ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bangladesh Violence: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ಹತ್ಯೆಗಳ ಸರಣಿ; ಗಾಯಕ, ಆಟೋ ಚಾಲಕನ ಕೊಲೆ

ಫೆಬ್ರವರಿ 12ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದ ತೀವ್ರಗಾಮಿ ಭಾರತ ವಿರೋಧಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಸಾಮಾನ್ಯವಾಗಿದೆ. ಮೊದಲನೆಯದಾಗಿ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ 27 ವರ್ಷದ ಯುವಕ ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಕೊಲ್ಲಲಾಗಿತ್ತು.

ಕೊಲೆಯಾದ ಪ್ರೊಲೊಯ್‌ ಚಾಕಿ

ಢಾಕಾ, ಜ.13: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ (Bangladesh Violence) ಮುಂದುವರಿದಿದೆ. ಪ್ರತ್ಯೇಕ ಘಟನೆಯಲ್ಲಿ ಹಿಂದೂ (hindu murder) ವ್ಯಕ್ತಿಯಾದ ಗಾಯಕ ಪ್ರೊಲೊಯ್ ಚಾಕಿ ಹಾಗೂ ಆಟೋಚಾಲಕನನ್ನ ಥಳಿಸಿ ಕೊಂದಿರುವ ಘಟನೆ ನಡೆದಿದೆ. ಅವಾಮಿ ಲೀಗ್ ಕಾರ್ಯಕರ್ತರೂ ಆಗಿದ್ದ ಚಾಕಿ ನ್ಯಾಯಾಂಗ ಬಂಧನದಲ್ಲಿದ್ದಾಗ ಹತ್ಯೆ ಮಾಡಲಾಗಿದೆ.

ಚಿತ್ತಗಾಂಗ್‌ನ ದಗನ್‌ಭುಯಾನ್‌ನಲ್ಲಿ ದಾಳಿಕೋರರ ಗುಂಪೊಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನ ಥಳಿಸಿ ಕೊಂದಿದೆ. ಸಮೀರ್ ದಾಸ್ (28) ಹತ್ಯೆಗೀಡಾದ ಆಟೋ ಚಾಲಕ. ಹತ್ಯೆ ಬಳಿಕ ಆತನ ಎಲೆಕ್ಟ್ರಿಕ್‌ ಆಟೋವನ್ನೂ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಇನ್ನೊಬ್ಬ ಹಿಂದೂ ಯುವಕನನ್ನು ಕೊಲ್ಲಲಾಗಿತ್ತು. ಹತ್ಯೆಯಾದ ಯುವಕನನ್ನು ಜಾಯ್ ಮಹಾಪಾತ್ರೋ ಎಂದು ಗುರುತಿಸಲಾಗಿದೆ. ಆತ ಸುನಮ್‌ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದ ನಿವಾಸಿಯಾಗಿದ್ದ. ಈ ಘಟನೆ ಗುರುವಾರ ನಡೆದಿದ್ದು, ಆತನನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆಸಲಾಯಿತು. ಅಲ್ಲಿ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದರು.

ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ

ಫೆಬ್ರವರಿ 12ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದ ತೀವ್ರಗಾಮಿ ಭಾರತ ವಿರೋಧಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಸಾಮಾನ್ಯವಾಗಿದೆ. ಮೊದಲನೆಯದಾಗಿ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ 27 ವರ್ಷದ ಯುವಕ ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಕೊಲ್ಲಲಾಯಿತು. ಡಿಸೆಂಬರ್ 24ರಂದು ರಾಜ್ಬರಿಯ ಅಮೃತ್ ಮೊಂಡಲ್ ಅವರನ್ನು ಗುಂಪೊಂದು ಹೊಡೆದು ಕೊಂದಿತು.

ನಂತರ, ಮೈಮೆನ್ಸಿಂಗ್‌ನಲ್ಲಿ 42 ವರ್ಷದ ಬಜೇಂದ್ರ ಬಿಸ್ವಾಸ್ ಎಂಬ ವ್ಯಕ್ತಿಯನ್ನು ಅವರ ಸಹೋದ್ಯೋಗಿ ಗುಂಡಿಕ್ಕಿ ಕೊಂದರು. ಬಳಿಕ ಶರಿಯತ್‌ಪುರ ಜಿಲ್ಲೆಯಲ್ಲಿ 50 ವರ್ಷದ ಖೋಕೋನ್ ದಾಸ್ ಅವರಿಗೆ ಬೆಂಕಿ ಹಚ್ಚಲಾಯಿತು. ಜನವರಿ 5ರಂದು ಜೆಸ್ಸೋರ್ ಜಿಲ್ಲೆಯಲ್ಲಿ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದಾದ ಒಂದು ದಿನದ ನಂತರ, ನರಸಿಂಗ್ಡಿ ಜಿಲ್ಲೆಯಲ್ಲಿ ಶರತ್ ಮಣಿ ಚಕ್ರವರ್ತಿ ಎಂಬ 40 ವರ್ಷದ ವ್ಯಕ್ತಿಯನ್ನು ಕೊಲ್ಲಲಾಯಿತು.

ಹರೀಶ್‌ ಕೇರ

View all posts by this author