ಕಾಡ್ಗಿಚ್ಚು ಹೊತ್ತಿಸಿದ ಆರೋಪದ ಮೇಲೆ ಶಂಕಿತ ಆರೋಪಿಯನ್ನು ಗಮನಿಸಿದ ಪಾದಯಾತ್ರಿಗಳು ಆತನನ್ನು ಪೊಲೀಸರು ಬರುವವರೆಗೆ ತಡೆಹಿಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಲಾಸ್ ಏಂಜಲ್ಸ್‌ನ ರನ್‌ಯಾನ್ ಕ್ಯಾನ್ಯನ್‌ನಲ್ಲಿ ಈ ಘಟನೆ ನಡೆದಿದೆ. ಪಾದಯಾತ್ರಿ ದಂಪತಿಗಳು ದೂರದ ಬೆಟ್ಟದಲ್ಲಿ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ತಾಳೆಮರವನ್ನು ಗಮನಿಸಿದ್ದಾರೆ. ಈ ವೇಳೆ ಪೊದೆಗಳಿಂದ ಹೊರಬರುತ್ತಿರುವ ವ್ಯಕ್ತಿಯನ್ನು ಗಮನಿಸಿದ ಅವರಿಗೆ ಶಂಕೆಯುಂಟಾಗಿದೆ. ದಂಪತಿಯು ಆ ವ್ಯಕ್ತಿಯನ್ನು ಎದುರಿಸಿದ್ದು, ಒಂದು ಗಂಟೆ ಕಾಲ ಆತನನ್ನು ಎಲ್ಲೂ ಹೋಗದಂತೆ ತಡೆಹಿಡಿದ್ದಾರೆ.
ಘಟನೆಯ ಬಗ್ಗೆ ತಿಳಿದುಕೊಂಡ ಇತರೆ ಪಾದಯಾತ್ರಿಕರು ಸಹ ಪೊಲೀಸರು ಬರುವವರೆಗೆ ಆರೋಪಿ ಎಲ್ಲೂ ಹೋಗದಂತೆ ತಡೆಹಿಡಿದಿದ್ದಾರೆ. ಬಳಿಕ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಗೆ ದೀರ್ಘ ಕ್ರಿಮಿನಲ್ ದಾಖಲೆ ಇದೆ ಎಂದು ಪೊಲೀಸರು ದೃಢಪಡಿಸಿದರು. ಮರಕ್ಕೆ ಬೆಂಕಿ ಹಚ್ಚಿದ್ದಕ್ಕಾಗಿ ಅವನಿಗೆ ದಂಡ ವಿಧಿಸಲಾಯಿತು.
ಹಾಲಿವುಡ್‌ನ ಸ್ಕಾಟ್ ಆಂಥೋನಿ ಮಿಚೆಲ್ ಮತ್ತು ದಾವನ್ ಡಿಮಾರ್ಕೊ ದಂಪತಿ, ರನ್‌ಯಾನ್ ಕ್ಯಾನ್ಯನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ತಾಳೆ ಮರವನ್ನು ಗಮನಿಸಿದ್ದಾರೆ. ಈ ವೇಳೆ ಪೊದೆಗಳ ಮೂಲಕ ಹೊರಬಂದ ಅನುಮಾನಾಸ್ಪದ ವ್ಯಕ್ತಿಯನ್ನು ಗಮನಿಸಿದರು. ಡಿಮಾರ್ಕೊ ತನ್ನ ಫೋನ್‍ನಲ್ಲಿ ಘಟನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ವೈರಲಾಗುತ್ತಿರುವ ವಿಡಿಯೊ ಇಲ್ಲಿದೆ
ಈ ಸುದ್ದಿಯನ್ನೂ ಓದಿ: Salman Khan: ಬಾಲಿವುಡ್ ಭಾಯ್‌ಜಾನ್‌ನನ್ನು ಅಪ್ಪಿಕೊಂಡ ಪುಟ್ಟ ಕಂದಮ್ಮ- ಸಲ್ಮಾನ್ ಖಾನ್ ಕ್ಯೂಟ್ ವಿಡಿಯೊ ಫುಲ್ ವೈರಲ್
ಇನ್ನು, ಇದನ್ನು ಗಮನಿಸಿದ ಇತರೆ ಪಾದಯಾತ್ರಿಗಳು ಕೂಡ ಆ ವ್ಯಕ್ತಿಯನ್ನು ಸೆರೆಹಿಡಿಯಲು ಸಹಾಯ ಮಾಡಿದ್ದಾರೆ ಮತ್ತು ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆಯು ಹೆಲಿಕಾಪ್ಟರ್‌ಗಳು ಮತ್ತು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿತು. ಬೆಂಕಿಯನ್ನು ಒಂದು ಗಂಟೆಯೊಳಗೆ ನಂದಿಸುವಲ್ಲಿ ಯಶಸ್ವಿಯಾಯಿತು. ರಾಜ್ಯ ಉದ್ಯಾನವನ ರೇಂಜರ್‌ಗಳು ಮತ್ತು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಅಧಿಕಾರಿಗಳು ಶಂಕಿತನನ್ನು ಬಂಧಿಸಿದರು.
ಈ ಹಿಂದೆಯೂ ಇದೇ ರೀತಿ ಮಾಡಿದ್ದ!
ಶಂಕಿತ ಬೆಟ್ಟದಿಂದ ಇಳಿದು ಬಂದ ವಿಡಿಯೋವನ್ನು ಡಿಮಾರ್ಕೊ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದರು. ಈ ವಿಡಿಯೋ ತ್ವರಿತವಾಗಿ ನೆಟ್ಟಿಗರ ಗಮನ ಸೆಳೆಯಿತು. ಕೆಲವು ಬಳಕೆದಾರರು ಅದೇ ವ್ಯಕ್ತಿ ಇತರ ಉದ್ಯಾನವನಗಳಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದನ್ನು ನೋಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಆನ್‌ಲೈನ್ ದಾಖಲೆಗಳ ಪ್ರಕಾರ, ಆರೋಪಿ ವ್ಯಕ್ತಿ ಸಾಂತಾ ಮೋನಿಕಾ, ಜುಲೈ 2020 ರಿಂದ 15ಕ್ಕೂ ಹೆಚ್ಚು ಬಾರಿ ಬಂಧಿಸಲಾಗಿದೆ. ದರೋಡೆ, ವಿಧ್ವಂಸಕ ಕೃತ್ಯ, ಕಳ್ಳತನ ಮತ್ತು ನಿಯಂತ್ರಿತ ವಸ್ತುಗಳನ್ನು ಹೊಂದಿರುವುದು ಮುಂತಾದ ಆರೋಪಗಳು ಆತನ ಮೇಲಿದೆ. ಇದೀಗ ಆರೋಪಿಯ ಮೇಲೆ ಪಿಸಿ 451 (ಸಿ), ಅರಣ್ಯ ಭೂಮಿಗೆ ಬೆಂಕಿ ಹಚ್ಚಿದ ಅಪರಾಧದ ಆರೋಪ ಹೊರಿಸಲಾಗಿದೆ.