ಚೀನಾ: ಮೂರು ದಶಕಗಳ ಬಳಿಕ ವಿನಾಯಿತಿ ಬಳಿಕ ಇದೀಗ ಚೀನಾ (China) ಕಾಂಡೋಮ್ (condoms price) ಮೇಲೆ ತೆರಿಗೆ ( tax on condoms) ವಿಧಿಸಿದೆ. ಮೂರು ದಶಕಗಳ ಹಿಂದೆ ಚೀನಾದಲ್ಲಿ ಸಾವಿನ ಸಂಖ್ಯೆಯಲ್ಲಿ (Death rate) ಹೆಚ್ಚಳವಾಗುತ್ತಿತ್ತು. ಹೀಗಾಗಿ 1993ರಲ್ಲಿ ಅದು ಜನನ ಪ್ರಮಾಣವನ್ನು (Birth rate) ಹೆಚ್ಚಿಸಲು ಕಾಂಡೋಮ್ ಮೇಲೆ ತೆರಿಗೆ ವಿನಾಯಿತಿ ಘೋಷಿಸಿತ್ತು. ಈ ನಡುವೆ 2023ರಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ದಾಖಲೆ ಬರೆದಿತ್ತು. ಆದರೆ ಇದೀಗ ಚೀನಾದಲ್ಲಿ ಕಾಂಡೋಮ್ ಮೇಲೆ ಶೇ. 13ರಷ್ಟು ತೆರಿಗೆ ವಿಧಿಸಲಾಗಿದೆ.
ತೆರಿಗೆ ಕಾನೂನನ್ನು ಪರಿಷ್ಕೃತಗೊಳಿಸಿರುವ ಚೀನಾ ಇದೀಗ ಮೊದಲ ಬಾರಿಗೆ ಗರ್ಭನಿರೋಧಕ ಔಷಧಗಳು ಮತ್ತು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದೆ. 1993ರಿಂದ ತೆರಿಗೆ ವಿನಾಯಿತಿ ಪಡೆದಿದ್ದ ಕಾಂಡೋಮ್ ಗಳಿಗೆ ಇದೀಗ ಶೇ. 13ರಷ್ಟು ತೆರಿಗೆ ವಿಧಿಸಲಾಗಿದೆ.
ಗರ್ಭನಿರೋಧಕ ಔಷಧಗಳು ಮತ್ತು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಚೀನಾ ಇದೀಗ ನಿಧಾನವಾಗಿ ಜನನ ದರಗಳ ಮೇಲೆ ನಿಯಂತ್ರಣ ಹೆರುವ ಗುರಿಯನ್ನು ಹೊಂದಿದೆ. ಒಂದು ಮಗು ನೀತಿಯನ್ನು ಚೀನಾ ಜಾರಿಗೊಳಿಸಿದ ಬಳಿಕ ಈ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಇದು ಕಳೆದ ಮೂರು ದಶಕಗಳಿಂದ ಜಾರಿಯಲ್ಲಿದ್ದಿತು.
ಜನನ ಸಂಖ್ಯೆಗಿಂತ ಚೀನಾದಲ್ಲಿ ಮರಣ ದರವೇ ಹೆಚ್ಚಾಗಿದ್ದರಿಂದ ವಿಶ್ವದ ಜನಸಂಖ್ಯೆ ಪ್ರಮಾಣದಲ್ಲಿ ಭಾರತ 2023ರಲ್ಲಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿತ್ತು.
ಇದೀಗ ಚೀನಾದ ಜನನ ದರ ಸಾಮಾನ್ಯ ಪ್ರಮಾಣದಲ್ಲಿ ಇರುವುದರಿಂದ ಪರಿಷ್ಕೃತ ತೆರಿಗೆ ಕಾನೂನಿನಡಿಯಲ್ಲಿ ಜನವರಿ 1ರಿಂದ ಜಾರಿಯಾಗುವಂತೆ ಚೀನಾ ಗರ್ಭನಿರೋಧಕ ಔಷಧಗಳು ಮತ್ತು ಉತ್ಪನ್ನಗಳಿಗೆ ತೆರಿಗೆ ವಿಧಿಸಿದ್ದು, ಈ ವಸ್ತುಗಳಿಗೆ ಇನ್ನು ಮುಂದೆ ತೆರಿಗೆ ವಿನಾಯಿತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ. ಜನನ ದರ ಕಡಿಮೆಯಾಗುವುದನ್ನು ತಪ್ಪಿಸಲು ಜನರು ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ.
ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 387ಕ್ಕೆ ತಲುಪಿದ AQI ಸೂಚ್ಯಂಕ
ಕಳೆದ ಮೂರು ವರ್ಷಗಳಲ್ಲಿ ಚೀನಾದ ಜನಸಂಖ್ಯೆ ಸತತವಾಗಿ ಕಡಿಮೆಯಾಗಿದೆ. 2024ರಲ್ಲಿ 9.54 ಮಿಲಿಯನ್ ಜನನ ಪ್ರಮಾಣ ದಾಖಲಾಗಿದೆ. 10 ವರ್ಷಗಳ ಹಿಂದೆ ಒಂದು ಮಗು ನೀತಿಯನ್ನು ತೆಗೆದುಹಾಕಿದಾಗ 18.8 ಮಿಲಿಯನ್ ಜನನ ಪ್ರಮಾಣವಿತ್ತು. 2015ರಲ್ಲಿ ಜನನ ಮಿತಿಯನ್ನು ಎರಡು ಮಕ್ಕಳಿಗೆ ಹೆಚ್ಚಿಸಿದ್ದು, 2021ರಲ್ಲಿ ಇದನ್ನು ಮತ್ತೆ ಮೂರು ಮಕ್ಕಳಿಗೆ ಹೆಚ್ಚಿಸಲಾಗಿತ್ತು. ಇದೀಗ ಗರ್ಭ ನಿರೋಧಕಗಳಿಗೆ ತೆರಿಗೆ ವಿಧಿಸಿರುವುದರಿಂದ ಸಾರ್ವಜನಿಕ ಆರೋಗ್ಯದ ಅಪಾಯಗಳ ಬಗ್ಗೆ ಅನೇಕ ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚಿನ ಬೆಲೆಗಳಿಂದಾಗಿ ಅನೇಕರು ಇದನ್ನು ಬಳಸದೇ ಇರಬಹುದು. ಇದರಿಂದ ಹೆಚ್ಚಿನ ಗರ್ಭಪಾತಗಳು ಮತ್ತು ಆರೋಗ್ಯ ಅಪಾಯಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.