ಇರಾನ್‌ನಲ್ಲಿ (Iran Row) ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭದ್ರತಾ ಪಡೆಗಳು ರಾಷ್ಟ್ರವ್ಯಾಪಿ ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡಿದ್ದರ ಪರಿಣಾಮ ಈ ವರೆಗೆ ಕನಿಷ್ಠ 648 ಜನರು ಸಾವನ್ನಪ್ಪಿದ್ದಾರೆ ಎಂದು ಹಕ್ಕುಗಳ ಗುಂಪಿನೊಂದು ತಿಳಿಸಿದೆ. ಅಶಾಂತಿಯ ಸಮಯದಲ್ಲಿ ಒಂಬತ್ತು ಅಪ್ರಾಪ್ತ ವಯಸ್ಕರು ಸೇರಿದಂತೆ 648 ಜನರ ಸಾವುಗಳನ್ನು ಪರಿಶೀಲಿಸಲಾಗಿದೆ ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳು (IHR) ಸೋಮವಾರ ತಿಳಿಸಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಮಾನವ ಹಕ್ಕುಗಳ ಗುಂಪು HRANA ಬಿಡುಗಡೆ ಮಾಡಿದ ಅಂಕಿಅಂಶಗಳು ಯುದ್ಧ ವಲಯಕ್ಕಿಂತ ಕಡಿಮೆಯಿಲ್ಲ. ವರದಿಯ ಪ್ರಕಾರ, ಸಾವಿನ ಸಂಖ್ಯೆ 500 ಮೀರಿದೆ, ಇವರಲ್ಲಿ 490 ಜನರು ಧ್ವನಿ ಎತ್ತಲು ಬೀದಿಗಿಳಿದ ನಾಗರಿಕರು. ಹಿಂಸಾಚಾರವು ಭದ್ರತಾ ಪಡೆಗಳನ್ನು ಸಹ ಬಿಟ್ಟಿಲ್ಲ. ಈ ರಕ್ತಸಿಕ್ತ ಸಂಘರ್ಷಕ್ಕೆ ನಲವತ್ತೆಂಟು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ. ಮಾನಿಟರಿಂಗ್ ಗ್ರೂಪ್ ನೆಟ್‌ಬ್ಲಾಕ್ಸ್ ಪ್ರಕಾರ, ಸುಮಾರು ಮೂರುವರೆ ದಿನಗಳಿಗಿಂತ ಹೆಚ್ಚು ಕಾಲ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿರುವುದು ಪ್ರತಿಭಟನಾಕಾರರಿಗೆ ಭಾರೀ ಹಿನ್ನೆಡೆಯನ್ನು ಉಂಟು ಮಾಡಿದೆ.
ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ತಡರಾತ್ರಿ ಟೆಹರಾನ್ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಮುಲ್ಲಾಗಳೇ ದೇಶಬಿಟ್ಟು ತೊಲಗಿ ಎಂದು ಜನರು ಘೋಷಣೆ ಕೂಗಿ ಟೆಹರಾನ್‌ನಲ್ಲಿರುವ ಸರ್ಕಾರಿ ಕಚೇರಿಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ಅತಿ ದೊಡ್ಡ ಆಡಳಿತ ವಿರೋಧಿ ಪ್ರತಿಭಟನೆ ಇದಾಗಿದೆ.
ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಸಜ್ಜು? ಟ್ರಂಪ್ ಆಪ್ತ ಹೇಳಿದ್ದೇನು?
ಹೆಚ್ಚುತ್ತಿರುವ ಸಾವಿನ ಸಂಖ್ಯೆಯು ಅಮೆರಿಕದ ಮಧ್ಯಪ್ರವೇಶಿಸುವಿಕೆಯ ಅವಕಾಶವನ್ನು ಹೊಂದಿದೆ. ಇರಾನ್ ಶಾಂತಿಯುತ ಪ್ರತಿಭಟನಾಕಾರರನ್ನು ಹಿಂಸಾತ್ಮಕವಾಗಿ ಕೊಂದರೆ, ಅಮೆರಿಕ ಅವರ ರಕ್ಷಣೆಗೆ ಬರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.