ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಕೋಲಸ್ ಮಡುರೊ ಬಂಧನದ 9 ತಿಂಗಳ ಬಳಿಕ ವೆನೆಜುವೆಲಾದೊಂದಿಗೆ ಅತೀ ದೊಡ್ಡ ತೈಲ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

US Oil Deal: ಸರಿಸುಮಾರು 9 ತಿಂಗಳ ಹಿಂದೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಮಿಲಿಟರಿ ಬಂಧನ ಮಾಡಿತ್ತು. ಇದರ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಜೊತೆ ಅತೀ ದೊಡ್ಡ ತೈಲ ಒಪ್ಪಂದವನ್ನು ಘೋಷಿಸಿದ್ದಾರೆ. ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು ಈ ಒಪ್ಪಂದದಿಂದ ದಕ್ಷಿಣ ಅಮೆರಿಕಾ ಭಾಗದಲ್ಲಿ ಬಳಸದೇ ಇರುವ ತೈಲ ನಿಕ್ಷೇಪಗಳ ಅಪಾರ ಮೊತ್ತಕ್ಕೆ ಅಮೆರಿಕಕ್ಕೆ ಪ್ರವೇಶ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ವೆನೆಜುವೆಲಾ (Venezuela) ಜೊತೆ ವಿಶ್ವದ ಇತಿಹಾಸದಲ್ಲಿ ಅತಿ ದೊಡ್ಡ ತೈಲ ಒಪ್ಪಂದವನ್ನು (US Oil Deal) ಘೋಷಿಸಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Venezuela president Nicolas Maduro) ಅವರನ್ನುಅಮೆರಿಕದ ಮಿಲಿಟರಿ ಬಂಧಿಸಿದ ಸರಿಸುಮಾರು ಒಂಬತ್ತು ತಿಂಗಳ ಬಳಿಕ ಇದು ಘೋಷಣೆಯಾಗಿದೆ. ಈ ಕುರಿತು ಶುಕ್ರವಾರ ಟ್ರುತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಅವರು ತಮ್ಮ ಆಡಳಿತವು ವೆನೆಜುವೆಲಾ ಜೊತೆ ವ್ಯಾಪಕ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಅಮೆರಿಕವು ವೆನೆಜುವೆಲಾದೊಂದಿಗೆ ಅತೀ ದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಇದು ಜಾರಿಯಾದರೆ ದಕ್ಷಿಣ ಅಮೆರಿಕಾದ ದೇಶದ ಬಳಸದ ತೈಲ ನಿಕ್ಷೇಪಗಳನ್ನು ಅಮೆರಿಕ ಕೂಡ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

Birth centenary of Ramakrishna Hegde: ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ಹೆಗಡೆ

ಈ ಒಪ್ಪಂದದ ಕುರಿತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ವಿಶ್ವದ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ತೈಲ ಒಪ್ಪಂದವಾಗಿದೆ ಎಂದರು.

ಈ ಕುರಿತು ಡೆಲ್ಸಿ ರೊಡ್ರಿಗಸ್ ಸರ್ಕಾರ ಹೇಳಿಕೆ ನೀಡಿದ್ದು, ಅಮೆರಿಕದೊಂದಿಗಿನ ಒಪ್ಪನಾದವು 17 ಕ್ಷೇತ್ರಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಇದರಿಂದ ವೆನೆಜುವೆಲಾದ ತೈಲ ಉದ್ಯಮಕ್ಕೆ 100 ಶತಕೋಟಿ ಡಾಲರ್ ಹೂಡಿಕೆಯನ್ನು ಸೆಳೆಯಬಹುದು. ಇದರಿಂದ ಕ್ಯಾರಕಾಸ್‌ಗೆ 209 ಶತಕೋಟಿಗೂ ಹೆಚ್ಚಿನ ಡಾಲರ್ ತೆರಿಗೆ ಬರಲಿದೆ ಎಂದು ತಿಳಿಸಿದೆ.



ಟೆಲಿಗ್ರಾಮ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರೊಡ್ರಿಗಸ್, ಈ ಒಪ್ಪಂದದಿಂದ ದೇಶಕ್ಕೆ ಪುನರುಜ್ಜೀವ ನೀಡಿದಂತಾಗುತ್ತದೆ. ಇದು ಗಮನಾರ್ಹ ಪರಿಣಾಮವನ್ನು ಬೀರಲಿದೆ ಎಂದು ತಿಳಿಸಿದ್ದಾರೆ.

ತೈಲ ನಿಕ್ಷೇಪಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊಸ ಖಾಸಗಿ ಕಂಪನಿಯನ್ನು ರಚಿಸಲು ವೆನೆಜುವೆಲಾದ ಹೆಸರಿಸದ ಖಾಸಗಿ ಆಪರೇಟರ್‌ನೊಂದಿಗೆ ಯುನೈಟೆಡ್ ಸ್ಟೇಟ್ಸ್ ಪಾಲುದಾರಿಕೆ ಹೊಂದಲು ಈ ಒಪ್ಪಂದವು ಅವಕಾಶ ನೀಡುತ್ತದೆ. ರೊಡ್ರಿಗಸ್ ಅವರು ಈ ಕಂಪೆನಿಗೆ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು 100 ವರ್ಷಗಳ ಹಕ್ಕುಗಳನ್ನು ನೀಡಿದ್ದಾರೆ. ಒಪ್ಪಂದದ ಅಡಿಯಲ್ಲಿ ಹೊಸ ಖಾಸಗಿ ಕಂಪೆನಿಯು ಉತ್ಪಾದನೆಯ ಶೇಕಡಾ 55ರಷ್ಟನ್ನು ಯುನೈಟೆಡ್ ಸ್ಟೇಟ್ಸ್‌ಗೆ ನೀಡಲಿದೆ ಎಂದು ಅಮೆರಿಕ ಮೂಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Kasturi Rangan Report: ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡಲ್ಲ: ಪರಮೇಶ್ವರ

ಮಾದಕ ವಸ್ತು ಮಾರಾಟ, ಭಯೋತ್ಪಾದನೆ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಅಮೆರಿಕದ ಸೇನೆಯು ಹಿಂದಿನ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು. ಇರಾನ್ ಜೊತೆಗೆ ಯುದ್ಧ ಪ್ರಾರಂಭವಾದ ಮೇಲೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ವೆನೆಜುವೆಲಾ ಜೊತೆಗಿನ ಈ ಒಪ್ಪಂದದಿಂದ ರಾಜಕೀಯ, ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ದೊಡ್ಡ ಮಟ್ಟಿನ ಲಾಭವನ್ನೇ ತಂದುಕೊಡಲಿದೆ. ಆದರೆ ತಕ್ಷಣಕ್ಕೆ ತೈಲ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಇಡುವಂತಿಲ್ಲ. ಯಾಕೆಂದರೆ ಒಪ್ಪಂದಕ್ಕೆ ಸಂಬಂಧಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಇದಕ್ಕಾಗಿ ಶತಕೋಟಿ ಡಾಲರ್‌ಗಳು ಬೇಕಾಗಬಹುದು ಎನ್ನುತ್ತಾರೆ ಮರುಕಟ್ಟೆತಜ್ಞರು.

ವಿದ್ಯಾ ಇರ್ವತ್ತೂರು

View all posts by this author