ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat: ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಸಂಸ್ಕೃತಿ, ಸಾಧನೆ ಜೋಡಿಸುವ ಸೇತುವೆ

ಫಿಲಿಪೈನ್ಸ್‌ʼನ ರಾಜಧಾನಿ ಮನಿಲಾದಲ್ಲಿ ಆಯೋಜಿಸಿದ್ದ 13ನೇ ಗ್ಲೋಬಲ್ ಅಚೀವರ್ಸ್ ಸಮ್ಮಿಲನದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಘನತೆ, ಕರ್ನಾಟಕದ ಪ್ರತಿಭೆ ಹಾಗೂ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಕನ್ನಡಿಗರ ಸಾಮರ್ಥ್ಯವನ್ನು ವಿಶ್ವದ ಮುಂದೆ ಅನಾವರಣ ಗೊಳಿಸುವ ಅಪೂರ್ವ ಪ್ರಯತ್ನವಾಗಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಫಿಲಿಪೈನಲ್ಲಿ ಆಯೋಜಿಸಲಾಗಿದೆ.

ಮನೆ ಮನಿಲಾ, ಫಿಲಿಪೈನ್ಸ್: ವಿಶ್ವವಾಣಿ ಗ್ಲೋಬಲ್ ಫೋರಂ ನಡೆಸುತ್ತಿರುವ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಲ್ಲ. ಅದು ಸಾಧನೆ ಮತ್ತು ಸಂಸ್ಕೃತಿಯನ್ನು ಜೋಡಿಸುವ ಜಾಗತಿಕ ಸೇತುವೆ. ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಕನ್ನಡಿಗರ ಪ್ರತಿಭೆಯನ್ನು ಪರಿಚಯಿಸುವ ಉದ್ದೇಶದಿಂದ ಈ ವೇದಿಕೆಯನ್ನು ಆರಂಭಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ವಿದೇಶಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ ಅಂತಾ ರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡಿಗರನ್ನು ಪರಿಚಯಿಸುತ್ತಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್(Vishwavani Editor-in-Chief Vishweshwar Bhat) ತಿಳಿಸಿದರು.

ಫಿಲಿಪೈನ್ಸ್‌ʼನ ರಾಜಧಾನಿ ಮನಿಲಾದಲ್ಲಿ ಆಯೋಜಿಸಿದ್ದ 13ನೇ ಗ್ಲೋಬಲ್ ಅಚೀವರ್ಸ್ ಸಮ್ಮಿಲನದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಘನತೆ, ಕರ್ನಾಟಕದ ಪ್ರತಿಭೆ ಹಾಗೂ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಕನ್ನಡಿಗರ ಸಾಮರ್ಥ್ಯವನ್ನು ವಿಶ್ವದ ಮುಂದೆ ಅನಾವರಣ ಗೊಳಿಸುವ ಅಪೂರ್ವ ಪ್ರಯತ್ನವಾಗಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಫಿಲಿಪೈನಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರೇಕೆ ಉಳಿದವರ ಮೇಲೆ ಸವಾರಿ ಮಾಡುತ್ತಾರೆ ?

ಕಾಂಬೋಡಿಯಾ, ವಿಯೆಟ್ನಾಂ, ಬಾಲಿ, ಓಮನ್, ಜಪಾನ್, ರಷ್ಯಾ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಜಾರ್ಜಿಯಾ, ಭೂತಾನ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ವಿಶ್ವವಾಣಿ, ಇದೀಗ ಫಿಲಿಪೈನಲ್ಲಿ 13ನೇ ಆವೃತ್ತಿಯನ್ನು ನೆರವೇರಿಸಿರುವುದು ವಿಶೇಷವಾಗಿದೆ ಎಂದರು.

ವಿಶ್ವವಾಣಿ ಕೇವಲ ಪತ್ರಿಕೆಯಲ್ಲ, ಅದೊಂದು ಅಸ್ಮಿತೆ: ವಿಶ್ವವಾಣಿ ಕೇವಲ ಪತ್ರಿಕೆ ಅಲ್ಲ, ಕನ್ನಡದ ಚಳವಳಿ. ವಿಶ್ವವಾಣಿ ಪತ್ರಿಕೆಯನ್ನು ಹೋರಾಟಗಾರ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು ಸುಮಾರು 65 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಆರಂಭಿಸಿದರು. ಒಂದು ಕಾಲದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ಪತ್ರಿಕೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಕೆಲಸ ಕಳೆದ ಹತ್ತು ವರ್ಷಗಳಲ್ಲಿ ನಡೆದಿದೆ. ‌

ಇಂದು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಯನ್ನು ಸಂಪೂರ್ಣವಾಗಿ ಪತ್ರಕರ್ತನೇ ಮುನ್ನಡೆಸು ತ್ತಿರುವ ಅಪರೂಪದ ಉದಾಹರಣೆ ಯಾಗಿದೆ. ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೆ ಮೀಸಲಾದ ಪ್ರವಾಸಿ ಪ್ರಪಂಚ ವಾರಪತ್ರಿಕೆ ಆರಂಭಿಸಿರುವುದೂ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ವಾಗಿದೆ. ಜತೆಗೆ ಲೋಕಧ್ವನಿ ಪ್ರಾದೇಶಿಕ ಪತ್ರಿಕೆ ಕಳೆದ 43 ವರ್ಷಗಳಿಂದ ಯಶಸ್ವಿಯಾಗಿ ಪ್ರಕಟ ವಾಗುತ್ತಿದೆ ಎಂದರು.

ಬಸವರಾಜ ಹೊರಟ್ಟಿಗೆ ವಿಶೇಷ ಗೌರವ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಒಬ್ಬ ರಾಜಕಾರಣಿಯನ್ನು ನಿಷ್ಠಾವಂತ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದು ಕರೆಯುವುದು ತುಂಬಾ ಕಷ್ಟ. ಆದರೆ ಬಸವರಾಜ ಹೊರಟ್ಟಿ ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಜನಸೇವೆಯ ಪ್ರತಿರೂಪ. 1980ರಿಂದ ಶಿಕ್ಷಕರ ಕ್ಷೇತ್ರದಿಂದ ನಿರಂತರ ಎಂಟು ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಹೊರಟ್ಟಿ ಅವರ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿರುವುದು ಸ್ಮರಣೀಯ.‌

48 ವರ್ಷಗಳ ರಾಜಕೀಯ ಬದುಕಿನಲ್ಲಿ ಅವರು ಹಲವು ಸಚಿವ ಸ್ಥಾನಗಳನ್ನು ಸಮರ್ಥವಾಗಿ ನಿರ್ವಹಿಸಿzರೆ. ಶಿಕ್ಷಕರ ಪರ ಹೋರಾಟದಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು ಎಂದರು.

image

ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮವು ಸಾಧಕರನ್ನು ಕೇವಲ ಸನ್ಮಾನಿಸುವುದಲ್ಲ, ಅವರ ಬದುಕಿನ ಪಯಣ, ಹೋರಾಟ ಮತ್ತು ಸಾಧನೆಯ ಕಥೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುತ್ತದೆ. ವಿವಿಧ ಕ್ಷೇತ್ರಗಳ ಸಾಧಕರು ಒಂದೇ ವೇದಿಕೆಯಲ್ಲಿ ಒಂದಾಗುವುದರಿಂದ ಹೊಸ ಚಿಂತನೆಗಳು, ಹೊಸ ಸಂಪರ್ಕಗಳು ಮತ್ತು ಭವಿಷ್ಯದ ಸಹಯೋಗಗಳಿಗೆ ದಾರಿ ತೆರೆದುಕೊಳ್ಳುತ್ತದೆ. ಜತೆಗೆ ಆತಿಥೇಯ ರಾಷ್ಟ್ರಕ್ಕೆ ಅರ್ಥಪೂರ್ಣ ನೆಟ್‌ವರ್ಕಿಂಗ್ ಅನ್ನು ಸುಗಮಗೊಳಿಸುತ್ತದೆ.

- ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕ