ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಾಳಿಯ ಮೊದಲು 74 ಬಾರಿ ಇರಾನ್‌ಗೆ ಎಚ್ಚರಿಸಿದ್ದ ಡೊನಾಲ್ಡ್ ಟ್ರಂಪ್

ಒಂದೆರಡಲ್ಲ ಬರೋಬ್ಬರಿ 74 ಬಾರಿ ಇರಾನ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಶ್ವೇತಭವನ ಇರಾನ್ ವಿರುದ್ಧ ಮಿಲಿಟರಿ ದಾಳಿಗೆ ಕರೆ ನೀಡುವ ಮೊದಲು ಟ್ರಂಪ್ ಅವರು ಕನಿಷ್ಠ 74 ಬಾರಿ ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದ್ದರು ಎಂದು ಹೇಳಿದೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಹಲವು ದಶಕಗಳಿಂದ ಇರಾನ್ (Iran) ಗೆ ಅಮೆರಿಕ (america) ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಒಂದೆರಡಲ್ಲ ಬರೋಬ್ಬರಿ 74 ಬಾರಿ ಇರಾನ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಎಚ್ಚರಿಕೆ ನೀಡಿದ್ದರು. ಇರಾನ್ ವಿರುದ್ಧ ಮಿಲಿಟರಿ ದಾಳಿಗೆ (military strikes) ಕರೆ ನೀಡುವ ಮೊದಲು ಟೆಹ್ರಾನ್ (tehran) ಪರಮಾಣು ಶಸ್ತ್ರಾಸ್ತ್ರವನ್ನು (nuclear weapon) ಹೊಂದಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ಟ್ರಂಪ್ ಹಲವು ಬಾರಿ ನೀಡಿದ್ದರು ಎಂದು ಸೋಮವಾರ ಶ್ವೇತಭವನ ತಿಳಿಸಿದೆ.

2011ರ ನವೆಂಬರ್ ತಿಂಗಳಿನಿಂದ ಸುಮಾರು 15 ವರ್ಷಗಳ ಕಾಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯಲು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳುತ್ತಲೇ ಇದ್ದರು. ಈ ಕುರಿತಾದ ಅವರ ಹೇಳಿಕೆಗಳ ಸಂಕಲನವನ್ನು ಸೋಮವಾರ ಶ್ವೇತಭವನ ಬಿಡುಗಡೆ ಮಾಡಿದೆ.

Breaking News: ಇರಾನ್‌ ವಿರುದ್ಧದ ಯುದ್ಧ ಮತ್ತೊಂದು ಹಂತಕ್ಕೆ ಕೊಂಡೊಯ್ದ ಅಮೆರಿಕ-ಇಸ್ರೇಲ್‌; ಏರ್‌ಪೋರ್ಟ್‌ ಮೇಲೆ ದಾಳಿ

2026ರ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಲು ಭವಿಷ್ಯದಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಬೇಡಿ ಎಂದು ಅಂತಿಮ ಎಚ್ಚರಿಕೆ ನೀಡಲಾಯಿತು. ಆದರೂ ಇರಾನ್ ಇದನ್ನು ನಿರ್ಲಕ್ಷಿಸಿತ್ತು. ವಿಶ್ವಕ್ಕೆ ಅಪಾಯಕಾರಿಯಾಗಿರುವ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಇರಾನ್ ಗೆ ನಾನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದರು.

ಇದಕ್ಕೂ ಐದು ದಿನಗಳ ಮೊದಲು ಫೆಬ್ರವರಿ 19ರಂದು ಅವರು, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಅವರಿಗೆ ಅದನ್ನು ಬಲವಾಗಿ ಹೇಳಲಾಗಿದೆ ಎಂದು ಹೇಳಿದ್ದರು.

ಫೆಬ್ರವರಿ 13ರಂದು, ಅವರು ನಮ್ಮ ಎಚ್ಚರಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ನಮಗೆ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳು ಬೇಡ ಎಂದಿದ್ದರು.

ಫೆಬ್ರವರಿ 9ರಂದು ಪರಮಾಣು ಶಸ್ತ್ರಾಸ್ತ್ರಗಳಿಲ್ಲ..., ಫೆಬ್ರವರಿ 6ರಂದು ಒಂದು ವಿಷಯ, ಮತ್ತು ನೇರವಾಗಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲ, ಜನವರಿ 29ರಂದು ನಂಬರ್ ಒನ್, ಪರಮಾಣು ಇಲ್ಲ, ಕಳೆದ ವರ್ಷ ಜೂನ್ 25ರಂದು ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ. ನಾನು ರಾಜಕೀಯ ಕೆಲಸ ಮಾಡುವ ಮೊದಲೇ ಅದನ್ನು ಹೇಳಿದ್ದೇನೆ ಎಂದು ತಿಳಿಸಿದ್ದರು.

2024ರ ನವೆಂಬರ್ 3ರಂದು ಅವರು , ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಪರಮಾಣು ಶಸ್ತ್ರಾಸ್ತ್ರಗಳು ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ದೊಡ್ಡ ಏಕೈಕ ಬೆದರಿಕೆಯಾಗಿದೆ.

2024ರ ಅಕ್ಟೋಬರ್ 7ರಂದು ನನಗೆ ಒಂದೇ ಒಂದು ವಿಷಯ ಬೇಕು. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಅವರಿಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಬಾರದು ಎಂದಿದ್ದರು.

2024ರ ಆಗಸ್ಟ್ 27ರಂದು ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ನಾವು ಅವರಿಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಬಾರದು. ನಾನು ಇದನ್ನು ಹೇಳುತ್ತೇನೆ. ಅವರು ನಿಜವಾಗಿಯೂ ಪರಮಾಣು ಶಸ್ತ್ರಾಸ್ತ್ರ ಹೊಂದಿದರೆ ಇಸ್ರೇಲ್ ಮಾತ್ರವಲ್ಲ ಅದು ಕೂಡ ಇಲ್ಲವಾಗುತ್ತದೆ ಎಂದು ಹೇಳಿದ್ದರು.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಮೃತರ ಸಂಖ್ಯೆ 787ಕ್ಕೆ ಏರಿಕೆ

2020ರ ಜನವರಿ 6ರಂದು, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ, 2019ರ ಜೂನ್ 22ರಂದು, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ, 2011ರ ನವೆಂಬರ್ 4ರಂದು ಶ್ವೇತಭವನವನ್ನು ಪ್ರವೇಶಿಸುವ ವರ್ಷಗಳ ಮೊದಲೇ ಅವರು ನಾವು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅನುಮತಿಸುವುದಿಲ್ಲ ಎಂದಿದ್ದರು.

ಹೀಗೆ ಅಮೆರಿಕ ಅಧ್ಯಕ್ಷರು ಹಲವು ಎಚ್ಚರಿಕೆಯನ್ನು ನೀಡಿದ್ದರು. ಇರಾನ್ ಮಾತ್ರ ಇದನ್ನು ನಿರ್ಲಕ್ಷಿಸಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯುವುದೊಂದೇ ಅಮೆರಿಕನ್ ನಿಲುವಾಗಿದೆ ಎಂದು ಶ್ವೇತಭವನ ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author