ಟೆಹರಾನ್, ಏ. 6: ಅಮೆರಿಕ-ಇಸ್ರೇಲ್-ಇರಾನ್ (US-Israel-Iran War) ಯುದ್ಧ ಆರಂಭವಾಗಿ 1 ತಿಂಗಳು ದಾಟಿದ್ದು, ಇನ್ನೂ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತನ್ನ ಮೇಲಿನ ದಾಳಿಗೆ ಇರಾನ್ ಶಕ್ತವಾಗಿಯೇ ಪ್ರತಿದಾಳಿ ಮೂಲಕ ಉತ್ತರ ನೀಡುವ ಮೂಲಕ ಅಮೆರಿಕದ ಯುದ್ಧೋನ್ಮಾದಕ್ಕೆ ಪಾಠ ಕಲಿಸಲು ಮುಂದಾಗಿದೆ. ಇದರ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷಭರಿತವಾಗಿದ್ದು, ಜಾಗತಿಕ ಅರ್ಥ ವ್ಯವಸ್ಥೆ ಅಲ್ಲೋಲ-ಕಲ್ಲೋಲವಾಗುತ್ತಿದೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕದನವಿರಾಮ ಒಪ್ಪಂದ ತಿರಸ್ಕರಿಸಿದ ಇರಾನ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದು, ಇರಾನ್ ಅನ್ನು ಸಂಪೂರ್ಣ ನಾಶಪಡಿಸುವುದಾಗಿ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬೆದರಿಕೆ ಹಾಕಿದ್ದಾರೆ.
"ಇರಾನ್ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ವಿದ್ಯುತ್ ಸ್ಥಾವರ, ಸೇತುವೆ ಮತ್ತು ಮೂಲ ಸೌಕರ್ಯಗಳ ಮೇಲೆ ದಾಳಿ ನಡೆಸಿ ನಾಶಪಡಿಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ಟೊನಾಲ್ಡ್ ಟ್ರಂಪ್ ನೀಡಿರುವ ಗಡುವು ಮುಗಿಯಲಿರುವ ಹಿನ್ನಲೆಯಲ್ಲಿ ಈ ಬೆದರಿಕೆ ಬಂದಿದೆ.
ಡೊನಾಲ್ಡ್ ಟ್ರಂಪ್ ಭಾಷಣ:
ಅದಕ್ಕೂ ಮೊದಲು ಕದನವಿರಾಮ ಒಪ್ಪಂದವನ್ನು ತಿರಸ್ಕರಿಸಿರುವ ಇರಾನ್ ಅದರ ಬದಲಿಗೆ 10 ಅಂಶಗಳ ಬೇಡಿಕೆಯನ್ನು ಮುಂದಿಟ್ಟಿದೆ. ಇದರಲ್ಲಿ ಶಾಶ್ವತವಾಗಿ ಯುದ್ಧವನ್ನು ನಿಲ್ಲಿಸಬೇಕೆಂಬ ಅಂಶವೂ ಇದೆ.
ʼʼ10 ಅಂಶಗಳ ಬೇಡಿಕೆಯನ್ನು ಮುಂದಿಟ್ಟಿರುವ ಇರಾನ್ ಕದನವಿರಾಮ ಒಪ್ಪಂದವನ್ನು ತಳ್ಳಿ ಹಾಕಿದೆʼʼ ಎಂದು ಸುದ್ದಿಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ. ಪಾಕಿಸ್ತಾನದ ಮೂಲಕ ಇರಾನ್ ತನ್ನ ಅಭಿಪ್ರಾಯವನ್ನು ಅಮೆರಿಕದ ಮುಂದಿಟ್ಟಿದೆ.
ಏನೆಲ್ಲ ಬೇಡಿಕೆ?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಸಂಘರ್ಷವನ್ನು ಕೊನೆಗೊಳಿಸಬೇಕು, ಹೊರ್ಮುಜ್ ಜಲಸಂಧಿಯ ಸುರಕ್ಷತೆ ಸೂಕ್ತ ವ್ಯವಸ್ಥೆ ಮಾಡಬೇಕು, ನಿರ್ಬಂಧವನ್ನು ತೆಗೆದು ಹಾಕಬೇಕು, ಪುನರ್ನಿಮಾಣಕ್ಕೆ ಸಹಾಯ ಸೇರಿ 10 ಬೇಡಿಕೆಯನ್ನು ಇರಾನ್ ಮುಂದಿಟ್ಟಿದೆ. ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 45 ದಿನಗಳ ಕದನವಿರಾಮದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಸದ್ಯ ಇರಾನ್ ಇದನ್ನು ತಿರಸ್ಕರಿಸುವ ಮೂಲಕ ಅಮೆರಿಕಕ್ಕೆ ತೀವ್ರ ಮುಖಭಂವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್ ಕ್ರಾಂತಿಕಾರಿ ಗಾರ್ಡ್ ಇಂಟೆಲ್ ಮುಖ್ಯಸ್ಥ ಮಜೀದ್ ಖಾದೇಮಿ ಸಾವು
ಭೀಕರ ದಾಳಿ ಎಚ್ಚರಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್
ಇರಾನ್‌ಗೆ ಹೊರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲು ಟ್ರಂಪ್ ಏಪ್ರಿಲ್ 5ರಂದು ಮತ್ತೆ 48 ದಿನಗಳ ಗಡುವು ನೀಡಿದ್ದರು.ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ಇರಾನ್‌ನ ಮತ್ತಷ್ಟು ತೈಲಗಾರಗಳ, ಸೇತುವೆಗಲನ್ನು ಉಡಾಯಿಸುವುದಾಗಿ ಎಚ್ಚರಿಸಿದ್ದರು. ಈ ಗಡುವು ಭಾರತೀಯ ಕಾಲಮಾನ ಏಪ್ರಿಲ್ 7ರ ಬೆಳಗ್ಗೆ 5:30ಕ್ಕೆ ಮುಕ್ತಾಯವಾಗಲಿದೆ. ಅಷ್ಟರಲ್ಲಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ದಾಳಿ ಮತ್ತಷ್ಟು ಭೀಕರಗೊಳಿಸುವುದಾಗಿ ಟ್ರಂಪ್ ಗುಡುಗಿದ್ದರು. ಇದಕ್ಕೂ ಇರಾನ್ ಸೊಪ್ಪು ಹಾಕಿಲ್ಲ. ಹೀಗಾಗಿ ಪಶ್ಚಿಮ ಏಷ್ಯಾವನ್ನು ತಲಲ್ಣಗೊಳಿಸಿರುವ ಈ ಯುದ್ಧ ಮತ್ತೊಂದು ಹಂತಕ್ಕೆ ಸಾಗುತ್ತ ಎನ್ನುವ ಭೀತಿ ಮೂಡಿದೆ. ಒಂದುವೇಳೆ ಸಂಘರ್ಷ ಮತ್ತು ಉಲ್ಭಣಗೊಂಡರೆ ಇಂಧನ ಕೊರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇರಾನ್ ತಿರುಗೇಟು
ಇನ್ನು ಟ್ರಂಪ್ ಎಚ್ಚರಿಕೆಯನ್ನು ಇರಾನ್ ಗಂಭೀರವಾಗಿ ಪರಿಗಣಿಸಿಲ್ಲ. ಅಮೆರಿಕ ಅಧ್ಯಕ್ಷರ ಈ ನಡೆ ಅಸಮತೋಲನದಿಂದ ಕೂಡಿದೆ ಮತ್ತು ಇದು ಮೂರ್ಖತನದ ಪರಮಾವಧಿ ಎಂದು ಹೇಳಿತ್ತು. ಒಂದು ವೇಳೆ ಅಮೆರಿಕ ತಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ ಪಶ್ಚಿಮ ಏಷ್ಯಾದಲ್ಲಿರುವ ಅದರ ಎಲ್ಲ ಸೇನಾ ನೆಲೆಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ತಿಳಿಸಿತ್ತು.
ಹೊರ್ಮುಜ್ ಜಲಸಂಧಿ ದಾಟಿ ದೇಶದತ್ತ ಧಾವಿಸುತ್ತಿದೆ ಎಲ್‌ಪಿಜಿ ಹೊತ್ತ 7ನೇ ಹಡಗು
ಯುದ್ಧ ಕೊನೆಗೊಳಿಸಲು ಹಲವು ದೇಶಗಳ ಪ್ರಯತ್ನ
ಸದ್ಯ ತಲೆದೋರಿರುವ ಸಂಘರ್ಷವನ್ನು ಕೊನೆಗೊಳಿಸಲು ಜಗತ್ತಿನ ವಿವಿಧ ದೇಶಗಳು ಮುಂದಾಗಿವೆ. ರಾಜತಾಂತ್ರಿಕ ಮಾರ್ಗದ ಮೂಲಕ ಯುದ್ಧ ಕೊನೆಗೊಳಿಸಬೇಕೆಂದು ಕರೆ ನೀಡಿವೆ. ಪಾಕಿಸ್ತಾನ ಕೂಡ ಅಮೆರಿಕ ಮತ್ತು ಇರಾನ್ ಮಧ್ಯೆ ಮಧ್ಯವಸ್ಥಿಕೆ ವಹಿಸಲು ಮುಂದ ಎಬಂದು ಕೈ ಸುಟ್ಟುಕೊಂಡಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.