ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಷ್ಕೆಂಟ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಾಜಿ ಶಾಸಕ ಸುಕುಮಾರ ಶೆಟ್ಟಿ ಮೆಚ್ಚುಗೆ

ಈ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವ ವಿಶ್ವೇಶ್ವರ ಭಟ್ ಅವರ ಜತೆ ಪ್ರವಾಸ ಮಾಡುವುದೇ ಹೆಮ್ಮೆಯ ಸಂಗತಿ. ನಾಡಿನ ಸಾಧಕರನ್ನು ಒಂದೆಡೆ ಸೇರಿಸಿ, ಬೇರೆ ಬೇರೆ ದೇಶದ ಸಂಸ್ಕೃತಿ, ಸಂಸ್ಕಾರ ಗಳನ್ನು ತಿಳಿಸುವ ಮಹತ್ಕಾರ್ಯ ಅವರದ್ದು. ಅವರ ಪ್ರತಿಯೊಂದು ನಡೆ ನುಡಿ, ಆಚಾರ ವಿಚಾರಗಳಲ್ಲಿ ಪರಮಾತ್ಮನ ಪೂರ್ಣಾನುಗ್ರಹ ಇದೆ ಎಂಬುದು ನನ್ನ ಅಭಿಪ್ರಾಯ. ವಿಶ್ವೇಶ್ವರ ಭಟ್ಟರು ಪದ್ಮವಿಭೂಷಣ ಪ್ರಶಸ್ತಿಗೆ ಅರ್ಹರು ಎಂದು ಸುಕುಮಾರ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

ತಾಷ್ಕೆಂಟ್: ಕರ್ನಾಟಕದಲ್ಲಿ ತಾಷ್ಕೆಂಟ್ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ. ಮಾಸ್ಕೊ ಗೊತ್ತಿಲ್ಲದೇ ಇರಬಹುದು. ಆದರೆ ತಾಷ್ಕೆಂಟ್ ಬಗ್ಗೆ ಗೊತ್ತಿದೆ. ಏಕೆಂದರೆ ಲಾಲ್ ಬಹದ್ದೂರ್ ಶಾಸಿ ಅವರು ಇಲ್ಲಿ ಸ್ವರ್ಗಸ್ಥರಾದ್ದರಿಂದ, ಇಡೀ ಭಾರತೀಯರಿಗೆ ಇದರ ಬಗ್ಗೆ ಗೊತ್ತಿದೆ. ಇಂಥ ಸ್ಥಳದಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸಮಾರಂಭ ಆಯೋಜಿಸಿದ್ದು ಸಾರ್ಥಕ ಕಾರ್ಯ ಎಂದು ಮಾಜಿ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಅವರು ಹೇಳಿದರು.

ವಿಶ್ವವಾಣಿ ಮಾಧ್ಯಮ ಸಮೂಹ ತಾಷ್ಕೆಂಟ್‌ನಲ್ಲಿ ಆಯೋಜಿಸಿದ್ದ ‘ಗ್ಲೋಬಲ್ ಅಚೀವರ್ಸ್ ಅವಾರ್ಡ-2026’ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವ ವಿಶ್ವೇಶ್ವರ ಭಟ್ ಅವರ ಜತೆ ಪ್ರವಾಸ ಮಾಡುವುದೇ ಹೆಮ್ಮೆಯ ಸಂಗತಿ. ನಾಡಿನ ಸಾಧಕರನ್ನು ಒಂದೆಡೆ ಸೇರಿಸಿ, ಬೇರೆ ಬೇರೆ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ಮಹತ್ಕಾರ್ಯ ಅವರದ್ದು. ಅವರ ಪ್ರತಿಯೊಂದು ನಡೆ ನುಡಿ, ಆಚಾರ ವಿಚಾರಗಳಲ್ಲಿ ಪರಮಾತ್ಮನ ಪೂರ್ಣಾನುಗ್ರಹ ಇದೆ ಎಂಬುದು ನನ್ನ ಅಭಿಪ್ರಾಯ. ವಿಶ್ವೇಶ್ವರ ಭಟ್ಟರು ಪದ್ಮವಿಭೂಷಣ ಪ್ರಶಸ್ತಿಗೆ ಅರ್ಹರು ಎಂದು ಸುಕುಮಾರ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: Vishweshwar Bhat at Tashkent: ಲಾಲ್ ಬಹದ್ದೂರ್ ಶಾಸ್ತ್ರಿಜೀ ಕಾರಣಕ್ಕೆ ತಾಷ್ಕೆಂಟ್ ಜತೆಗಿನ ಬಾಂಧವ್ಯ ಬಲವಾಗಿದೆ: ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರ ಜತೆ 6 ಬಾರಿ ವಿದೇಶ ಪ್ರಯಾಣ ಮಾಡಿದ್ದೇನೆ. ಈ ಬಾರಿ ಈ ದೇಶ ಕಂಡ ಮಹಾನ್ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುತ್ರ ಸುನೀಲ್ ಶಾಸ್ತ್ರಿ ಅವರನ್ನು ತಾಷ್ಕೆಂಟ್ ಗೆ ಕರೆದು ಅವರಿಂದ ಗ್ಲೋಬಲ್ ಅವಾರ್ಡ್ ಕೊಡಿಸಿರುವುದು ಸಂತಸದ ಸಂಗತಿ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಅವರು ತಮ್ಮ ಅವಧಿಯಲ್ಲಿ ನಡೆದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಕೊಲ್ಲೂರಿನಲ್ಲಿ 10 ವರ್ಷಗಳ ಕಾಲ ಇದ್ದೆ. ಆಗ ಶ್ರೀ ಕ್ಷೇತ್ರದ ಹೆಸರು ಇಡೀ ದೇಶಕ್ಕೆ ತಲುಪುವಂತೆ ಮಾಡಿದೆ. ಆಗ ದೇವಸ್ಥಾನದ ಸಂಪತ್ತು ಅಭಿವೃದ್ಧಿಯಾಗು ವಂತೆ ಮಾಡಿದೆ. ಆಗ ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದರು. 22 ಕ್ಯಾರೆಟ್ ಚಿನ್ನದಿಂದ 88 ಕೆಜಿ ತೂಕದ ರಥ ಮಾಡಿಸಿದ್ದೆ.

ಅಂದು 10 ಗ್ರಾಮ್‌ಗೆ ಏಳೂವರೆ ಸಾವಿರ ರೂ. ಬೆಲೆ. ಆಗಲೂ 147 ಕೋಟಿ ರೂ. ಖರ್ಚು ಮಾಡಿ ಕೊಲ್ಲೂರು ಮೂಕಾಂಬಿಕೆಗೆ ಚಿನ್ನದ ರಥ ಮಾಡಿದ್ದೆ. ಈಗ 10 ಗ್ರಾಮ್‌ಗೆ ಒಂದೂವರೆ ಲಕ್ಷ ರೂ. ಇದೆ. ಈಗ ಚಿನ್ನದ ರಥದ ಮೌಲ್ಯ ನೀವೇ ಊಹಿಸಿ ಎಂದು ಹೇಳಿದರು. ಸಮಾಜದ ಕಟ್ಟಕಡೆಯ ಮಗುವೂ ವಿದ್ಯಾವಂತ ಆಗಬೇಕು. ಆಗ ದೇಶ ವಿದ್ಯಾವಂತ ದೇಶವಾಗುತ್ತದೆ. 40 ವರ್ಷಗಳ ಹಿಂದೆಯೇ ಈ ಮಾತನ್ನು ಹೇಳಿದ್ದೆ. ನನ್ನ ಶಿಕ್ಷಣ ಸಂಸ್ಥೆಗಳಲ್ಲಿ 5 ಸಾವಿರ ವಿದ್ಯಾರ್ಥಿಗಳಿದ್ದಾರೆ ಎಂದರು.

ಈ ಅವಾರ್ಡ್ ಸಿಕ್ಕಿದ ಕೂಡಲೇ ಸಾಧಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಈ ಅವಾರ್ಡ್‌ ನಿಂದ ಸಮಾಜಕ್ಕೆ ನಿಮ್ಮಿಂದ ಏನಾಗುತ್ತದೆ? ಸಮಾಜ ನಿಮ್ಮಿಂದ ಏನನ್ನು ಬಯಸುತ್ತೆ ಎನ್ನುವುದು ಮುಖ್ಯ ವಾಗುತ್ತದೆ. ಸಮಾಜವನ್ನು ಬದಲಾಯಿಸುವ ಕೆಲಸದಲ್ಲಿ ನಾವೆಲ್ಲ ಕೈ ಜೋಡಿಸೋಣ ಎಂದು ಸುಕುಮಾರ ಶೆಟ್ಟಿ ಹೇಳಿದರು