ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಸಾಕದ ಅತ್ಯಾಧುನಿಕ ತಂತ್ರಜ್ಞಾನ ಘಟಕಕ್ಕೆ ಸಿಎಂ ಡಿಕೆ ಭೇಟಿ: ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಜಪಾನ್‌ ತಂತ್ರಜ್ಞಾನ

ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿ ರ್ವಹಿಸುತ್ತಿದೆ. ಇಂಥ ಎರಡು ದಹನಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಘಟಕವು ತನ್ನ ಸ್ವಂತ ಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ. ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುತ್ತದೆ.

ಬೆಂಗಳೂರು/ಒಸಾಕ: ಜಪಾನಿನ ಒಸಾಕದ ತ್ಯಾಜ್ಯದಹನ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ನಗರ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಹುಡುಕುವುದು. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಜಾಗತಿಕ ವಿನೂತನ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡುವುದು ಈ ಭೇಟಿಯ ಉದ್ದೇಶವಾಗಿದೆ ಎಂದರು.

ಒಸಾಕದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಯೋಜಿತ ನಗರ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಪರಿಶೀಲಿಸಿದರು. ಮೈಶಿಮಾ ತ್ಯಾಜ್ಯ ದಹನ ಘಟಕದಲ್ಲಿ ದಿನಕ್ಕೆ 900 ಟನ್ ಪುರಸಭೆ ತ್ಯಾಜ್ಯವನ್ನು ವಿದ್ಯುತ್ ಆಗಿ ಪರಿವರ್ತಿಸುವ ಬಹಳ ಮುಂದುವರಿದ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ

ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿ ರ್ವಹಿಸುತ್ತಿದೆ. ಇಂಥ ಎರಡು ದಹನಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಘಟಕವು ತನ್ನ ಸ್ವಂತ ಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ. ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುತ್ತದೆ. ಇದರಿಂದ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕವಾಗಿ ನಡೆದು, ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗು ತ್ತದೆ. ಈ ಘಟಕ ತನ್ನ ತಂತ್ರಜ್ಞಾನದ ಜೊತೆಗೆ ವಿಶಿಷ್ಟ ವಿನ್ಯಾಸಕ್ಕೂ ಪ್ರಸಿದ್ಧವಾಗಿದೆ.

ಭೇಟಿಯ ಬಳಿಕ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ನಗರ ಯೋಜನೆ, ಮೂಲ ಸೌಕರ್ಯ ಮತ್ತು ಪರಿಸರ ನಿರ್ವಹಣೆಯಲ್ಲಿ ಜಾಗತಿಕ ಮನ್ನಣೆ ಪಡೆದ ಇಂಥ ಮಾದರಿಗಳನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಇಂತಹ ಘಟಕ ಗಳ ಅಧ್ಯಯನ ಮಾಡುವುದರಿಂದ ಕರ್ನಾಟಕದ ನಗರಗಳ ಮೂಲಸೌಕರ್ಯವನ್ನು ಬಲಪಡಿಸಲು, ವೈಜ್ಞಾನಿಕ ಮತ್ತು ದಕ್ಷ ತ್ಯಾಜ್ಯ ವಿಲೇವಾರಿಯನ್ನು ಉತ್ತೇಜಿಸಬಹುದು. ತ್ಯಾಜ್ಯದಿಂದ ಇಂಧನ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಸ್ವಚ್ಛ, ಸುಸ್ಥಿರ ಹಾಗೂ ವಾಸಯೋಗ್ಯ ನಗರಗಳನ್ನು ನಿರ್ಮಿಸಲು ನೆರವಾಗುತ್ತದೆ ಎಂದು ಹೇಳಿದರು.

ಕನ್ನಡಿಗರೊಂದಿಗೆ ಸಂವಾದ

ಜಪಾನ್‌ನ ನಗೋಯಾದಿಂದ ಒಸಾಕಗೆ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲು ನಿಲ್ದಾಣದಲ್ಲಿ ಜಪಾನ್‌ನಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕನ್ನಡಿಗರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ಜಪಾನ್‌ನಿಂದಲೇ ಆಶಾ ಕಾರ್ಯಕರ್ತರಿಗೆ ಕರೆ, ಭರವಸೆಯಿಡಿ: ಮನವಿ ಇನ್ನು ಜಪಾನ್ ಪ್ರವಾಸ ದಲ್ಲಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಆಶಾ ಕಾರ್ಯಕರ್ತೆ(Asha Worker)ಯರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇನೆ, ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಬುಲೆಟ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಅವರು ವಿಡಿಯೊ ಕರೆ ಮುಖಾಂತರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆತ್ತಿರುವ ಆಶಾ ಕಾರ್ಯಕರ್ತೆ ಯರ ಮುಖಂಡರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ, ನನ್ನ ಮೇಲೆ ವಿಶ್ವಾಸವಿಡಿ ಎಂದು ಭರವಸೆ ನೀಡಿದ್ದು, ನಿಮ್ಮ ಕೋಪ ಬಿಡಿ. ನನ್ನ ಮನವಿ ಒಪ್ಪದೇ ನಿರಶನ ಮುಂದುವರಿಸುತ್ತಿದ್ದೀರಿ. ಇದರಿಂದ ಆಶಾ ಕಾರ್ಯಕರ್ತ ಹೆಣ್ಣುಮಕ್ಕಳಿಗೆ ತೊಂದರೆ ಯಾಗುತ್ತದೆ ಎಂದರು.