ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಶ್ಲೀಲ ವಿಡಿಯೊ ನೋಡುವಾಗ ತನ್ನದೇ ಖಾಸಗಿ ವಿಡಿಯೊ ಕಂಡು ಬೆಚ್ಚಿಬಿದ್ದ ಯುವಕ

ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಹುಡುಕುತ್ತಿದ್ದ ಯುವಕನೊಬ್ಬ ಭಯಾನಕ ಅನುಭವಕ್ಕೆ ಸಾಕ್ಷಿಯಾಗಿದ್ದಾನೆ. ತಾನು ಮತ್ತು ತನ್ನ ಗೆಳತಿಯ ಖಾಸಗಿ ಕ್ಷಣಗಳನ್ನು ಕಂಡು ಆತ ಬೆಚ್ಚಿಬಿದ್ದಿದ್ದಾನೆ. 2023ರಲ್ಲಿ ದಕ್ಷಿಣ ಚೀನಾದ ಶೆನ್ಜೆನ್ ನಗರದ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ದೃಶ್ಯಗಳು ರಹಸ್ಯವಾಗಿ ದಾಖಲಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಆನ್‌ಲೈನ್ ಗೌಪ್ಯತೆ ಮತ್ತು ಸೈಬರ್ ಭದ್ರತೆ ಕುರಿತ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಹಾಂಕಾಂಗ್, ಫೆ. 7: ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೊಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಯುವಕನೊಬ್ಬ ಬೆಚ್ಚಿಬಿದ್ದಿದ್ದಾನೆ. ವಿಡಿಯೊವೊಂದನ್ನು ಪ್ಲೇ ಮಾಡಿದಾಗ, ಅದರಲ್ಲಿರುವುದು ತಾನು ಮತ್ತು ತನ್ನ ಗೆಳತಿ ಎನ್ನುವುದು ಗೊತ್ತಾಗಿ ದಂಗಾಗಿ ಹೋಗಿದ್ದಾನೆ. ಹಾಂಕಾಂಗ್‌ನಲ್ಲಿ ನಡೆದ ಈ ಘಟನೆ ಸದ್ಯ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ.

2023ರಲ್ಲಿ ಎರಿಕ್ (ಹೆಸರು ಬದಲಿಸಲಾಗಿದೆ) ಎಂಬ ಯುವಕ ತನ್ನ ಗೆಳತಿಯೊಂದಿಗೆ ದಕ್ಷಿಣ ಚೀನಾದ ಶೆನ್ಜೆನ್ (Shenzhen) ನಗರದ ಹೋಟೆಲ್ ಒಂದರಲ್ಲಿ ತಂಗಿದ್ದ. ಕೆಲವು ವಾರಗಳ ನಂತರ, ಆತ ನಿಯಮಿತವಾಗಿ ಬಳಸುವ ಅಶ್ಲೀಲ ಸೈಟ್‌ನಲ್ಲಿ ವಿಡಿಯೊವೊಂದನ್ನು ನೋಡುತ್ತಿದ್ದಾಗ, ಅದರಲ್ಲಿರುವ ಹೋಟೆಲ್ ಕೊಠಡಿ ತಾನು ತಂಗಿದ್ದ ಕೊಠಡಿಯೇ ಎಂದು ಗುರುತಿಸಿದ್ದಾನೆ. ವಿಡಿಯೊ ಮುಂದುವರಿದಂತೆ ತಾನು ಮತ್ತು ತನ್ನ ಗೆಳತಿ ಬ್ಯಾಗ್ ಇಡುತ್ತಿರುವುದು ಮತ್ತು ನಂತರದ ಖಾಸಗಿ ಕ್ಷಣಗಳು ಅದರಲ್ಲಿ ರೆಕಾರ್ಡ್ ಆಗಿರುವುದನ್ನು ಕಂಡು ಆತ ದಿಗ್ಭ್ರಮೆಗೊಂಡಿದ್ದಾನೆ.

ಹಿಡನ್ ಕ್ಯಾಮರಾದಲ್ಲಿ ಖಾಸಗಿ ಕ್ಷಣ ಸೆರೆ

ಹೋಟೆಲ್ ಕೊಠಡಿಯಲ್ಲಿ ಅಳವಡಿಸಲಾಗಿದ್ದ ರಹಸ್ಯ ಕ್ಯಾಮರಾ (Hidden Camera) ಈ ಜೋಡಿಯ ಸುಮಾರು ಒಂದು ಗಂಟೆಯ ದೃಶ್ಯಗಳನ್ನು ಸೆರೆಹಿಡಿದಿತ್ತು. ಈ ವಿಡಿಯೊವನ್ನು ಇವರ ಅನುಮತಿಯಿಲ್ಲದೆ ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ.

ವಿಕೃತ ಆಸಕ್ತಿಯೇ ಮುಳುವಾಯಿತು

ವಿಚಿತ್ರವೆಂದರೆ, ಎರಿಕ್‌ಗೆ ಈ ಹಿಂದೆ ಇಂತಹ 'ಸ್ಪೈ-ಕ್ಯಾಮೆರಾ' (ರಹಸ್ಯವಾಗಿ ಚಿತ್ರೀಕರಿಸಿದ) ವಿಡಿಯೊಗಳನ್ನು ನೋಡುವುದು ಇಷ್ಟವಿತ್ತು. ಅಂತಹ ವಿಡಿಯೊಗಳು "ನೈಜವಾಗಿರುತ್ತವೆ" ಎಂಬುದು ಆತನ ಭಾವನೆಯಾಗಿತ್ತು. ಆದರೆ ತಾನೇ ಅದಕ್ಕೆ ಬಲಿಯಾದಾಗ ಅದರ ಭೀಕರತೆ ಅರಿವಿಗೆ ಬಂದಿದೆ.

ಮಾನಸಿಕ ಆಘಾತ

ಈ ವಿಷಯ ತಿಳಿದ ನಂತರ ಆತನ ಗೆಳತಿ ಎಮಿಲಿ ತೀವ್ರ ಆತಂಕಕ್ಕೊಳಗಾಗಿದ್ದಾಳೆ. ತನ್ನ ಸ್ನೇಹಿತರು ಅಥವಾ ಕುಟುಂಬದವರು ಈ ವಿಡಿಯೊ ನೋಡಿರಬಹುದು ಎಂಬ ಭೀತಿಯಿಂದ ಈ ಜೋಡಿ ಹಲವು ವಾರಗಳ ಕಾಲ ಪರಸ್ಪರ ಮಾತನಾಡುವುದನ್ನೇ ನಿಲ್ಲಿಸಿತ್ತು. ಈಗ ಅವರು ಹೋಟೆಲ್‌ಗಳಿಗೆ ಹೋಗಲು ಭಯಪಡುತ್ತಿದ್ದು, ಹೊರಗೆ ಹೋಗುವಾಗಲೂ ಸಹ ಗುರುತು ಸಿಗದಂತೆ ಹ್ಯಾಟ್ ಧರಿಸುವ ಸ್ಥಿತಿ ಎದುರಾಗಿದೆ.

ಕಠಿಣ ಕಾನೂನಿದ್ದರೂ ನಿಲ್ಲುತ್ತಿಲ್ಲ ಕೃತ್ಯ

ಚೀನಾದಲ್ಲಿ ಅಶ್ಲೀಲ ಚಿತ್ರ ರೆಕಾರ್ಡ್ ಮಾಡುವುದು ಮತ್ತು ಶೇರ್ ಮಾಡುವುದು ಕಾನೂನುಬಾಹಿರವಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಈ 'ಸ್ಪೈ-ಕ್ಯಾಮ್ ಪೋರ್ನ್' ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹೋಟೆಲ್ ಮಾಲೀಕರು ಕೊಠಡಿಗಳನ್ನು ನಿಯಮಿತವಾಗಿ ತಪಾಸಣೆ ಮಾಡಬೇಕೆಂದು ಸರ್ಕಾರ ಹೊಸ ನಿಯಮಗಳನ್ನು ತಂದಿದ್ದರೂ, ಸಮಸ್ಯೆ ಮುಂದುವರಿದಿದೆ.

ಬಿಬಿಸಿ ನಡೆಸಿದ ತನಿಖೆಯ ಪ್ರಕಾರ, ಚೀನಾದಾದ್ಯಂತ ಹೋಟೆಲ್ ಕೊಠಡಿಗಳಲ್ಲಿ 180ಕ್ಕೂ ಹೆಚ್ಚು ರಹಸ್ಯ ಕ್ಯಾಮೆರಾಗಳು ಪತ್ತೆಯಾಗಿವೆ. ಎರಿಕ್ ಈಗ ಇಂತಹ ವೆಬ್‌ಸೈಟ್‌ಗಳನ್ನು ನೋಡುವುದನ್ನು ನಿಲ್ಲಿಸಿದ್ದಾನೆ. ಆದರೆ ತನ್ನ ಹಳೆಯ ವಿಡಿಯೊ ಮತ್ತೆ ಎಲ್ಲಾದರೂ ಕಾಣಿಸಿಕೊಳ್ಳುತ್ತದೆಯೇ ಎಂದು ಪರೀಕ್ಷಿಸಲು ಮಾತ್ರ ಆಗೊಮ್ಮೆ ಈಗೊಮ್ಮೆ ಆ ಸೈಟ್‌ಗೆ ಭೇಟಿ ನೀಡುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.