ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನ ದುಷ್ಟರಿಗೆ ತಕ್ಕ ಪಾಠ ಕಲಿಸುತ್ತೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

Donald Trump Warns: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದ್ದು, ಅವರನ್ನು ದುಷ್ಟರು ಎಂದು ಕರೆದಿದ್ದಾರೆ. ಅಮೆರಿಕವು ಇರಾನ್ ಆಡಳಿತವನ್ನು ಮಿಲಿಟರಿಯನ್ನು ಮತ್ತು ಆರ್ಥಿಕವಾಗಿಯೂ ನಾಶಪಡಿಸುತ್ತಿದೆ ಎಂದು ಗುಡುಗಿದ್ದು, ಯುದ್ಧ ತೀವ್ರ ಸ್ವರೂಪ ಪಡೆಯುವ ಸೂಚನೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ಟೆಹರಾನ್‌, ಮಾ.16: ಇರಾನ್‍ನ ತೈಲ ಕೇಂದ್ರವಾದ ಖಾರ್ಗ್ ದ್ವೀಪದಲ್ಲಿನ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಭಾರಿ ಬಾಂಬ್ ದಾಳಿ (Middle East Crisis) ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ನಾಯಕತ್ವಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, ಅವರನ್ನು ದುಷ್ಟರು ಎಂದು ಕರೆದಿದ್ದಾರೆ. ಅಲ್ಲದೆ ಏನು ನಡೆಯುತ್ತದೆ ಎಂಬುದನ್ನು ನೋಡಿ ಎಂದು ಬೆದರಿಕೆ ಹಾಕಿದ್ದಾರೆ.

ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕವು ಇರಾನ್ ಆಡಳಿತವನ್ನು ಮಿಲಿಟರಿಯನ್ನು ಮತ್ತು ಆರ್ಥಿಕವಾಗಿಯೂ ನಾಶಪಡಿಸುತ್ತಿದೆ ಎಂದು ಹೇಳಿದ್ದಾರೆ. ಇರಾನ್ ನಾಯಕರನ್ನು ಕೊಲ್ಲುವುದು ತಮಗೆ ಸಂದ ಗೌರವ ಎಂದು ಅವರು ಪ್ರತಿಪಾದಿಸಿದ್ದಾರೆ.

ಇರಾನ್‌ನ ನೌಕಾಪಡೆ ಈಗ ಇಲ್ಲ, ಅವರ ವಾಯುಪಡೆಯೂ ಇಲ್ಲ. ಕ್ಷಿಪಣಿಗಳು, ಡ್ರೋನ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಅವರ ನಾಯಕರು ಭೂಮಿಯ ಮೇಲಿನಿಂದಲೇ ಅಳಿಸಲ್ಪಟ್ಟಿದ್ದಾರೆ. ನಮ್ಮ ಬಳಿ ಅಪಾರವಾದ ಅಗ್ನಿಶಕ್ತಿ, ಅಪರಿಮಿತ ಮದ್ದುಗುಂಡುಗಳು ಮತ್ತು ಸಾಕಷ್ಟು ಸಮಯ ಇದೆ. ಈ ಮಾನಸಿಕವಾಗಿ ಅಸ್ಥಿರ ದುಷ್ಟರಿಗೆ ಏನು ಆಗುತ್ತದೆ ಎಂಬುದನ್ನು ನೋಡಿ. 47 ವರ್ಷಗಳಿಂದ ಅವರು ಜಗತ್ತಿನಾದ್ಯಂತ ನಿರಪರಾಧಿಗಳನ್ನು ಕೊಲ್ಲುತ್ತಿದ್ದರು. ಈಗ ನಾನು, ಅಮೆರಿಕದ 47ನೇ ಅಧ್ಯಕ್ಷನಾಗಿ, ಅವರನ್ನು ಕೊಲ್ಲುತ್ತಿದ್ದೇನೆ. ಅದನ್ನು ಮಾಡುವುದು ನನಗೆ ದೊಡ್ಡ ಗೌರವ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇರಾನ್ ಯುದ್ಧದ ಮಧ್ಯೆ ದಾರಿ ತಪ್ಪಿಸುವ ಪೋಸ್ಟ್‌: ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ

ಅಮೆರಿಕ ಮತ್ತು ಇಸ್ರೇಲ್ ಇಲ್ಲಿಯವರೆಗೆ ಖಾರ್ಗ್ ದ್ವೀಪದ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಂಡಿವೆ. ಅಗತ್ಯವಿದ್ದರೆ ಈ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯೂ ಪರಿಗಣನೆಯಲ್ಲಿತ್ತು ಎಂದು ಕೆಲವು ಅಮೆರಿಕ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಈ ದ್ವೀಪವು ಇರಾನ್‌ನ ಅತ್ಯಂತ ಪ್ರಮುಖ ಇಂಧನ ಕೇಂದ್ರ ಎನಿಸಿಕೊಂಡಿದೆ. ದೇಶದ ಪ್ರಮುಖ ಕಚ್ಚಾ ತೈಲ ರಫ್ತು ಕೇಂದ್ರಗಳಲ್ಲಿ ಇದೂ ಒಂದು. ಇರಾನ್ ಉತ್ಪಾದಿಸುವ ಬಹುತೇಕ ತೈಲವನ್ನು ಪರ್ಶಿಯನ್ ಕೊಲ್ಲಿಯಲ್ಲಿರುವ ಈ ದ್ವೀಪದ ಮೂಲಕವೇ ಸಾಗಿಸಲಾಗುತ್ತದೆ.

ಅಮೆರಿಕದ ಪಡೆಗಳು ದ್ವೀಪದ ಇಂಧನ ಮೂಲಸೌಕರ್ಯವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದ್ದವು. ಇರಾನ್‌ನ ರತ್ನ ಕಿರೀಟವಾಗಿರುವ ಆ ದ್ವೀಪವನ್ನು ನಾಶ ಮಾಡದಿರಲು ನಿರ್ಧರಿಸಿದ್ದೇವೆ. ನಮ್ಮ ಶಸ್ತ್ರಾಸ್ತ್ರಗಳು ಜಗತ್ತು ಎಂದಿಗೂ ತಿಳಿದಿರದಷ್ಟು ಶಕ್ತಿಶಾಲಿ ಮತ್ತು ಅತ್ಯಾಧುನಿಕವಾಗಿವೆ. ಆದರೆ, ಸೌಜನ್ಯದ ಕಾರಣಗಳಿಗಾಗಿ, ದ್ವೀಪದಲ್ಲಿನ ತೈಲ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬಾರದೆಂದು ನಾನು ತೀರ್ಮಾನಿಸಿದ್ದೇನೆ ಎಂದು ಹೇಳಿದರು. ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಾಗಣೆಗೆ ಇರಾನ್ ಅಡ್ಡಿಪಡಿಸಿದರೆ ನಿರ್ಧಾರ ಬದಲಾಗಬಹುದು ಎಂದು ಅವರು ಹೇಳಿದರು.

ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಕೇಳಿಬಂತು ಭಾರಿ ಸ್ಫೋಟದ ಸದ್ದು

ಪರಮಾಣು ಮಾತುಕತೆಗಳು ಸ್ಥಗಿತಗೊಂಡ ನಂತರ ಮತ್ತು ಇರಾನ್‌ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂದು ಹೇಳಿಕೊಂಡ ನಂತರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್‌ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿದಾಗ ಯುದ್ಧ ಪ್ರಾರಂಭವಾಯಿತು. ಆಪರೇಷನ್ ಎಪಿಕ್ ಫ್ಯೂರಿ ಎಂದು ಹೆಸರಿಸಲಾದ ಈ ದಾಳಿಗಳು ರಾಜಧಾನಿ ಟೆಹರಾನ್ ಸೇರಿದಂತೆ ಅನೇಕ ಇರಾನಿನ ನಗರಗಳನ್ನು ಗುರಿಯಾಗಿಸಿಕೊಂಡು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹತ್ಯೆ ಮಾಡಿತು.