ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ್; ವಿಶ್ವದ ಹೊಸ ದೇಶವಾಗುವುದೇ?

ಹಲವಾರು ವರ್ಷಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ್ ಈಗ ತನ್ನನ್ನು ತಾನು ಸ್ವಾತಂತ್ರ್ಯ ದೇಶವೆಂದು ಘೋಷಿಸಿಕೊಂಡಿದೆ. ಆಗಸ್ಟ್ 11 ಅನ್ನು ತನ್ನ ಸ್ವಾತಂತ್ರ್ಯ ದಿನವೆಂದು ಘೋಷಿಸುವ ಮೂಲಕ ಅದು ಇದಕ್ಕಾಗಿ ಜಾಗತಿಕ ಮನ್ನಣೆ ಗಳಿಸಲು ಮುಂದಾಗಿದೆ. ಆದರೆ ಇದು ಸಾಧ್ಯವೇ? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ.

ಸಂಗ್ರಹ ಚಿತ್ರ

ಕ್ವೆಟ್ಟಾ: ಪಾಕಿಸ್ತಾನದೊಂದಿಗೆ (pakistan) ನಿರಂತರ ಸಂಘರ್ಷ ಮಾಡುತ್ತಿರುವ ಬಲೂಚಿಸ್ತಾನ (Balochistan) ತನ್ನನ್ನು ತಾನು ಈಗ ಸ್ವಯಂ ಘೋಷಿತ ಸ್ವಾತಂತ್ರ್ಯ ರಾಷ್ಟ್ರವೆಂದು (Independent country) ಹೇಳಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 11 ಅನ್ನು ಸ್ವಾತಂತ್ರ್ಯ ದಿನವಾಗಿ (Independence Day) ಆಚರಿಸಲಾಗುವುದು ಎಂದು ತಿಳಿಸಿದೆ. ಇದಕ್ಕಾಗಿ ವಿಶ್ವದ ಇತರ ರಾಷ್ಟ್ರಗಳಿಂದ (international community) ಜಾಗತಿಕ ಮನ್ನಣೆ (Global recognition) ಪಡೆಯಲು ಮುಂದಾಗಿದೆ. ಆದರೆ ಅದು ಸಾರ್ವಭೌಮ ರಾಷ್ಟ್ರವಾಗಲು (Sovereign nation) ಸಾಧ್ಯವೇ? ಈ ಬಗ್ಗೆ ಅಂತಾರಾಷ್ಟ್ರೀಯ ಕಾನೂನು (International law) ಏನು ಹೇಳುತ್ತದೆ.

ಕೆಲವು ವಾರಗಳ ಹಿಂದೆ ರಾಜತಾಂತ್ರಿಕ ಮಾನ್ಯತೆಗಾಗಿ ಭಾರತ ಸೇರಿದಂತೆ ಅನೇಕ ದೇಶಗಳಿಗೆ ಮನವಿ ಮಡಿಕೊಂಡಿರುವ ಸ್ವಯಂ ಘೋಷಿತ ಬಲೂಚಿಸ್ತಾನ್ ಗಣರಾಜ್ಯವು ಆಗಸ್ಟ್ 11 ಅನ್ನು ಬಲೂಚಿಸ್ತಾನದ ಸ್ವಾತಂತ್ರ್ಯ ದಿನವೆಂದು ಘೋಷಿಸಿದೆ. ಈ ಮೂಲಕ ಪಾಕಿಸ್ತಾನದಿಂದ ಸ್ವಾತಂತ್ರ್ಯಗೊಂಡಿರುವ ಸಾರ್ವಭೌಮ ರಾಷ್ಟ್ರವೆಂದು ಗುರುತಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.

ಕೆಂಪು ಸಮುದ್ರದಲ್ಲಿ ಭಾರತದ ಹಡಗಿನ ಮೇಲೆ ದಾಳಿ: ನಾವಿಕರ ರಕ್ಷಣೆ

ಬಲೂಚಿಸ್ತಾನವು ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿದೆ. ತಾನು ಸ್ವಾತಂತ್ರ್ಯ ರಾಷ್ಟ್ರವೆಂದು ಘೋಷಿಸಿಕೊಂಡಾಕ್ಷಣ ಅದು ಸ್ವಾತಂತ್ರ್ಯ ರಾಷ್ಟ್ರವಾಗುವುದಿಲ್ಲ ಎನ್ನುತ್ತಾರೆ ಅಂತಾರಾಷ್ಟ್ರೀಯ ಕಾನೂನಿನ ತಜ್ಞರು.

ಒಂದು ದೇಶ ಸ್ವಾತಂತ್ರ್ಯ ರಾಷ್ಟ್ರವೆಂದೆನಿಸಿಕೊಳ್ಳಲು ಅದು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಕೆಲವು ಮಾನದಂಡಗಳಿವೆ. ಇದರಲ್ಲಿ ಶಾಶ್ವತ ಜನಸಂಖ್ಯೆ, ದೇಶದ ಗಡಿ, ದೇಶದ ಸರ್ಕಾರ ಮತ್ತು ಇತರ ರಾಜ್ಯಗಳೊಂದಿಗೆ ಸಂಬಂಧಗಳನ್ನು ಬೆಳೆಸುವ ಸಾಮರ್ಥ್ಯಗಳು ಸೇರಿವೆ.

ಈ ನಿಯಮಗಳಿಗೆ ಅನುಸಾರವಾಗಿ ಬಲೂಚಿಸ್ತಾನ ಇನ್ನೂ ಈ ಮನ್ನಣೆಯನ್ನು ಪಡೆದಿಲ್ಲದೇ ಇರುವುದರಿಂದ ಈಗ ಅದು ಸ್ವಾತಂತ್ರ್ಯ ರಾಷ್ಟ್ರವಲ್ಲ. ಬಲೂಚಿಸ್ತಾನವು ತನ್ನ ಸಾರ್ವಭೌಮತ್ವವನ್ನು ಗುರುತಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ. ಆದರೆ ಈವರೆಗೆ ಯಾವುದೇ ದೇಶವು ಇದನ್ನು ಔಪಚಾರಿಕವಾಗಿಒಪ್ಪಿಕೊಂಡಿಲ್ಲ.



ರಾಜತಾಂತ್ರಿಕ ಮನ್ನಣೆ ಇಲ್ಲದೆ ಬಲೂಚಿಸ್ತಾನ್ ವಿಶ್ವಸಂಸ್ಥೆಗೆ ಸೇರಲು, ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಈ ಮನ್ನಣೆ ಸಾರ್ವಭೌಮ ರಾಷ್ಟ್ರಗಳ ರಾಜಕೀಯ ನಿರ್ಧಾರವಾಗಿರುತ್ತದೆ.

ಬಲೂಚಿಸ್ತಾನವು ಸ್ವಾತಂತ್ರ್ಯ ರಾಷ್ಟ್ರವಾಗಲು ಇರುವ ಪ್ರಮುಖ ಅಡ್ಡಿ ಎಂದರೆ ಆದರೆ ಮೇಲೆ ಪಾಕಿಸ್ತಾನ ಇನ್ನೂ ನಿಯಂತ್ರಣ ಸಾಧಿಸುತ್ತಿದೆ. ಪಾಕಿಸ್ತಾನದ ಆಡಳಿತ ಮತ್ತು ಮಿಲಿಟರಿ ನಿರಂತರವಾಗಿ ಅದರ ಮೇಲೆ ನಿಯಂತ್ರಣ ಹೊಂದಲು ಬಯಸುತ್ತಿದೆ. ಇಸ್ಲಾಮಾಬಾದ್ ತನ್ನ ನಾಗರಿಕ ಆಡಳಿತ, ಭದ್ರತಾ ಪಡೆಗಳು ಮತ್ತು ನ್ಯಾಯಾಂಗ ಸಂಸ್ಥೆಗಳ ಮೂಲಕ ಈ ಪ್ರದೇಶದ ಮೇಲೆ ಅಧಿಕಾರವನ್ನು ಚಲಾಯಿಸುವುದನ್ನು ಮುಂದುವರೆಸಿದೆ. ಇದು ಒಂದು ದೊಡ್ಡ ಸವಾಲಾಗಿದೆ.

ವಿಶ್ವಸಂಸ್ಥೆ ಏನು ಹೇಳುತ್ತದೆ?

ಬಲೂಚಿಸ್ತಾನ್ ಗಣರಾಜ್ಯವೆಂದು ಗುರುತಿಸಿಕೊಳ್ಳುವ ಅಧಿಕಾರ ಅಲ್ಲಿನ ಜನರದ್ದಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಡಿಯಲ್ಲಿ ಇದನ್ನು ವಿಶ್ವಸಂಸ್ಥೆ ಗುರುತಿಸಿದೆ. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಸಾರ್ವಭೌಮ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಅಂತಾರಾಷ್ಟ್ರೀಯ ಕಾನೂನು ಬಲವಾಗಿ ರಕ್ಷಿಸುತ್ತದೆ. ವಸಾಹತುಶಾಹಿ, ಅಂತಾರಾಷ್ಟ್ರೀಯ ಮನ್ನಣೆ, ದೀರ್ಘಕಾಲದ ಸಶಸ್ತ್ರ ಸಂಘರ್ಷ ಸೇರಿದಂತೆ ಕೆಲವು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸ್ವಾತಂತ್ರ್ಯಗೊಳ್ಳುವುದನ್ನು ಅದು ಬೆಂಬಲಿಸುತ್ತದೆ.

ಭಾರತ ಏನು ಹೇಳುತ್ತದೆ?

ಭಾರತವು ಬಲೂಚಿಸ್ತಾನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿಲ್ಲ. ಅದು ಪಾಕಿಸ್ತಾನದ ಭಾಗವಾಗಿದೆ ಎಂದು ನಿರಂತರವಾಗಿ ಸಮರ್ಥಿಸಿಕೊಂಡಿದೆ. ಒಂದು ವೇಳೆ ಅದು ಬಲೂಚಿಸ್ತಾನ ಸ್ವತಂತ್ರ ರಾಷ್ಟ್ರವೆಂದು ಗುರುತಿಸಿದರೆ ದೀರ್ಘಕಾಲೀನ ರಾಜತಾಂತ್ರಿಕ ಸ್ಥಾನದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಇದು ಭೌಗೋಳಿಕ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಅಲ್ಲಿನ ಜನರ ಮಾನವ ಹಕ್ಕುಗಳು ಮತ್ತು ಭದ್ರತೆಗೆ ಸಂಬಂಧಿಸಿದ ಭಾರತ ಕಳವಳವನ್ನು ವ್ಯಕ್ತಪಡಿಸಿದೆ.

ತಿಂಗಳಾಂತ್ಯದಲ್ಲಿ ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಧ್ಯ ಏಷ್ಯಾದೊಂದಿಗೆ ಭಾರತದ ಬಾಂಧವ್ಯ ಮತ್ತಷ್ಟು ವೃದ್ಧಿಸಲು ಕ್ರಮ

ಪಾಕಿಸ್ತಾನದ ವಿರೋಧ

ಬಲೂಚಿಸ್ತಾನದಲ್ಲಿ ನಿರಂತರ ದಂಗೆ, ಹಿಂಸಾಚಾರ ಮತ್ತು ರಾಜಕೀಯ ಅಸ್ಥಿರತೆಯಿಂದ ಪಾಕಿಸ್ತಾನವು ಆಂತರಿಕ ಭದ್ರತೆ ಮತ್ತು ರಾಜಕೀಯ ಸವಾಲುಗಳನ್ನು ನಿರಂತರವಾಗಿ ಎದುರಿಸುತ್ತಿದೆ. ಹೀಗಾಗಿ ಅದು ಬಲೂಚಿಸ್ತಾನವನ್ನು ಸ್ವಾತಂತ್ರ್ಯ ರಾಷ್ಟ್ರವಾಗಲು ಬಿಟ್ಟು ಕೊಡಬಹುದು. ಆದರೆ ಇದಕ್ಕೆ ದೇಶದಲ್ಲಿ ಸಾಕಷ್ಟು ವಿರೋಧವು ವ್ಯಕ್ತವಾಗಬಹುದು ಎನ್ನುತ್ತಾರೆ

ವಿದ್ಯಾ ಇರ್ವತ್ತೂರು

View all posts by this author