ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Crash: 25 ಜನರಿದ್ಧ ಸರಕು ವಿಮಾನ ಪತನ- ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ- ಇಲ್ಲಿದೆ ಭಯಾನಕ ವಿಡಿಯೊ

Cargo plane crash: ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುಗೆ ಹೊರಟಿದ್ದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ನ ಯುಪಿಎಸ್ ಸರಕು ವಿಮಾನ ಮಂಗಳವಾರ ಸಂಜೆ ಅಪಘಾಕ್ಕೀಡಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ವಿಮಾನ ದುರಂತದಿಂದ ಹಲವಾರು ಕಟ್ಟಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದು ಸುಮಾರು 8 ಕಿ.ಮೀ. ವ್ಯಾಪಿಸಿದ್ದು, ಇದನ್ನು ನಿಯಂತ್ರಿಸಲು ಲೂಯಿಸ್‌ವಿಲ್ಲೆ ಮೆಟ್ರೋ ತುರ್ತು ಸೇವಾ ಸಿಬ್ಬಂದಿಗೆ ಸಾಕಷ್ಟು ಸಮಯ ಬೇಕಾಯಿತು. ಆದರೂ ಕೆಲವೆಡೆ ಬುಧವಾರ ಬೆಳಗಿನವರೆಗೂ ಬೆಂಕಿ ಹೊತ್ತಿ ಉರಿಯುತ್ತಿತ್ತು ಎನ್ನಲಾಗಿದೆ.

ಟೇಕಾಫ್ ವೇಳೆ ಸರಕು ವಿಮಾನವೊಂದು ಪತನಗೊಂಡಿರುವ ದೃಶ್ಯ

ಲೂಯಿಸ್‌ವಿಲ್ಲೆ; ಯುಪಿಎಸ್ ಸರಕು (Cargo plane crash) ವಿಮಾನವು ಕೆಂಟುಕಿಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Louisvilles Muhammad Ali International Airport) ಟೇಕಾಫ್ ಆಗುವಾಗ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ನ ( Federal Aviation Administration) ಯುಪಿಎಸ್ ಸರಕು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತಕ್ಕೀಡಾಗಿ ಪತನಗೊಂಡಿದೆ. ಸಂಜೆ 5.15ರ ಸುಮಾರಿಗೆ ಈ ವಿಮಾನ ಹೊನೊಲುಲುಗೆ ಹೊರಟಿತ್ತು. ಇದರ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಜೆ ಯುಪಿಎಸ್ ಸರಕು ವಿಮಾನ ಟೇಕಾಫ್ ಆಗುವಾಗ ಅಪಘಾತಕ್ಕೀಡಾಗಿದೆ. ಈ ಘಟನೆಯಿಂದ ಏಳು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ತಿಳಿಸಿದೆ.

ಇದನ್ನೂ ಓದಿ: Asim Munir: ಪಾಕಿಸ್ತಾನದ ಸರ್ವಾಧಿಕಾರಿ ಆಗಲು ಹೊರಟ್ರಾ ಅಸಿಮ್ ಮುನೀರ್; ಸಂವಿಧಾನವನ್ನೇ ಬದಲು ಮಾಡ್ತಿರೋದ್ಯಾಕೆ?

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ವಿಮಾನ ಅಪಘಾತಕ್ಕೀಡಾದ ಬಳಿಕ ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಟೇಕಾಫ್ ಆದ ಬಳಿಕ ವಿಮಾನದ ಎಡ ರೆಕ್ಕೆಯಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಹೊಗೆಯು ಆವರಿಸಿದೆ. ವಿಮಾನ ಸ್ವಲ್ಪ ಎತ್ತರಕ್ಕೆ ಹರಿದಾಗ ಅಪಘಾತಕ್ಕೀಡಾಗಿ ಬೃಹತ್ ಬೆಂಕಿಯ ಉಂಡೆಯಾಗಿ ಕಾಣಿಸಿತ್ತು. ವಿಮಾನ ಅಪಘಾತದಿಂದ ಹಲವಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟುಹೋದವು. ಯುಪಿಎಸ್ ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.



ದುರಂತ ನಡೆದ ತಕ್ಷಣ ಲೂಯಿಸ್‌ವಿಲ್ಲೆ ಮೆಟ್ರೋ ತುರ್ತು ಸೇವಾ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲರಿಗೂ ತುರ್ತು ಸೇವೆ ನೀಡಲು ಮುಂದಾಗಿದೆ. ಹಲವಾರು ಮಂದಿ ಗಾಯಗೂಂಡಿದ್ದು, ಕೆಲವು ಪ್ರದೇಶಗಳಲ್ಲಿ ತುಂಬಾ ಹೊತ್ತಿನವರೆಗೂ ಬೆಂಕಿ ಉರಿಯುತ್ತಿತ್ತು.

ದುರಂತ ನಡೆದ ಪ್ರದೇಶದಲ್ಲಿ ಅನೇಕ ರಸ್ತೆಗಳನ್ನು ಮುಚ್ಚಲಾಗಿತ್ತು. ಘಟನಾ ಸ್ಥಳದಿಂದ ದೂರವಿರುವಂತೆ ಲೂಯಿಸ್‌ವಿಲ್ಲೆ ಮೇಯರ್ ಕ್ರೇಗ್ ಗ್ರೀನ್‌ಬರ್ಗ್ ಅವರು ಸಂಜೆ ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿರುವ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್, ಗಾಯಾಳುಗಳ ಚೇತರಿಕೆಗಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: False Murder Case: ಮಾಡದ ಅಪರಾಧಕ್ಕೆ 43 ವರ್ಷ ಜೈಲು ಶಿಕ್ಷೆ; ಭಾರತೀಯ ವ್ಯಕ್ತಿಯ ಗಡಿಪಾರಿಗೆ ಅಮೆರಿಕ ಕೋರ್ಟ್‌ ತಡೆ

ಘಟನೆಗೆ ಸಂಬಂಧಿಸಿ ತನಿಖೆ ನಡೆಸುವುದಾಗಿ ಹೇಳಿರುವ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು, ಇದರ ಕಾರಣವನ್ನು ಪತ್ತೆ ಹಚ್ಚಲು ಮತ್ತು ಮುಂದೆ ಸುರಕ್ಷತಾ ಶಿಫಾರಸುಗಳನ್ನು ನೀಡಲು ಸುಮಾರು 12 ರಿಂದ 24 ತಿಂಗಳುಗಳು ಬೇಕಾಗಬಹುದು ಎಂದು ತಿಳಿಸಿದೆ.

ಯುಪಿಎಸ್ ಸರಕು ವಿಮಾನ ಅಪಘಾತದಿಂದ ಅಮೆಜಾನ್, ವಾಲ್‌ಮಾರ್ಟ್ ಮತ್ತು ಯುಎಸ್ ಅಂಚೆ ಸೇವೆಯಂತಹ ಪ್ರಮುಖ ಯುಪಿಎಸ್ ವಿತರಣೆಗಳಿಗೆ ಅಡ್ಡಿಯಾಗಲಿದೆ ಎನ್ನಲಾಗಿದೆ. ಯುಪಿಎಸ್ ನ ಅತಿದೊಡ್ಡ ಪ್ಯಾಕೇಜ್ ನಿರ್ವಹಣಾ ಸೌಲಭ್ಯವನ್ನು ಹೊಂದಿರುವ ಲೂಯಿಸ್‌ವಿಲ್ಲೆಯಲ್ಲಿ ಇದಕ್ಕಾಗಿ ಸಾವಿರಾರು ಜನರನ್ನು ನೇಮಿಸಿಕೊಳ್ಳುತ್ತದೆ. ಇದಕ್ಕಾಗಿ 300 ದೈನಂದಿನ ವಿಮಾನಗಳಲ್ಲಿ ಗಂಟೆಗೆ 4,00,000 ಕ್ಕೂ ಹೆಚ್ಚು ಪ್ಯಾಕೇಜ್‌ಗಳನ್ನು ವಿತರಿಸಲಾಗುತ್ತದೆ. ಅಪಘಾಗೊಂಡ ವಿಮಾನವು 34 ವರ್ಷ ಹಳೆಯದು ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author