ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಸ್ಫೋಟ ಪ್ರಕರಣ; ಹಮಾಸ್‌ ರೀತಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರರು!

Red Fort Blast: ದೆಹಲಿಯಲ್ಲಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇದೀಗ ಉಗ್ರರ ಯೋಜನೆಗಳ ಕುರಿತು ಮಾಹಿತಿ ನೀಡಿದ್ದು, ದೆಹಲಿ ಮೇಲೆ ಉಗ್ರರು ಹಮಾಸ್‌ ಮಾದರಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಸಾಂಧರ್ಬಿಕ ಚಿತ್ರ ದೆಹಲಿ ಸ್ಫೋಟ

ನವದೆಹಲಿ: ಕೆಂಪು ಕೋಟೆಯ ಬಳಿಯ ಸ್ಫೋಟದ ಪ್ರಕರಣದ ತನಿಖೆ (Delhi Blast) ನಡೆಸುತ್ತಿರುವ ಎನ್‌ಐಎ (NIA) ಅಧಿಕಾರಿಗಳು ಇದೀಗ ಸ್ಫೋಟಕ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾರು ಸ್ಫೋಟಿಸುವ ಮುನ್ನ ಬೇರೆ ಬೇರೆ ರೀತಿಯಲ್ಲಿ ಸ್ಫೋಟ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ನವೆಂಬರ್ 10 ರಂದು ಕೆಂಪು ಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಗೆ ಮುನ್ನ ಡ್ರೋನ್‌ಗಳನ್ನು ಶಸ್ತ್ರಾಸ್ತ್ರವಾಗಿ ಮಾರ್ಪಡಿಸಲು ಮತ್ತು ಬಳಕೆಗಾಗಿ ರಾಕೆಟ್‌ಗಳ ಮೂಲಕ ಬ್ಲಾಸ್ಟ್‌ ನಡೆಸಲು ಹುನ್ನಾರ ನಡೆಸಿದ್ದರು. ಅಷ್ಟೇ ಅಲ್ಲದೇ ಹಮಾಸ್‌ ಉಗ್ರರಿಂದ (Hamas Terrorists) ಇವರು ಪ್ರೇರೇಪಿತವಾಗಿದ್ದು, ಅವರ ರೀತಿಯಲ್ಲಿ ದಾಳಿ ನಡೆಸಲು ಸಜ್ಜಾಗಿದ್ದರು ಎನ್ನಲಾಗಿದೆ.

ಅಕ್ಟೋಬರ್ 7, 2023 ರಂದು ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿಯ ರೀತಿಯಲ್ಲಿ ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲು ಉಗ್ರರು ಪ್ಲಾನ್‌ ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ್ಮಹತ್ಯಾ ಬಾಂಬರ್‌ ಡಾ. ನಬಿ ಶೂ ಮೂಲಕ ಸ್ಫೋಟ ಮಾಡಲು ಯೋಚಿಸಿದ್ದ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳು ದೊರೆತಿದೆ.

ಮತ್ತೊಬ್ಬ ಉಗ್ರನ ಬಂಧನ

ಆತ್ಮಹತ್ಯಾ ಬಾಂಬರ್ ಡಾ. ಉಮರ್ ಉನ್ ನಬಿ ಜೊತೆ ನಿಕಟವಾಗಿ ಕೆಲಸ ಮಾಡಿದ್ದ ಮತ್ತೊಬ್ಬ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಅನಂತ್‌ನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿಯಾಗಿರುವ ಜಾಸಿರ್ ವಾನಿ, ದೆಹಲಿಯ ದಾಳಿಯ ಹಿಂದಿನ ಸಕ್ರಿಯ ಸಹ-ಸಂಚುಗಾರನಾಗಿದ್ದ. ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟಕ್ಕೆ ಮುಂಚಿತವಾಗಿ ಡ್ರೋನ್‌ಗಳನ್ನು ಮಾರ್ಪಡಿಸಿ ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ದೆಹಲಿಗೆ ಕರೆತರಲಾಗಿದ್ದು, ಅಲ್ಲಿ ಆತನನ್ನು NIA ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Delhi Blast: ದೆಹಲಿ ಸ್ಫೋಟ ಪ್ರಕರಣ; ಶೂನಲ್ಲಿ ಸ್ಫೋಟಕ ಇಟ್ಟು ಬ್ಲಾಸ್ಟ್‌ ಮಾಡಲು ನಡೆದಿತ್ತಾ ಪ್ಲಾನ್‌?

ಮಾರಕ ಕಾರ್ ಬಾಂಬ್ ಸ್ಫೋಟಕ್ಕೂ ಮುನ್ನ ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸುವ ಮೂಲಕ ಭಯೋತ್ಪಾದಕ ದಾಳಿಗಳನ್ನು ನಡೆಸಲು ಡ್ಯಾನಿಶ್ ತಾಂತ್ರಿಕ ಬೆಂಬಲವನ್ನು ನೀಡಿದ್ದಾನೆ ಎಂದು NIA ಹೇಳಿಕೆಯಲ್ಲಿ ತಿಳಿಸಿದೆ. ವೈಟ್ ಕಾಲರ್ ಮಾಡ್ಯೂಲ್ ಮತ್ತು ಅದರ ಆತ್ಮಹತ್ಯಾ ಬಾಂಬರ್ ನಬಿ ನಡೆಸಿದ ದಾಳಿಯ ಹಿಂದೆ ಅನಂತ್‌ನಾಗ್ ಜಿಲ್ಲೆಯ ಭಯೋತ್ಪಾದಕ ಶಂಕಿತ ಸಕ್ರಿಯ ಸಹ-ಸಂಚುಕೋರನಾಗಿ ಕೆಲಸ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮೆರಾಗಳ ಜೊತೆಗೆ ಭಾರವಾದ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಅಳವಡಿಸಲಾದ ಶಕ್ತಿಶಾಲಿ ಡ್ರೋನ್‌ಗಳನ್ನು ತಯಾರಿಸಲು ಡ್ಯಾನಿಶ್ ಪ್ರಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕ ಘಟಕವು ಜನದಟ್ಟಣೆಯ ಪ್ರದೇಶದ ಮೇಲೆ ಶಸ್ತ್ರಾಸ್ತ್ರ ಸಜ್ಜಿತ ಡ್ರೋನ್ ದಾಳಿಗೆ ಯೋಚಿಸಿತ್ತು. ಹಮಾಸ್‌ನಂತಹ ಗುಂಪುಗಳು ಮತ್ತು ಯುದ್ಧಪೀಡಿತ ಸಿರಿಯಾದ ಅನೇಕ ಗುಂಪುಗಳು ಇಂತಹ ತಂತ್ರವನ್ನು ಬಳಸಿವೆ ಎಂದು ಮೂಲಗಳು ತಿಳಿಸಿವೆ.