ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

12th Global Achievers Awards in South Africa: ಗ್ಲೋಬಲ್‌ ಅಚೀವರ್ಸ್‌ ವಿಭಿನ್ನ ಕಾರ್ಯಕ್ರಮ

ವಿಶ್ವವಾಣಿ ಗ್ಲೋಬಲ್ ಫಾರಂ’ ಆಯೋಜಿಸು ತ್ತಿರುವ ಗ್ಲೋಬಲ್ ಅಚೀವರ‍್ಸ್’ ಕಾರ್ಯಕ್ರಮ ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಬೆಂಗಳೂರು ಅಥವಾ ಇತರ ನಗರದಲ್ಲಿ ಎರಡು ಗಂಟೆಗಳ ಕಾರ್ಯಕ್ರಮ ನಡೆಸಿ ಎಲ್ಲರೂ ತಮ್ಮ ತಮ್ಮ ದಾರಿಗೆ ಹೊರಟು ಹೋಗುತ್ತಾರೆ. ಆದರೆ ವಿದೇಶದಲ್ಲಿ ಎಂಟು ದಿನಗಳ ಕಾಲ ಒಟ್ಟಿಗೆ ಕಾಲ ಕಳೆಯುವುದರಿಂದ ಸಾಧಕರು ಪರಸ್ಪರ ಅರಿವು ಬೆಳೆಸಿಕೊಳ್ಳುತ್ತಾರೆ, ಅನುಭವ ಹಂಚಿಕೊಳ್ಳುತ್ತಾರೆ, ಮಾನವೀಯ ಸಂಬಂಧಗಳು ಗಟ್ಟಿಯಾಗುತ್ತವೆ

ಎಂಟು ದಿನ ಒಟ್ಟಿಗೆ ಕಾಲ ಕಳೆಯುವುದರಿಂದ ಮಾನವೀಯ ಸಂಬಂಧ ಗಟ್ಟಿಯಾಗುತ್ತವೆ

ವಿಶ್ವವಾಣಿ ಇಂದು ಸಮೂಹವಾಗಿ ಬೆಳೆದು ನಿಂತಿದೆ

ಕನ್ನಡ ಪತ್ರಿಕೋದ್ಯಮದಲ್ಲಿ ವಿಭಿನ್ನ ಆಲೋಚನೆಯೊಂದಿಗೆ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಆರಂಭಗೊಂಡು, ಇಂದು 12ನೇ ಆವೃತ್ತಿ ಪೂರೈಸಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿಶ್ವವಾಣಿ ಗ್ಲೋಬಲ್ ಫಾರಂ’ ಆಯೋಜಿಸು ತ್ತಿರುವ ಗ್ಲೋಬಲ್ ಅಚೀವರ‍್ಸ್’ ಕಾರ್ಯಕ್ರಮ ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಬೆಂಗಳೂರು ಅಥವಾ ಇತರ ನಗರದಲ್ಲಿ ಎರಡು ಗಂಟೆಗಳ ಕಾರ್ಯಕ್ರಮ ನಡೆಸಿ ಎಲ್ಲರೂ ತಮ್ಮ ತಮ್ಮ ದಾರಿಗೆ ಹೊರಟು ಹೋಗುತ್ತಾರೆ. ಆದರೆ ವಿದೇಶದಲ್ಲಿ ಎಂಟು ದಿನಗಳ ಕಾಲ ಒಟ್ಟಿಗೆ ಕಾಲ ಕಳೆಯುವುದರಿಂದ ಸಾಧಕರು ಪರಸ್ಪರ ಅರಿವು ಬೆಳೆಸಿಕೊಳ್ಳುತ್ತಾರೆ, ಅನುಭವ ಹಂಚಿಕೊಳ್ಳುತ್ತಾರೆ, ಮಾನವೀಯ ಸಂಬಂಧಗಳು ಗಟ್ಟಿಯಾಗುತ್ತವೆ.

ಈ ಕಾರಣಕ್ಕೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ವಿದೇಶದಲ್ಲಿ ನಡೆಸುತ್ತಾ ಬಂದಿದೆ. ಈ ಬಾರಿ ಭಾಗವಹಿಸಿದ 38 ಜನ ಒಂದು ತಂಡವಾಗಿ, ಕುಟುಂಬ ಸದಸ್ಯರಂತೆ ಉಳಿಯುವ ನಂಬಿಕೆ ನಮಗಿದೆ ಎಂದರು.

ಇದನ್ನೂ ಓದಿ: 12th Global Achievers Awards in South Africa: ವಿಶ್ವವಿಖ್ಯಾತ ಸನ್‌ʼಸಿಟಿಯಲ್ಲಿ ನಾಡಿನ ಸಾಧಕರಿಗೆ ಸನ್ಮಾನ

ವಿಶ್ವವಾಣಿ ಪತ್ರಿಕೆ 1958ರಲ್ಲಿ ಹುಬ್ಬಳ್ಳಿಯಲ್ಲಿ ಡಾ.ಪಾಟೀಲ್ ಪುಟ್ಟಪ್ಪ ಅವರು ಆರಂಭಿಸಿ ದರು. ಪ್ರಾರಂಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಿತ್ತು. ಸುಮಾರು ಐವತ್ತೆಂಟು ವರ್ಷಗಳ ಕಾಲ ಅವರು ಏಕಾಂಗಿಯಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆಯನ್ನು 2016ರಲ್ಲಿ ಹೊಸ ಉತ್ಸಾಹದೊಂದಿಗೆ ಸ್ವೀಕರಿಸಿ ರಾಜ್ಯಮಟ್ಟದ ಪತ್ರಿಕೆಯಾಗಿಸಿ ಪರಿವರ್ತಿಸಲಾಯಿತು.

ಇಂದು ವಿಶ್ವವಾಣಿ ಕರ್ನಾಟಕದ ಆರು ಆವೃತ್ತಿಗಳೊಂದಿಗೆ ರಾಜ್ಯಾದ್ಯಂತ ಪ್ರಸಾರ ವಾಗುತ್ತಿದೆ. ರಾಜ್ಯದ ಒಂಬತ್ತು ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತನೊಬ್ಬನೇ ಸಂಪಾದಕ ಹಾಗೂ ಮಾಲೀಕನಾಗಿ ಮುನ್ನಡೆಸುತ್ತಿರುವ ಪತ್ರಿಕೆ ವಿಶ್ವವಾಣಿ ಮಾತ್ರ. ಇದು ವಿಶ್ವವಾಣಿ ಯ ವಿಶೇಷತೆ ಎಂದರು.ವಿಶ್ವವಾಣಿಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವು ದಷ್ಟೇ ಅಲ್ಲದೇ, ಉತ್ತರ ಕನ್ನಡದ ಮೊದಲ, 43 ವರ್ಷದ ಇತಿಹಾಸವಿರುವ ಲೋಕಧ್ವನಿ ಪತ್ರಿಕೆಯನ್ನು ವಿಶ್ವವಾಣಿ ಸಮೂಹಕ್ಕೆ ಸೇರಿಸಿಕೊಳ್ಳಲಾಗಿದೆ.

‘ವಿಶ್ವ’ ಹಾಗೂ ‘ಲೋಕ’ ಎರಡೂ ಒಂದೇ ಅರ್ಥ. ಇದೇ ರೀತಿ ‘ವಾಣಿ’ ಹಾಗೂ ‘ಧ್ವನಿ’ ಒಂದೇ ಆಗಿದೆ. ಹೀಗಾಗಿ ವಿಶ್ವವಾಣಿ ಬೇರೆಯಲ್ಲ ಲೋಕಧ್ವನಿ ಬೇರೆಯಲ್ಲ. ಎರಡು ಬೇರೆ ಬೇರೆ ಪತ್ರಿಕೆಗಳು ಅದರ ಅರ್ಥ ಒಂದೇ ಎಂದರು.

ಪ್ರವಾಸಿ ಪ್ರಪಂಚ - ಹೊಸ ಪ್ರಯೋಗ

ದೇಶದ ಪತ್ರಿಕೋದ್ಯಮದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರವಾಸ ಹಾಗೂ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿದ ಪತ್ರಿಕೆ ಎಂದರೆ ಪ್ರವಾಸಿ ಪ್ರಪಂಚ. ಸಾಮಾನ್ಯವಾಗಿ ಪತ್ರಿಕೆಯಲ್ಲಿ ರಾಜಕೀಯ ಇರಬೇಕು, ಸಿನಿಮಾ ಇರಬೇಕು, ಅಪರಾಧ, ಕ್ರೀಡೆ ಇರಬೇಕು ಎನ್ನುವ ಕೆಲ ವೊಂದಷ್ಟು ಅಲಿಖಿತ ನಿಯಮಗಳಿವೆ. ಆದರೆ ಈ ಎಲ್ಲ ವಿಷಯಗಳನ್ನು ಹೊರತುಪಡಿಸಿ ಕೇವಲ ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೆ ಅನ್ವಯವಾಗುವಂತಹ ಅಂತಾರಾಷ್ಟ್ರೀಯ ಗುಣಮಟ್ಟದ 24 ಪುಟಗಳ ಬ್ರಾಡ್ ಶೀಟ್ ಪತ್ರಿಕೆ ದೇಶದಲ್ಲಿ ಇಲ್ಲವೇ ಇಲ್ಲ. ನಿಮಗೆ ಪ್ರವಾಸಕ್ಕೆ ಸಂಬಂಧಿಸಿದ ಮ್ಯಾಗಜಿನ್‌ಗಳಿವೆ. ಆದರೆ ಪ್ರವಾಸಕ್ಕೆ ಸಂಬಂಧ ಪಟ್ಟ ದಿನಪತ್ರಿಕೆ ಅಂದರೆ ಅದು ಬ್ರಾಡ್ʼಶೀಟ್ ಮಾದರಿಯ ದಿನಪತ್ರಿಕೆ ಇರುವಂತದ್ದು ಪ್ರವಾಸಿ ಪ್ರಪಂಚದಲ್ಲಿ ಮಾತ್ರ ಸಾಧ್ಯ ಎಂದರು.

image

ಕೋವಿಡ್ ನಂತರ ಪತ್ರಿಕೆ ಪ್ರಾರಂಭಿಸುವುದು ದೊಡ್ಡ ಸಾಹಸವೇ ಸರಿ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ನಾವು ದಿನಪತ್ರಿಕೆಗಳಿಗೆ ಪೈಪೋಟಿ ನೀಡುವ ಮಟ್ಟ ದಲ್ಲಿ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದೇವೆ. ಆನ್‌ಲೈನ್ ಓದುಗರ ವಲಯವೂ ವೇಗವಾಗಿ ವಿಸ್ತರಿಸಿದೆ. ಒಂದು ಲೇಖನ ಪ್ರಕಟವಾದ ಕೂಡಲೇ ಅದು ವೆಬ್ ಸೈಟ್, ಡಿಜಿಟಲ್ ವೇದಿಕೆಗಳು ಮತ್ತು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತದೆ. ಕನ್ನಡದಲ್ಲಿ ಈ ರೀತಿಯ ಸಮಗ್ರ ಪ್ರಸಾರ ಮಾದರಿ ವಿರಳ.

-ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ ಸಮೂಹ