ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತಾ ನೇಪಾಳ? ಪ್ರಯಾಣ ನಿಯಮಗಳ ಕುರಿತು ಹೇಳಿದ್ದು ಹೀಗೆ

India-Nepal: ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ ಎಂಬ ವರದಿಗಳನ್ನು ಅಲ್ಲಿನ ಸರ್ಕಾರ ತಳ್ಳಿಹಾಕಿದ್ದು, ಅವು ಸಂಪೂರ್ಣ ಆಧಾರರಹಿತ ಹಾಗೂ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದೆ. ನೇಪಾಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರೇ ಭೇಟಿ ನೀಡುವುದರಿಂದ ಇದು ಪ್ರವಾಸೋದ್ಯಮಕ್ಕೆ ಸಂಕಷ್ಟ ತರಬಹುದು ಎಂಬ ಆತಂಕ ಮೂಡಿದೆ.

ಸಾಂದರ್ಭಿಕ ಚಿತ್ರ

ಕಠ್ಮಂಡು, ಮೇ 13: ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ (Indian Tourist) ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ ಎಂಬ ವರದಿಗಳನ್ನು ಅಲ್ಲಿನ ಸರ್ಕಾರ ತಳ್ಳಿಹಾಕಿದ್ದು, ಅವು ಸಂಪೂರ್ಣ ಆಧಾರರಹಿತ ಹಾಗೂ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದೆ. ನೇಪಾಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರೇ ಭೇಟಿ ನೀಡುವುದರಿಂದ ಇದು ಪ್ರವಾಸೋದ್ಯಮಕ್ಕೆ ಸಂಕಷ್ಟ ತರಬಹುದು ಎಂಬ ಆತಂಕ ಮೂಡಿದೆ. ಇವೆಲ್ಲಾ ಕೇವಲ ವದಂತಿಗಳಷ್ಟೇ. ನೇಪಾಳ (Nepal) ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ತಿಳಿಸಿದೆ.

ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಕುರಿತ ಪ್ರಯಾಣ ನಿಯಮಗಳ ಬಗ್ಗೆ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿರುವ ತಪ್ಪು ಹಾಗೂ ವಾಸ್ತವಾಧಾರವಿಲ್ಲದ ಮಾಹಿತಿಯ ಬಗ್ಗೆ ಪ್ರವಾಸೋದ್ಯಮ ಮಂಡಳಿ ಗಂಭೀರ ಆತಂಕ ವ್ಯಕ್ತಪಡಿಸಿದೆ.

ಭಾರತ-ನೇಪಾಳ ಗಡಿಯನ್ನು ದಾಟುವ ಭಾರತೀಯರಿಗೆ ಕಡ್ಡಾಯ ಗುರುತಿನ ಚೀಟಿ ನಿಯಮ ಜಾರಿಗೆ ತಂದಿದೆ. ಭಾರತೀಯ ಪ್ರವಾಸಿಗರ ವಾಸ್ತವ್ಯವನ್ನು 30 ದಿನಗಳಿಗೆ ಮಿತಿಗೊಳಿಸಿದೆ. ಅವಧಿ ಮೀರಿದರೆ ವಾಹನಗಳನ್ನು ವಶಪಡಿಸಿಕೊಳ್ಳಲು ಅನುಮತಿ ನೀಡಿದೆ ಎಂಬ ವರದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ದಾರಿತಪ್ಪಿಸುವಂತಿವೆ ಎಂದು ತಿಳಿಸಿದೆ.

'ಇದು ಭಾರತವಲ್ಲ, ನೇಪಾಳ’: ಗುಟ್ಕಾ ಉಗುಳಿದ ಭಾರತೀಯ ಯುವಕರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ!

ಅವಧಿಯನ್ನು ನಿರ್ಬಂಧಿಸುವ ಯಾವುದೇ ಹೊಸ ನೀತಿಯನ್ನು ನೇಪಾಳ ಸರ್ಕಾರ ಪರಿಚಯಿಸಿಲ್ಲ. ಹಾಗೆಯೇ, ನೇಪಾಳ ಮತ್ತು ಭಾರತದ ನಡುವಿನ ದೀರ್ಘಕಾಲದ ಮುಕ್ತ ಗಡಿ ವ್ಯವಸ್ಥೆ ಹಾಗೂ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಎರಡು ದೇಶಗಳ ನಡುವಿನ ಜನರ ಬಾಂಧವ್ಯ ಮತ್ತು ಪ್ರವಾಸೋದ್ಯಮ ಸಹಕಾರ ಹಿಂದಿನಂತೆಯೇ ಮುಂದುವರಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಪ್ರವಾಸಿಗರು ಮತ್ತು ಖಾಸಗಿ ವಾಹನಗಳೊಂದಿಗೆ ಭೂ ಮಾರ್ಗಗಳ ಮೂಲಕ ನೇಪಾಳಕ್ಕೆ ಪ್ರವೇಶಿಸುವ ಪ್ರವಾಸಿಗರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಆನ್‌ಲೈನ್ ಸೌಲಭ್ಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂಬುದನ್ನು ಇದು ಎತ್ತಿ ತೋರಿಸಿದೆ.

ಭಾರತ ಮತ್ತು ಪ್ರಪಂಚದೆಲ್ಲೆಡೆಯಿಂದ ಬರುವ ಪ್ರವಾಸಿಗರಿಗೆ ದೇಶವು ಸುರಕ್ಷಿತ, ಸ್ವಾಗತಾರ್ಹ ಮತ್ತು ಸ್ನೇಹಪರ ತಾಣವಾಗಿ ಉಳಿದಿದೆ ಎಂದು ಮಂಡಳಿಯು ಒತ್ತಿ ಹೇಳಿದೆ. ನೇಪಾಳ ಮತ್ತು ಭಾರತದ ನಡುವಿನ ಸ್ನೇಹ ಹಾಗೂ ಸಹಕಾರದ ಮನೋಭಾವವನ್ನು ಎತ್ತಿಹಿಡಿಯುತ್ತಾ, ಗಡಿಯುದ್ದಕ್ಕೂ ಸುಗಮ ಪ್ರಯಾಣವನ್ನು ಉತ್ತೇಜಿಸಲು ನೇಪಾಳ ಸರ್ಕಾರವು ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.