ ನಡೆಸಲು ಯೋಜಿಸಿದ್ದರು. ಹೌತಿ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ಇಂಧನ ಸಂಗ್ರಹಣಾ ಸೌಲಭ್ಯ ಮತ್ತು ಹೌತಿ ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಗುರಿಯಾಗಿಸಿಕೊಂಡು ಮಿಲಿಟರಿ ಶಿಬಿರಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಹೌತಿ ಬಂಡುಕೋರರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಾಗಿ ಬಳಸಲಾಗುತ್ತಿದ್ದ ಎರಡು ಪರ್ವತಗಳ ನಡುವಿನ ಅಡಗುತಾಣವನ್ನು ಇಸ್ರೇಲಿ ದಾಳಿಗಳು ಗುರಿಯಾಗಿಸಿಕೊಂಡಿವೆ ಎಂದು ಸನಾ ನಿವಾಸಿಗಳು ತಿಳಿಸಿದ್ದಾರೆ. ಆದರೆ ಹಾನಿ ಪ್ರಮಾಣ ಇನ್ನೂ ತಿಳಿದು ಬಂದಿಲ್ಲ. ಹೌತಿ ನಾಯಕತ್ವದ ಪ್ರಧಾನ ಕಚೇರಿ ಹಾಗೂ ಹಲವಾರು ಮಿಲಿಟರಿ ಶಿಬಿರಗಳ ಮೇಲೆ ಕಾರ್ಯಾಚರಣೆ ನಡೆದಿರುವುದನ್ನು ಇಸ್ರೇಲಿ ಮಿಲಿಟರಿ ಮೂಲಗಳು ತಿಳಿದಿದೆ. ಯೆಮೆನ್‌ನಲ್ಲಿ ಇಸ್ರೇಲ್ ಮತ್ತು ಹೌತಿ ಪಡೆಗಳ ನಡುವೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯುತ್ತಿರುವ ದಾಳಿಗಳು ಮತ್ತು ಪ್ರತಿದಾಳಿಗಳ ಭಾಗವಾಗಿ ಈ ವೈಮಾನಿಕ ದಾಳಿಗಳು ನಡೆದಿವೆ.
ಈ ಸುದ್ದಿಯನ್ನೂ ಓದಿ: Israel-Gaza War: ಕದನ ವಿರಾಮ ಉಲ್ಲಂಘನೆ... ಇಸ್ರೇಲ್-ಗಾಜಾ ನಡುವೆ ಯುದ್ಧೋನ್ಮಾದ; ಏರ್‌ಸ್ಟ್ರೈಕ್‌ನಲ್ಲಿ 200 ಜನ ಬಲಿ
ಇರಾನ್ ಜೊತೆ ಮೈತ್ರಿ ಮಾಡಿಕೊಂಡಿರುವ ಹೌತಿಗಳು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರೊಂದಿಗೆ ಒಗ್ಗಟ್ಟನ್ನು ಉಲ್ಲೇಖಿಸಿ ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸೆಪ್ಟೆಂಬರ್ 1 ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೌತಿ ಗುಂಪಿನ ಪ್ರಧಾನಿ ಸೇರಿದಂತೆ 12 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು. ಹೌತಿ ನಾಯಕ ಅಬ್ದುಲ್ ಮಲಿಕ್ ಅಲ್-ಹೌತಿ ಅವರ ಭಾಷಣಕ್ಕಾಗಿ ನೆರೆದಿದ್ದ ಜನಸಮೂಹವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು.