ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಇಂದು 17 ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದಲ್ಲಿ ಈಗಾಗಲೇ ಸಾವಿರಾರು ಮಂದಿ ಪ್ರಾಣ (America Israel Iran War) ಕಳೆದುಕೊಂಡಿದ್ದು, ಅಪಾರ ಪ್ರಮಾಣದ ನಾಶ ಉಂಟಾಗಿದೆ. ಇದೀಗ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇರಾನ್ ಅಮೆರಿಕಕ್ಕೆ ಯಾವುದೇ "ಬೆದರಿಕೆ" ಒಡ್ಡಿಲ್ಲ ಮತ್ತು ಇಸ್ರೇಲಿ ಒತ್ತಡವು ಟ್ರಂಪ್ ಅವರನ್ನು ಯುದ್ಧವನ್ನು ಪ್ರಾರಂಭಿಸುವಂತೆ ಮಾಡಿದೆ ಎಂದು ಕೆಂಟ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಟ್ರಂಪ್ ಆಡಳಿತದ ಇರಾನ್ ಯುದ್ಧವನ್ನು "ಒಳ್ಳೆಯ ಮನಸ್ಸಾಕ್ಷಿಯಿಂದ" ಬೆಂಬಲಿಸಲು ಸಾಧ್ಯವಿಲ್ಲ ಎಂದು ಕೆಂಟ್ ಬರೆದಿದ್ದಾರೆ.
ಕೆಂಟ್ ಬರೆದಿರುವ ರಾಜಿನಾಮೆ ಪತ್
ಮಧ್ಯಪ್ರಾಚ್ಯದಲ್ಲಿನ ಯುದ್ಧಗಳು ಅಮೆರಿಕದ ಜೀವಗಳನ್ನು ಮಾತ್ರ ದೋಚುತ್ತವೆ ಮತ್ತು ದೇಶದ ಸಂಪತ್ತನ್ನು ಬರಿದಾಗಿಸುತ್ತವೆ ಎಂದು ಟ್ರಂಪ್ ಜೂನ್ 2025 ರವರೆಗೆ ತಿಳಿದಿದ್ದರು ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಹಿರಿಯ ಇಸ್ರೇಲಿ ಅಧಿಕಾರಿಗಳು ಮತ್ತು ಅಮೆರಿಕದ ಮಾಧ್ಯಮದ "ಪ್ರಭಾವಿ ಸದಸ್ಯರು" "ತಪ್ಪು ಮಾಹಿತಿ ಅಭಿಯಾನ"ದ ಮೂಲಕ ಇರಾನ್ ಜೊತೆ ಯುದ್ಧವನ್ನು ಪ್ರೋತ್ಸಾಹಿದ್ದಾರೆ ಎಂದು ಆರೋಪಿಸಿದ್ದಾರೆ. ಇಸ್ರೇಲ್ ಮತ್ತು ಅದರ ಪ್ರಬಲ ಅಮೇರಿಕನ್ ಲಾಬಿಯ ಒತ್ತಡದಿಂದಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇರಾನ್‌ನ ದುಷ್ಟರಿಗೆ ತಕ್ಕ ಪಾಠ ಕಲಿಸುತ್ತೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥರಾಗಿ, ಕೆಂಟ್ ಭಯೋತ್ಪಾದಕ ಬೆದರಿಕೆಗಳನ್ನು ವಿಶ್ಲೇಷಿಸುವ ಮತ್ತು ಪತ್ತೆಹಚ್ಚುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಬಲಪಂಥೀಯ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿರುವ ಮಾಜಿ ರಾಜಕೀಯ ಅಭ್ಯರ್ಥಿ ಕೆಂಟ್, ಕಳೆದ ಜುಲೈನಲ್ಲಿ 52-44 ಮತಗಳಿಂದ ಹುದ್ದೆಗೇರಿದ್ದರು.