ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡೊನಾಲ್ಡ್ ಟ್ರಂಪ್ ಶಿಶುಕಾಮಿ, ಅತ್ಯಾಚಾರಿ, ದೇಶದ್ರೋಹಿ... ಶ್ವೇತಭವನದಲ್ಲಿ ದಾಳಿ ನಡೆಸಿದ ಬಂಧಿತನ ಆರೋಪ

ವಾಷಿಂಗ್ಟನ್ ಡಿ.ಸಿ.ಯ ಶ್ವೇತಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ವರದಿಗಾರರ ಭೋಜನಕೂಟದಲ್ಲಿ ದಾಳಿ ನಡೆಸಿದ ಬಂಧಿತ ಆರೋಪಿಯು ಡೊನಾಲ್ಡ್ ಟ್ರಂಪ್ ಒಬ್ಬ ಶಿಶುಕಾಮಿ, ಅತ್ಯಾಚಾರಿ, ದೇಶದ್ರೋಹಿ ಎಂದು ಆರೋಪಿಸಿದ್ದಾನೆ. ಶ್ವೇತಭವನದ ಘಟನೆಯ ಕುರಿತು ಟ್ರಂಪ್ ವಿರೋಧಿ ಪ್ರಣಾಳಿಕೆಯನ್ನು ಸಿದ್ಧಪಡಿಸಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (US President Donald Trump) ಒಬ್ಬ ಶಿಶುಕಾಮಿ, ಅತ್ಯಾಚಾರಿ, ದೇಶದ್ರೋಹಿ ಎಂದು ಶ್ವೇತಭವನದಲ್ಲಿ ದಾಳಿ ನಡೆಸಿದ ಬಂಧಿತ (White House event shooter) ಆರೋಪಿಸಿದ್ದಾನೆ. ವಾಷಿಂಗ್ಟನ್ (Washington) ಡಿ.ಸಿ.ಯ ಶ್ವೇತಭವನದಲ್ಲಿ (White House) ಶನಿವಾರ ರಾತ್ರಿ ಆಯೋಜಿಸಿದ್ದ ವರದಿಗಾರರ ಭೋಜನಕೂಟದಲ್ಲಿ ದಾಳಿ ನಡೆಸಿದ ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ ಕೋಲ್ ತೋಮಸ್ ಅಲೆನ್ ಎಂಬಾತನನ್ನು ತಕ್ಷಣವೇ ಬಂಧಿಸಲಾಗಿದೆ. ಶ್ವೇತಭವನದ ಘಟನೆಯ ಕುರಿತು ಆತ ಟ್ರಂಪ್ ವಿರೋಧಿ ಪ್ರಣಾಳಿಕೆಯನ್ನು ಸಿದ್ಧಪಡಿಸಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.

ಟ್ರಂಪ್ ವಿರೋಧಿ ಪ್ರಣಾಳಿಕೆಯಲ್ಲಿ ಆತ ಟ್ರಂಪ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಟ್ರಂಪ್ ಅವರನ್ನು ಉಲ್ಲೇಖಿಸಿಯೇ ಬರೆದಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ಬಳಿಕ ಸಂದರ್ಶನವೊಂದರಲ್ಲಿ ಡೊನಾಲ್ಡ್ ಟ್ರಂಪ್, ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಶ್ವೇತಭವನದ ಭೋಜನಕೂಟದಲ್ಲಿ ಗುಂಡಿನ ದಾಳಿ: ಪ್ರಧಾನಿ ಮೋದಿ ಖಂಡನೆ

ಬಂಧಿತನ ಬಗ್ಗೆ ಮಾತನಾಡಿದ ಟ್ರಂಪ್, "ಭಯಾನಕ ಜನ" ಎಂದು ಕರೆದಿದ್ದು, ಆತ ಪ್ರಣಾಳಿಕೆಯನ್ನು ಬರೆದಿದ್ದಾನೆ. ನಾನು ಅತ್ಯಾಚಾರಿ ಅಲ್ಲ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ ಎಂದು ಅವರು ಹೇಳಿದರು.

ನಾನು ಶಿಶುಕಾಮಿ ಅಲ್ಲ ಎಂದಿರುವ ಟ್ರಂಪ್, ಯಾರೋ ಅನಾರೋಗ್ಯ ಪೀಡಿತ ವ್ಯಕ್ತಿ ಬರೆದ ಆ ಕೆಟ್ಟದ್ದನ್ನು ಓದಿದ್ದೀರಿ. ನನಗೆ ಸಂಬಂಧವಿಲ್ಲದ ಎಲ್ಲಾ ವಿಷಯಗಳೊಂದಿಗೆ ಆತ ನನಗೆ ಸಂಬಂಧ ಕಲ್ಪಿಸಿದ್ದಾನೆ. ನನ್ನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

ತನಿಖಾಧಿಕಾರಿಗಳು ಶಂಕಿತ ನೀಡಿರುವ ಪ್ರಣಾಳಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಟ್ರಂಪ್ ಆಡಳಿತದ ಅಧಿಕಾರಿಗಳನ್ನು ಗುರಿಯಾಗಿಸಲು ಆತ ಉದ್ದೇಶಿಸಿದ್ದಾನೆ ಎಂಬುದು ಪ್ರಣಾಳಿಕೆಯಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು.

ಶ್ವೇತಭವನದ ವರದಿಗಾರರ ಸಂಘದ ವಾರ್ಷಿಕ ಭೋಜನಕೂಟದಲ್ಲಿ ಶನಿವಾರ ಡೊನಾಲ್ಡ್ ಟ್ರಂಪ್ ಅವರ ಸಂಪುಟದ ಅನೇಕ ಸದಸ್ಯರು ಮತ್ತು ಇತರ ಹಿರಿಯ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು. ಹಿಲ್ಟನ್ ಹೊಟೇಲ್‌ನ ನೆಲಮಾಳಿಗೆಯ ಬಾಲ್ ರೂಂನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಗುಂಡಿನ ದಾಳಿಯಾದ ಬಳಿಕ ಭೋಜನ ಕೂಟವನ್ನು ರದ್ದುಗೊಳಿಸಲಾಯಿತು.ದಾಳಿಯ ಸಂದರ್ಭದಲ್ಲಿ ಅಲ್ಲಿದ್ದವರನ್ನೆಲ್ಲ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಆರೋಪಿ ಹೇಳಿರುವುದೇನು?

ಶ್ವೇತಭವನದ ವರದಿಗಾರರ ಭೋಜನ ಕೂಟದ ಮೇಲೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ವ್ಯಕ್ತಿ ದಾಳಿಗೆ ಕೆಲವೇ ನಿಮಿಷಗಳ ಮೊದಲು ತನ್ನ ಕುಟುಂಬಕ್ಕೆ ಪ್ರಣಾಳಿಕೆಯನ್ನು ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಲ್ಲಿ ಆತ ತನ್ನನ್ನು ತಾನು ಕೊಲೆಗಡುಕ ಎಂದು ಕರೆಸಿಕೊಂಡಿದ್ದಾನೆ.

ಶ್ವೇತಭವನದ ಗಾಲಾ ಕಾರ್ಯಕ್ರಮದಲ್ಲಿ ದಾಳಿ ನಡೆಸಿದ ಕೋಲ್ ಥಾಮಸ್ ಅಲೆನ್, ದಾಖಲೆಯಲ್ಲಿ ತನ್ನನ್ನು "ಸ್ನೇಹಿ ಫೆಡರಲ್ ಹಂತಕ" ಎಂದು ಹೇಳಿದ್ದು, ಕಾರ್ಯಕ್ರಮದ ಭದ್ರತೆ ಸಡಿಲವಾಗಿದೆ. ಸುಲಭವಾಗಿ ಹೋಗಬಹುದು ಎಂದು ಹೇಳಿದ್ದಾನೆ.

'ಮಾತುಕತೆಗೆ ಪಾಕ್‌ ಸೂಕ್ತ ಮಧ್ಯವರ್ತಿಯಲ್ಲ'; ಪಾಕಿಸ್ತಾನವನ್ನು ಕುತಂತ್ರಿ ಎಂದ ಇರಾನ್‌!

ಟ್ರಂಪ್ ಆಡಳಿತ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶವನ್ನು ತಾನು ಹೊಂದಿರುವುದಾಗಿ ಹೇಳಿದ ಆತ, ದಾಳಿಯ ಬಗೆಗಿನ ತಮ್ಮ ವಿಧಾನವನ್ನು ಕೂಡ ವಿವರಿಸಿದ್ದಾನೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author