ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರಗಿದ ರಸ್ತೆಯ ಡಾಮರು, ಬಾಗಿದ ರೈಲು ಹಳಿ...; ದಾಖಲೆ ಪ್ರಮಾಣದ ತಾಪಮಾನಕ್ಕೆ ಯುರೋಪ್‌ ತತ್ತರ: 1,300ಕ್ಕೂ ಹೆಚ್ಚು ಸಾವು

ಯುರೋಪ್‌ನಲ್ಲಿ ದಾಖಲೆ ಮಟ್ಟದ ಬಿಸಿಗಾಳಿ ಆತಂಕ ಸೃಷ್ಟಿಸಿದೆ. ಹಲವು ದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ರಸ್ತೆಗಳು ಕರಗುವುದು, ಟ್ರಾಮ್‌ ಹಳಿಗಳು ಬಾಗುವುದು ಸೇರಿದಂತೆ ಹಲವು ಅಸಾಮಾನ್ಯ ಘಟನೆಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಜೂನ್‌ 21ರಿಂದ ಬಿಸಿಗಾಳಿಗೆ ಸಂಬಂಧಿಸಿದಂತೆ 1,300ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ದಾಖಲಾಗಿವೆ. ಫ್ರಾನ್ಸ್‌ನಲ್ಲಿ ಮುಳುಗಿ ಸಾಯುವ ಪ್ರಕರಣಗಳೂ ಹೆಚ್ಚಾಗಿದ್ದು, ಹಲವೆಡೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಂದರ್ಭಿಕ ಚಿತ್ರ

ಲಂಡನ್, ಜೂ. 30: ಯುರೋಪ್‌ ಖಂಡದಲ್ಲಿ ದಾಖಲೆ ಮಟ್ಟದ ಬಿಸಿಗಾಳಿ ತೀವ್ರ ಆತಂಕ ಮೂಡಿಸಿದೆ. ಹಲವು ದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ರಸ್ತೆಗಳು ಕರಗುವುದು, ಟ್ರಾಮ್‌ ಹಳಿಗಳು ಬಾಗುವುದು ಸೇರಿದಂತೆ ಅನೇಕ ಅಸಾಮಾನ್ಯ ಘಟನೆಗಳು ವರದಿಯಾಗಿವೆ. ಬಿಸಿಗಾಳಿಯಿಂದ ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಜೂನ್‌ 21ರಿಂದ ಇದುವರೆಗೆ 1,300ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

ಬಿಸಿಗಾಳಿಯ ಪರಿಣಾಮವಾಗಿ ಕೆಲವು ಮಕ್ಕಳು ಲಾಕ್ ಮಾಡಿದ್ದ ಕಾರುಗಳಲ್ಲಿ ಮೃತಪಟ್ಟಿದ್ದು, ತಂಪಿಗಾಗಿ ನದಿ ಮತ್ತು ಕೆರೆಗಳಲ್ಲಿ ಈಜಲು ತೆರಳಿದ ಹಲವರು ಮುಳುಗಿ ಸಾವನ್ನಪ್ಪಿದ್ದಾರೆ. ಫ್ರಾನ್ಸ್‌ನಲ್ಲಿ ಜೂನ್‌ 18ರಿಂದ ಕನಿಷ್ಠ 74 ಮಂದಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ಯಾರಿಸ್‌ನಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಳ

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಬಿಸಿಗಾಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಶವಾಗಾರಗಳು ಮತ್ತು ಅಂತ್ಯಕ್ರಿಯಾ ಕೇಂದ್ರಗಳು ಒತ್ತಡಕ್ಕೆ ಸಿಲುಕಿವೆ. ಈಗ ತಾತ್ಕಾಲಿಕವಾಗಿ ತಾಪಮಾನ ಇಳಿದಿದ್ದರೂ, ಜುಲೈಯಲ್ಲಿ ಮತ್ತೊಂದು ಬಿಸಿಗಾಳಿ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವೈರಲ್‌ ವಿಡಿಯೊ ಇಲ್ಲಿದೆ:









ಹಲವು ದೇಶಗಳಲ್ಲಿ ದಾಖಲೆ ತಾಪಮಾನ

ಜರ್ಮನಿಯಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ದಾಟಿದರೆ, ಚೆಕ್‌ ಗಣರಾಜ್ಯದಲ್ಲೂ 40 ಡಿಗ್ರಿ ಮೀರಿದೆ. ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ 38.8 ಡಿಗ್ರಿ ದಾಖಲಾಗಿದ್ದು, ಡೆನ್ಮಾರ್ಕ್‌ನಲ್ಲಿ 1874ರಿಂದಲೂ ಕಂಡಿರದ ಗರಿಷ್ಠ ತಾಪಮಾನ ದಾಖಲಾಗಿದೆ. ಇಂಗ್ಲೆಂಡ್‌ನಲ್ಲಿ ಜೂನ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದಿಂದ ಆಕ್ರಮಣಕಾರಿ ಕೃತ್ಯ: ಭಾರತ ಖಂಡನೆ

ಸ್ಲೋವಾಕಿಯಾದ ಟುರ್ನಾ ನಾಡ್‌ ಬೊಡ್ವೌದಲ್ಲಿ 41 ಡಿಗ್ರಿ ತಾಪಮಾನ ದಾಖಲಾಗಿದ್ದು, ಹಂಗೇರಿಯ ಆಸ್ಜೋಡ್‌ನಲ್ಲಿ 41.8 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

ಉಕ್ರೇನ್‌ನಲ್ಲಿ ವಿದ್ಯುತ್‌ ವ್ಯತ್ಯಯ

ಯುದ್ಧದಿಂದ ಈಗಾಗಲೇ ಹಾನಿಗೊಳಗಾಗಿರುವ ಉಕ್ರೇನ್‌ನ ವಿದ್ಯುತ್‌ ಜಾಲದ ಮೇಲೆ ಬಿಸಿಗಾಳಿಯೂ ಹೆಚ್ಚುವರಿ ಒತ್ತಡ ತಂದಿದೆ. ಪರಿಣಾಮವಾಗಿ ತುರ್ತು ವಿದ್ಯುತ್‌ ಕಡಿತ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲೂ 35ರಿಂದ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ವಿಡಿಯೊಗಳು

ಯುರೋಪ್‌ನ ಬಿಸಿಗಾಳಿಯ ತೀವ್ರತೆಯನ್ನು ತೋರಿಸುವ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಕೆಲ ವಿಡಿಯೊಗಳಲ್ಲಿ ಹೊರಗಡೆ ಇಟ್ಟ ಪಾತ್ರೆಗಳ ಮೇಲೆ ಕೆಲವೇ ನಿಮಿಷಗಳಲ್ಲಿ ಮೊಟ್ಟೆ ಮತ್ತು ಬೇಕನ್‌ ಬೇಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ಜರ್ಮನಿಯಲ್ಲಿ ರಸ್ತೆಗಳು ಕರಗಿರುವುದು ಹಾಗೂ ಟ್ರಾಮ್‌ ಹಳಿಗಳು ಬಾಗಿರುವ ದೃಶ್ಯಗಳು ವೈರಲ್‌ ಆಗಿವೆ. ನೆದರ್‌ಲ್ಯಾಂಡ್ಸ್‌ನಲ್ಲಿ ಕಾರುಗಳ ಪ್ಲಾಸ್ಟಿಕ್‌ ಭಾಗಗಳು ಉಬ್ಬಿರುವುದು, ಶಾಪಿಂಗ್‌ ಟ್ರಾಲಿ ಹಾಗೂ ಶೂಗಳು ಬಿಸಿಲಿಗೆ ಕರಗಿರುವ ದೃಶ್ಯಗಳೂ ಹರಿದಾಡುತ್ತಿವೆ. ಜರ್ಮನ್‌ನ ಬರ್ಲಿನ್‌ನಲ್ಲಿ ಪೊಲೀಸರು ನೀರಿನ ಫಿರಂಗಿ ಮೂಲಕ ಸಾರ್ವಜನಿಕರಿಗೆ ತಂಪು ನೀಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿವೆ.