ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಲ್ಫ್ ರಾಷ್ಟ್ರಗಳ ಒತ್ತಡ ಮಣಿದ ಪಾಕಿಸ್ತಾನ; ಭಿಕ್ಷಕರು, ದಾಖಲೆ ಇಲ್ಲದವರಿಗೆ ದೇಶದಿಂದ ಹೊರಹೋಗಲು ಇಲ್ಲ ಅನುಮತಿ

ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸಾವಿರಾರು ಪಾಕಿಸ್ತಾನಿಗಳನ್ನು ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಗಡೀಪಾರು ಮಾಡಿದೆ. ಇದರ ಬಳಿಕ ಇದೀಗ ಗಲ್ಫ್ ರಾಷ್ಟ್ರಗಳ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಇದೀಗ ತನ್ನ ದೇಶದಿಂದ ವಿದೇಶಗಳಿಗೆ ತೆರಳುವ ಭಿಕ್ಷುಕರು, ಸರಿಯಾದ ದಾಖಲೆ ಹೊಂದಿಲ್ಲದವರಿಗೆ ನಿರ್ಬಂಧ ವಿಧಿಸಿದೆ.

(ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ವೃತ್ತಿಪರ ಭಿಕ್ಷುಕರು (Beggars), ಸರಿಯಾದ ದಾಖಲೆಗಳು ಇಲ್ಲದವರಿಗೆ ( incomplete document holders) ಇನ್ನು ಮುಂದೆ ವಿದೇಶಕ್ಕೆ ಹೋಗಲು ಅನುಮತಿ ಇಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ (Pakistan’s Interior Minister Mohsin Naqvi) ತಿಳಿಸಿದ್ದಾರೆ. ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸಾವಿರಾರು ಪಾಕಿಸ್ತಾನಿಗಳನ್ನು ಸೌದಿ ಅರೇಬಿಯಾ (sudi arebia) ಮತ್ತು ಯುಎಇಗಳಿಂದ (UAE) ಗಡೀಪಾರು ಮಾಡಲಾಗಿದೆ. ಇದರ ಬಳಿಕ ಗಲ್ಫ್ ರಾಷ್ಟ್ರಗಳ ಹೆಚ್ಚಿನ ಒತ್ತಡಕ್ಕೆ ಮಣಿದು ಪಾಕಿಸ್ತಾನದ ಸಚಿವರು ವಿದೇಶಗಳಿಗೆ ತೆರಳಲು ಬಯಸುವ ಭಿಕ್ಷುಕರು, ಸರಿಯಾದ ದಾಖಲೆ ಇಲ್ಲದವರಿಗೆ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.

ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಸಾವಿರಾರು ಪಾಕಿಸ್ತಾನಿಗಳನ್ನು ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಗಡಿಪಾರು ಮಾಡಲಾಗಿದೆ. ಇದು ಮತ್ತೆ ಪುನರಾವರ್ತನೆಯಾದರೆ ರಾಷ್ಟ್ರವನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದೆ. ಇದರಿಂದ ಭವಿಷ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಈ ರಾಷ್ಟ್ರಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.

ಜಾನುವಾರು ಕಳ್ಳ ಸಾಗಣೆ ತಡೆಗಟ್ಟುವ ವೇಳೆ ಬಾಂಗ್ಲಾದೇಶದ ಗಡಿ ದಾಟಿದ ಭದ್ರತಾ ಪಡೆ ಕಾನ್‍ಸ್ಟೇಬಲ್; ಸುರಕ್ಷಿತವಾಗಿ ಭಾರತಕ್ಕೆ ವಾಪಸ್

ಈ ಹಿನ್ನೆಲೆಯಲ್ಲಿ ಇದೀಗ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ವೃತ್ತಿಪರ ಭಿಕ್ಷುಕರು ಮತ್ತು ಸರಿಯಾದ ಪ್ರಯಾಣ ದಾಖಲೆಗಳು ಇಲ್ಲದವರನ್ನು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಘನತೆ ಕಾಪಾಡಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೇಡಿಯೊ ಪಾಕಿಸ್ತಾನದ ಮೂಲಕ ನಖ್ವಿ ತಿಳಿಸಿದ್ದಾರೆ.

ಅಕ್ರಮ ಭಿಕ್ಷಾಟನೆ, ವೀಸಾ ನಿಯಮ ಉಲ್ಲಂಘನೆ, ದಾಖಲೆ ವಂಚನೆಯಿಂದಾಗಿ ಅನೇಕ ಪಾಕಿಸ್ತಾನಿಗಳನ್ನು ವಿದೇಶಗಳಲ್ಲಿ ಗಡೀಪಾರು ಮಾಡುವುದು, ಬಂಧಿಸುತ್ತಿರುವುದರಿಂದ ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡಿದೆ. ವಿದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಸಂಘಟಿತ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ಪಾಕಿಸ್ತಾನಿಯರಿಗೆ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ ಭಾರತ ವಿರೋಧಿ ಮನಸ್ಥಿತಿ; ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕಳವಳ

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆಯು ಕಳೆದ ವಾರ ನೀಡಿರುವ ಮಾಹಿತಿ ಪ್ರಕಾರ ಅಕ್ರಮ ಪ್ರಯಾಣದ ಶಂಕೆ ಮೇರೆಗೆ ಈ ವರ್ಷ 66,000ಕ್ಕೂ ಹೆಚ್ಚು ಪ್ರಯಾಣಿಕರು ದೇಶದಿಂದ ಹೊರಗೆ ಹೋಗದಂತೆ ತಡೆಯಲಾಗಿದೆ ಎಂದು ತಿಳಿಸಿತ್ತು. ಇನ್ನು ಅಕ್ರಮ ವಲಸೆಯ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಗಲ್ಫ್ ರಾಷ್ಟ್ರಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರನ್ನು ಗಡಿಪಾರು ಮಾಡಿರುವುದಾಗಿ ತಿಳಿಸಿದೆ.

ಸೌದಿ ಮತ್ತು ಯುಎಇಯಲ್ಲಿ ಪೊಲೀಸರು ವಿಶೇಷ ಭಿಕ್ಷಾಟನೆ ವಿರೋಧಿ ಅಭಿಯಾನಗಳನ್ನು ನಡೆಸಿದ್ದಾರೆ. ವಿಶೇಷವಾಗಿ ರಂಜಾನ್ ಮತ್ತು ಹಜ್ ಯಾತ್ರೆ ಸಂದರ್ಭದಲ್ಲಿ ಭಿಕ್ಷಾಟನೆಯಲ್ಲಿ ಸಿಕ್ಕಿಬಿದ್ದವರಿಗೆ ದಂಡ ವಿಧಿಸಲಾಗುತ್ತಿದೆ ಮತ್ತು ಗಡೀಪಾರು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಮ್ರಾ ಅಥವಾ ಅಲ್ಪಾವಧಿಯ ವೀಸಾಗಳಿಗೆ ಅರ್ಜಿ ಸಲ್ಲಿಸುವ ಪಾಕಿಸ್ತಾನಿ ಪ್ರಜೆಗಳಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author