ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂದುವರಿದ ಅಮೆರಿಕ ದಾಳಿ; ಇನ್ನು ಮುಂದೆ ಯಾವುದೇ ದೇಶದ ಗಡಿಗಳು ಸುರಕ್ಷಿತವಾಗಿರುವುದಿಲ್ಲ: ಟೆಹರಾನ್ ಎಚ್ಚರಿಕೆ

ಕಳೆದ ಫೆಬ್ರವರಿ 28ರಿಂದ ಪ್ರಾರಂಭವಾಗಿರುವ ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಳ್ಳುವ ಆತಂಕ ಉಂಟು ಮಾಡಿದೆ. ಈಗಾಗಲೇ ಕದನ ಮುಕ್ತಾಯ ಒಪ್ಪಂದವನ್ನು ಎರಡು ಪಕ್ಷಗಳು ಮುರಿದಿದ್ದು, ದಾಳಿ, ಪ್ರತಿದಾಳಿಗಳು ತೀವ್ರಗೊಂಡಿವೆ. ಇನ್ನೆರಡು ದಿನಗಳಲ್ಲಿ ಅಮೆರಿಕ ದಾಳಿಯನ್ನು ನಿಲ್ಲಿಸದೇ ಇದ್ದರೆ ಪ್ರತಿಕಾರದ ದಾಳಿಯನ್ನು ಪ್ರಾರಂಭಿಸುವುದಾಗಿ ಇರಾನ್ ಎಚ್ಚರಿಕೆಯನ್ನು ನೀಡಿದೆ.

ಸಂಗ್ರಹ ಚಿತ್ರ

ಟೆಹರಾನ್: ಇನ್ನು ಮುಂದೆ ಯಾವುದೇ ದೇಶದ ಗಡಿಗಳು ಸುರಕ್ಷಿತವಾಗಿಲ್ಲ ಎಂದು ಟೆಹರಾನ್ (tehran) ಎಚ್ಚರಿಕೆಯನ್ನು ನೀಡಿದೆ. ಸತತ 7ನೇ ದಿನವಾದ ಶುಕ್ರವಾರ ಕೂಡ ಇರಾನ್ (Iran war) ಮೇಲೆ ಅಮೆರಿಕ ದಾಳಿಯನ್ನು (US Attack) ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಯುಎಸ್ ಮಿತ್ರರಾಷ್ಟ್ರಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿಯನ್ನು ನಡೆಸಿದೆ. ಅಮೆರಿಕ ಸೇನಾ (US military) ಪಡೆಗಳು ದಾಳಿಯನ್ನು ಮುಂದುವರಿಸಿದರೆ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಹೆಚ್ಚಿಸುವುದಾಗಿ ಇರಾನ್ (Iran) ಹಿರಿಯ ಮಿಲಿಟರಿ ಸಲಹೆಗಾರರು ಬೆದರಿಕೆ ಹಾಕಿದ್ದರಿಂದ ದಾಳಿ ಮತ್ತು ಪ್ರತಿ ದಾಳಿಗಳು ಮುಂದುವರಿಸಲಾಗಿದೆ ಎಂಬುದಾಗಿ ಎರಡು ಕಡೆಯವರು ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕ ಸೇನಾ ಪಡೆಗಳು ನಿರಂತರ ದಾಳಿ ನಡೆಸುತ್ತಿರುವುದರಿಂದ ಗಡಿಯಲ್ಲಿ ಸುರಕ್ಷಿತವಾಗಿಲ್ಲ ಎಂಬ ಎಚ್ಚರಿಕೆಯನ್ನು ಟೆಹರಾನ್ ನೀಡಿದೆ. ಸತತ ಏಳನೇ ರಾತ್ರಿ ಶುಕ್ರವಾರ ಕೂಡ ಇರಾನ್ ವಿರುದ್ಧ ಅಮೆರಿಕ ಪಡೆಗಳು ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ.

ಜೋರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ? F-35 ಸೇರಿ ಹಲವು ಯುದ್ಧವಿಮಾನಗಳು ಧ್ವಂಸ!

ಈ ಕುರಿತು ಅಮೆರಿಕದ ಸೆಂಟ್ರಲ್ ಕಮಾಂಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ದಾಳಿ ಮುಂದುವರಿದರೆ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಹೆಚ್ಚಿಸುವುದಾಗಿ ಇರಾನ್ನ ಹಿರಿಯ ಮಿಲಿಟರಿ ಸಲಹೆಗಾರ ಬೆದರಿಕೆ ಹಾಕಿದ್ದರಿಂದ ಅಮೆರಿಕ ಮತ್ತು ಇರಾನ್ ನಡುವೆ ಶುಕ್ರವಾರ ಡ್ರೋನ್ ಮತ್ತು ಕ್ಷಿಪಣಿ ದಾಳಿ ಪ್ರತಿ ದಾಳಿಗಳು ನಡೆದಿದೆ. ಇರಾನ್ನ ಮಿಲಿಟರಿ ಸಾಮರ್ಥ್ಯಗಳನ್ನು ಕುಗ್ಗಿಸಲು ಅಮೆರಿಕ ಪಡೆಗಳು ದಾಳಿಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.

ಅಮೆರಿಕ ಸೇನಾ ಪಡೆಗಳು ದೇಶದ ಮೂಲ ಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ವಿಮಾನ, ರೈಲ್ವೆ ನಿಲ್ದಾಣ, ಸೇತುವೆಗಳು ಸೇರಿದಂತೆ ವಿವಿಧ ಭಾಗಗಲ್ಲಿ ಅಮೆರಿಕದ ದಾಳಿಯ ಪರಿಣಾಮ ಸಾಕಷ್ಟು ನಷ್ಟವಾಗಿದೆ ಎಂದು ಇರಾನ್ ತಿಳಿಸಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಉಲ್ಬಣಗೊಂಡ ಮೇಲೆ ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, ಇದೊಂದು ಕಳವಳಕಾರಿ ವಿಷಯವಾಗಿದೆ. ನಾಗರಿಕ ಮೂಲಸೌಕರ್ಯದ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಇರಾನ್ನ ಸರ್ವೋಚ್ಚ ನಾಯಕನ ಹಿರಿಯ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ಮೊಹ್ಸೆನ್ ರೆಜೈ ಅವರು, ಅಮೆರಿಕ ಇನ್ನೆರಡು ಮೂರು ದಿನ ದಾಳಿಯನ್ನು ಮುಂದುವರಿಸಿದರೆ ಟೆಹರಾನ್ ಪೂರ್ಣ ಪ್ರಮಾಣದ ಆಕ್ರಮಣಕಾರಿ ಕಾರ್ಯಾಚರಣೆಗಳನ್ನುಆರಂಭಿಸುತ್ತದೆ. ಇರಾನ್ ಪ್ರತೀಕಾರದ ಹೆಜ್ಜೆ ಇಡುತ್ತದೆ. ಆಗ ಯುಎಸ್ ಮಿತ್ರರಾಷ್ಟ್ರಗಳ ಯಾವುದೇ ದೇಶದ ಗಡಿ ಕೂಡ ಸುರಕ್ಷಿತವಾಗಿರುವುದಿಲ್ಲ ಎಂದರು.

ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಏರೋಸ್ಪೇಸ್ ಫೋರ್ಸ್ ಕಮಾಂಡರ್ ಮಜಿದ್ ಮೌಸಾವಿ ಅವರು ಈ ಕುರಿತು ಪ್ರತಿಕ್ರಿಯಿಸಿ, ದಕ್ಷಿಣ ಮತ್ತು ಹೊರ್ಮುಜ್ ಜಲಸಂಧಿಯ ಸುತ್ತಲಿನ ಇರಾನ್‌ನ ಕರಾವಳಿ ಸೌಲಭ್ಯಗಳ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಇರಾನ್‌ ದಾಳಿಗಳನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.

ಇರಾನ್ ನ ಇಂಧನ ಸೌಲಭ್ಯಗಳ ಮೇಲೆ ಯುಎಸ್ ದಾಳಿ ನಡೆಸುವ ಆತಂಕದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡಲು ಮತ್ತು ಹವಾನಿಯಂತ್ರಣಗಳನ್ನು ಬಳಕೆ ಮಾಡದೇ ಇರಲು ಇರಾನ್‌ನ ಇಂಧನ ಸಚಿವಾಲಯವು ನಾಗರಿಕರಲ್ಲಿ ಮನವಿ ಮಾಡಿದೆ.

ಯುಎಸ್ ದಾಳಿಗೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯ ಭಾಗದಲ್ಲಿರುವ ಯುಎಸ್ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡಿದೆ. ಕುವೈತ್‌ನ ವಿದ್ಯುತ್ ಮತ್ತು ನೀರಿನ ಸ್ಥಾವರಕ್ಕೆ ಹಾನಿಗೊಳಿಸಲಾಗಿದೆ ಎಂದು ಇರಾನ್ ಹೇಳಿದ್ದು, ಇರಾನಿನ ಡ್ರೋನ್‌ಗಳು ತನ್ನ ಹಲವಾರು ನೆಲೆಗಳು ಮತ್ತು ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರಿಂದ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಕುವೈತ್ ಸೇನೆ ತಿಳಿಸಿದೆ.

ಕತಾರ್‌ನಲ್ಲಿರುವ ಅಮೆರಿಕದ ರಾಡಾರ್ ವ್ಯವಸ್ಥೆಗಳು ಮತ್ತು ಮಿಲಿಟರಿ ವಿಮಾನಗಳ ಮೇಲೆ ದಾಳಿ ನಡೆಸಲಾಗಿದ್ದು, ದೋಹಾವು ಇರಾನ್ ನ ಕ್ಷಿಪಣಿ ದಾಳಿಯನ್ನು ತಡೆದಿರುವುದಾಗಿ ತಿಳಿಸಿದೆ.

ಒಮಾನ್‌ನಲ್ಲಿರುವ ಎರಡು ಅಮೆರಿಕದ ರಾಡಾರ್ ತಾಣಗಳು ಮತ್ತು ಸಿರಿಯಾದ ಅಲ್-ತನ್ಫ್ ಸೇನಾ ನೆಲೆ ಮೇಲೆ ಇರಾನ್ ದಾಳಿ ನಡೆಸಿರುವುದಾಗಿ ತಿಳಿಸಿದೆ. ಆದರೆ ಸಿರಿಯನ್ ಮಿಲಿಟರಿ ಯಾವುದೇ ದಾಳಿಯಾಗಿಲ್ಲ ಎಂದು ಹೇಳಿದೆ. ಜೋರ್ಡಾನ್ ಸೇನೆಯು ಮೂರು ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.

Tit-For-Tat Strike: ಮುಂದುವರಿದ ಅಮೆರಿಕ - ಇರಾನ್ ಸಂಘರ್ಷ; ವಿಮಾನ, ರೈಲು ನಿಲ್ದಾಣ, ಸೇತುವೆಗಳೇ ಟಾರ್ಗೆಟ್

ಬಹ್ರೇನ್‌ನಲ್ಲಿರುವ ಅಮೆರಿಕದ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಗುರಿಯಾಗಿಸಿಕೊಂಡಿದೆ ಇರಾನ್ ದಾಳಿ ಮಾಡಿದ್ದು, ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬಹರೈನ್ ತಿಳಿಸಿದೆ. ಇರಾಕ್‌ನ ಕುರ್ದಿಸ್ತಾನ್ ಪ್ರದೇಶದಲ್ಲಿ ಶುಕ್ರವಾರ ಡ್ರೋನ್ ಮತ್ತು ರಾಕೆಟ್ ದಾಳಿಗಳಾಗಿದ್ದು, ಕುರ್ದಿಶ್ ಸಶಸ್ತ್ರ ವಿರೋಧ ಗುಂಪಿನ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author