Bhagya Lakshmi Serial: ಚಾರಿಟಿಯಲ್ಲಿ ಭಾಗ್ಯಾಗೆ ಬಹುದೊಡ್ಡ ಆಫರ್ ಕೊಟ್ಟ ಆದೀಶ್ವರ್: ಆದ್ರೆ..
ಆದೀ ಭಾಗ್ಯಾಳನ್ನು ಒಂದುಕಡೆ ಕರೆದುಕೊಂಡು ಹೋಗಿ, ಈ ಸಂಸ್ಥೆಯಲ್ಲಿ ಒಂದು ಪೋಸ್ಟ್ ಖಾಲಿ ಇದೆ.. ನೀವು ಆ ಜವಾಬ್ದಾರಿಯನ್ನು ತೆಗೋತೀರಾ? ಎಂದು ಕೇಳಿದ್ದಾನೆ. ಆಗ ಭಾಗ್ಯ, ಜವಾಬ್ದಾರಿನಾ, ಯಾವ ಪೋಸ್ಟ್- ಯಾವ ಕೆಲಸ? ಎಂದಿದ್ದಾಳೆ. ಅದಕ್ಕೆ ಆದೀಶ್ವರ್, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಈ ಟ್ರಸ್ಟ್ ಅನ್ನು ನೀವು ಟೇಕೋವರ್ ಮಾಡಿಕೊಳ್ಳಬೇಕು ಎಂದಿದ್ದಾರೆ.

Bhagya Lakshmi Serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಣ ಎಪಿಸೋಡ್ ರೋಚಕತೆಯಿಂದ ಸಾಗುತ್ತಿದೆ. ಸದ್ಯ ಆದೀ ಭಾಗ್ಯಾಗೆ ತನ್ನ ಆಫೀಸ್ನಲ್ಲಿ ಸನ್ಮಾನ ಮಾಡಿದ್ದಾರೆ. 25 ಲಕ್ಷ ಹಣವನ್ನು ಭಾಗ್ಯ ಕಾಮತ್ ಫ್ಯಾಮಿಲಿಯ ಟ್ರಸ್ಟ್ಗೆ ಕೊಟ್ಟ ಕಾರಣ ಥ್ಯಾಂಕ್ಸ್ ಹೇಳುವ ನೆಪದಲ್ಲಿ ಈ ಸನ್ಮಾನ ಆಯೋಜಿಸಿದ್ದಾನೆ. ಈ ಕಾರ್ಯಕ್ರಮದಲ್ಲಿ ಆದೀ ಹಾಗೂ ರಾಮ್ದಾಸ್ ಕಾಮತ್ ಭಾಗ್ಯಾಳನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಆದೀ ಭಾಗ್ಯಾಗೆ ಬಹುದೊಡ್ಡ ಆಫರ್ ಒಂದನ್ನು ಕೊಟ್ಟಿದ್ದಾನೆ.
ಸನ್ಮಾನ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾದರೂ ಭಾಗ್ಯ ಹಾಗೂ ಕುಸುಮಾ ಕೊನೆಗೂ ಬಂದಿದ್ದಾರೆ. ಸ್ಟೇಜ್ನಲ್ಲಿ ಆದೀ ಭಾಗ್ಯಾಳನ್ನು ಅದ್ಭುತವಾಗಿ ಹೊಗಳಿದ್ದಾನೆ. ನಮಗೆ ಹೊಟ್ಟೆ ತುಂಬಿದಾಗ ಉಳಿದ ಅನ್ನವನ್ನು ಬೇರೆಯವರಿಗೆ ದಾನ ಮಾಡೋದು ದೊಡ್ಡ ವಿಷಯ ಅಲ್ಲ.. ಆದರೆ ನಾವೇ ಹಸಿವಿನಲ್ಲಿ ಇರುವಾಗ ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಇನ್ನೊಬ್ಬರಿಗೆ ದಾನ ಮಾಡೋದು ನಿಜವಾದ ತ್ಯಾಗ.. ಈ ಕಾಲದಲ್ಲಿ ಆರೀತಿಯ ವ್ಯಕ್ತಿಗಳು ಇರಲ್ಲ ಅಂತ ನಮಗೆ ನಾವೇ ಅಂದುಕೊಂಡಿದ್ದೇವೆ.. ಆದರೆ, ಅದು ಸುಳ್ಳು ಇವತ್ತಿಗೂ ಒಳ್ಳೆಯತನ ಇದೆ.. ಒಳ್ಳೆಯವರು ನಮ್ಮ ಮಧ್ಯೆಯೇ ಇದ್ದಾರೆ ಅದಕ್ಕೆ ಉದಾಹರಣೆ ಇವತ್ತಿನ ನಮ್ಮ ಸ್ಪೆಷಲ್ ಗೆಸ್ಟ್ ಭಾಗ್ಯ ಅವರು ಎಂದು ಹೇಳಿದ್ದಾನೆ.
ಇನ್ನು ರಾಮ್ದಾಸ್ ಕೂಡ ಸ್ಟೇಜ್ ಮೇಲೆ ಬಂದು, ಹಣಕ್ಕೆ ಮೌಲ್ಯ ಬರೋದು ಕೇವಲ ಸಂಖ್ಯೆಯಿಂದ ಅಲ್ಲ.. ಆ ಹಣವನ್ನು ಹಿಡಿದುಕೊಂಡಿರುವ ಕೈಗಳಿಂದ.. ನನ್ನಂತವರು 25 ಲಕ್ಷ ಡೊನೆಟ್ ಮಾಡಿದ್ರೆ ಅದೇನು ದೊಡ್ಡ ವಿಷಯ ಅಲ್ಲ ಯಾಕಂದ್ರೆ ನಾವು ಗಳಿಸಿ ಉಳಿದಿದ್ರಲ್ಲಿ ದಾನ ಅಂತ ಕೋಡೋರು.. ಆದ್ರೆ ಭಾಗ್ಯ ಹಾಗಲ್ಲ.. ಅವಳಿಗೆ ನೂರೆಂಟು ಸಮಸ್ಯೆ ಇದೆ, ಈ 25 ಲಕ್ಷದಿಂದ ಅವಳು ಒಂದೇ ದಿನದಲ್ಲಿ ತನ್ನೆಲ್ಲ ಸಮಸ್ಯಯನ್ನು ಬಗೆ ಹರಿಸಬಹುದಿತ್ತು.. ಆದರೆ ಅವಳಿ ಹಾಗೆ ಮಾಡಲಿಲ್ಲ.. ತನ್ನ ಹೊಟ್ಟೆ ಖಾಲಿ ಇರುವಾಗ ತನ್ನ ತಟ್ಟೆಯಲ್ಲಿರುವ ಅನ್ನವನ್ನು ಬೇರೆಯವರಿಗೆ ದಾನ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಆದೀಶ್ವರ್ ಹಾಗೂ ರಾಮ್ದಾಸ್ ಮಾತು ಕೇಳಿ ಭಾಗ್ಯ ಭಾವುಕಳಾಗಿದ್ದಾಳೆ. ಆ ಬಳಿಕ ಭಾಗ್ಯಾಗೆ ಸನ್ಮಾನ ಮಾಡಲಾಗಿದೆ. ಈ ಕಾರ್ಯಕ್ರಮ ಮುಗಿದ ಬಳಿಕ ಆದೀಶ್ವರ್ ಟ್ರಸ್ಟ್ನ ಸದಸ್ಯರ ಜೊತೆ ಮಾತನಾಡುತ್ತ ಇರುತ್ತಾನೆ. ಆಗ ಸದಸ್ಯರು, ನಮ್ಮ ಹತ್ರ ಫಂಡ್ಸ್ ಇದೆ ಆದ್ರೆ ಅದನ್ನು ಸರಿಯಾಗಿ ಮ್ಯಾನೇಜ್ ಮಾಡೋಕೆ ಯಾರೂ ಇಲ್ಲದಂತಾಗಿದೆ. ಕೆಲಸ ಮಾಡೋದಕ್ಕೆ ನಾವೆಲ್ಲ ರೆಡಿ ಇದ್ದೇವೆ ಆದ್ರೆ ಯಾವ ದಾರಿಯಲ್ಲಿ ಸಾಗಬೇಕು ಅಂತ ಹೇಳೋಕೆ ಯಾರೂ ಇಲ್ಲ ಎಂದು ಹೇಳಿದ್ದಾರೆ.
ಸದಸ್ಯರ ಎಲ್ಲ ಮಾತನ್ನು ಕೇಳಿದ ಆದೀಶ್ವರ್, ಹಾಗಾದರೆ ಇದಕ್ಕೆ ಯಾರಾದರು ಒಳ್ಳೆಯ ರೈಟ್ ಪರ್ಸನ್ ಅನ್ನು ಆಯ್ಕೆ ಮಾಡಬೇಕು.. ಯಾರೂ ಆ ರೈಟ್ ಪರ್ಸನ್ ಎಂದು ಯೋಚಿಸುತ್ತಿರುವಾಗ ಆದೀಗೆ ಭಾಗ್ಯ ಕಾಣಿಸುತ್ತಾಳೆ. ಭಾಗ್ಯಾಳೆ ಇದಕ್ಕೆ ಸರಿಯಾದ ಆಯ್ಕೆ ಎಂದು ಅಂದುಕೊಳ್ಳುತ್ತಾನೆ. ಇದೇವೇಳೆ ಭಾಗ್ಯ-ಕುಸುಮಾ ಹೊರಡಲು ಮುಂದಾಗುತ್ತಾರೆ. ಆದೀ ಅವರನ್ನು ತಡೆದು ಭಾಗ್ಯ ಅವರೇ ಸ್ವಲ್ಪ ಹೊತ್ತು ಫ್ರೀ ಮಾಡಿಕೊಂಡು ನಾನು ಹೇಳೋ ಕಡೆ ಬರುತ್ತೀರ.. ಒಂದು ಇಂಪಾರ್ಟೆಂಟ್ ವಿಷಯ ಮಾತಾಡೋಕೆ ಇದೆ ಎಂದಿದ್ದಾನೆ.
ಇನ್ನೇನು ಇರಬಹುದು ಎಂದು ಭಾಗ್ಯ ಆಶ್ಚರ್ಯದಲ್ಲಿ ಏನು ಎಂದು ಕೇಳಿದ್ದಾಳೆ. ಅದು ಸರ್ಪ್ರೈಸ್ ಎಂದು ಆದೀ ಹೇಳುತ್ತಾನೆ. ಸದ್ಯ ಇಲ್ಲಿದೆ ಎಪಿಸೋಡ್ ಮುಕ್ತಾಯಗೊಂಡಿದೆ. ಆದರೆ, ಪ್ರೋಮೋದಲ್ಲಿ ಭಾಗ್ಯಾಗೆ ಆದೀ ಬಹುದೊಡ್ಡ ಆಫರ್ ನೀಡಿರುವುದು ಗೊತ್ತಾಗಿದೆ. ಆದೀ ಭಾಗ್ಯಾಳನ್ನು ಒಂದುಕಡೆ ಕರೆದುಕೊಂಡು ಹೋಗಿ, ಈ ಸಂಸ್ಥೆಯಲ್ಲಿ ಒಂದು ಪೋಸ್ಟ್ ಖಾಲಿ ಇದೆ.. ನೀವು ಆ ಜವಾಬ್ದಾರಿಯನ್ನು ತೆಗೋತೀರಾ? ಎಂದು ಕೇಳಿದ್ದಾನೆ. ಆಗ ಭಾಗ್ಯ, ಜವಾಬ್ದಾರಿನಾ, ಯಾವ ಪೋಸ್ಟ್- ಯಾವ ಕೆಲಸ? ಎಂದಿದ್ದಾಳೆ. ಅದಕ್ಕೆ ಆದೀಶ್ವರ್, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಈ ಟ್ರಸ್ಟ್ ಅನ್ನು ನೀವು ಟೇಕೋವರ್ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದಕ್ಕೆ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಈ ಆಫರ್ ಅನ್ನು ಭಾಗ್ಯ ತಿರಸ್ಕರಿಸುವುದು ಖಚಿತ.. ಆದರೆ, ಭಾಗ್ಯ ಒಪ್ಪುವ ತನಕ ಆದೀ ಬಿಡೋದೂ ಇಲ್ಲ.. ಹೀಗಾಗಿ ಮುಂದಿನ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
Vasudeva Kutumba Serial: ವಸುದೇವ ಕುಟುಂಬ ಧಾರಾವಾಹಿಗೆ ಅವಿನಾಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ?