ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪನಾಮ ದೇಶದಲ್ಲಿ 7.7 ತೀವ್ರತೆಯ ಭಾರಿ ಭೂಕಂಪ; ಮನೆಗಳು ಧ್ವಂಸ, ವಿದ್ಯುತ್‌ ಕಡಿತ, ಹಲವರಿಗೆ ಗಾಯ

Panama Earthquake: ಪನಾಮ ದೇಶದಲ್ಲಿ ಶುಕ್ರವಾರ 7.7 ತೀವ್ರತೆಯ ಹಾಗೂ 6.6 ತೀವ್ರತೆಯ ಎರಡು ಪ್ರಬಲ ಭೂಕಂಪನ ಸಂಭವಿಸಿದೆ. ಮೊದಲ ಭೂಕಂಪವು ಮನೆಗಳಿಗೆ ಹಾನಿಯನ್ನುಂಟುಮಾಡಿದೆ. ಭೂಕಂಪನದ ಬಳಿಕ ಬರೋಬ್ಬರಿ 80ಕ್ಕೂ ಅಧಿಕ ಬಾರಿ ಕಂಪನದ ಅನುಭವವಾಗಿದೆ.

ಸಂಗ್ರಹ ಚಿತ್ರ

ಪನಾಮ ಸಿಟಿ: ಪನಾಮ ದೇಶದಲ್ಲಿ ಶುಕ್ರವಾರ 7.7 ತೀವ್ರತೆಯ ಹಾಗೂ 6.6 ತೀವ್ರತೆಯ ಎರಡು ಪ್ರಬಲ ಭೂಕಂಪನ ಸಂಭವಿಸಿದೆ. ಮೊದಲ ಭೂಕಂಪವು ಮನೆಗಳಿಗೆ ಹಾನಿಯನ್ನುಂಟುಮಾಡಿದೆ. ಭೂಕಂಪನದ (Panama Earthquake) ಬಳಿಕ ಬರೋಬ್ಬರಿ 80ಕ್ಕೂ ಅಧಿಕ ಬಾರಿ ಕಂಪನದ ಅನುಭವವಾಗಿದೆ. ಇದರಿಂದಾಗಿ ಹಲವೆಡೆ ಕಟ್ಟಡಗಳು ಧ್ವಂಸವಾಗಿದ್ದು, ಹಲವು ನಗರಗಳಲ್ಲಿ ವಿದ್ಯುತ್‌ ಕಡಿತ ಉಂಟಾಗಿದೆ.

ಭೂಕಂಪದ ಕೇಂದ್ರಬಿಂದುವಿನ ಬಳಿ ಇರುವ ಹೆರೆರಾ, ವೆರಾಗುವಾಸ್ ಮತ್ತು ಲಾಸ್ ಸ್ಯಾಂಟೋಸ್ ಪ್ರಾಂತ್ಯಗಳಲ್ಲಿ ನೂರಾರು ಮನೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಿಸುತ್ತಿವೆ. ಪೆನೊನೊಮೆ ನಗರದಲ್ಲಿ ಹೋಟೆಲ್ ಒಂದರ ಮುಂಭಾಗ ಕಾರಿನ ಮೇಲೆ ಕುಸಿದು ಬಿದ್ದಿದ್ದು, ಹಳೆಯ ಕ್ಯಾಥೆಡ್ರಲ್ ಚರ್ಚ್‌ನ ಗೋಪುರ ಭಾಗಶಃ ಕುಸಿದಿದೆ. ರಾಜಧಾನಿ ಪನಾಮ ಸಿಟಿಯಲ್ಲಿರುವ ಪ್ರಮುಖ ಪ್ರಾದೇಶಿಕ ವಾಯುಯಾನ ಕೇಂದ್ರವಾದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುರಕ್ಷತಾ ತಪಾಸಣೆಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

17:56 GMT ಸಮಯಕ್ಕೆ 7.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ದಕ್ಷಿಣ-ಮಧ್ಯ ಪನಾಮದ ಸಣ್ಣ ಪಟ್ಟಣವಾದ ಪಿಟಲೋಜಾ ಅರಿಬಾದಿಂದ ಸುಮಾರು 10 ಕಿಲೋಮೀಟರ್‌ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು US ಭೂವೈಜ್ಞಾನಿಕ ಸಮೀಕ್ಷೆ (USGS) ತಿಳಿಸಿದೆ. ಪಕ್ಕದ ದೇಶಗಳಾದ ಕೊಲಂಬಿಯಾ, ಕೋಸ್ಟರಿಕಾ, ಈಕ್ವೆಡಾರ್, ಪೆರು, ನಿಕರಾಗುವಾ, ಗ್ವಾಟೆಮಾಲಾ, ಎಲ್ ಸಾಲ್ವಡಾರ್ ಮತ್ತು ಮೆಕ್ಸಿಕೊ ಕರಾವಳಿಗಳಲ್ಲಿ ಸುನಾಮಿ ಅಲೆ ಏಳಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದನ್ನು ಕೆಲವು ಸಮಯದ ಬಳಿಕ ಮತ್ತೆ ತೆರೆವು ಮಾಡಲಾಗಿದೆ.

ನೇಪಾಳ ಜಲಪ್ರಳಯದ ಬಳಿಕ ಮತ್ತೆ ಆತಂಕ; ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ

ಈ ಕುರಿತು ಪನಾಮದ ಆರೋಗ್ಯ ಸಚಿವ ಫರ್ನಾಂಡೊ ಬಾಯ್ಡ್ ನೀಡಿದ ಮಾಹಿತಿಯ ಪ್ರಕಾರ, ಹೆರೆರಾ ಮತ್ತು ಕೋಕ್ಲೆ ಪ್ರಾಂತ್ಯಗಳು, ಆಗ್ನೇಯದ ಲಾಸ್ ಸ್ಯಾಂಟೋಸ್, ಪೆನೊನೊಮ್‌ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಅಲ್ಲದೆ, ಲಾಸ್ ಸ್ಯಾಂಟೋಸ್‌ನ ಟೊನೊಸಿ ಪಟ್ಟಣದಲ್ಲಿ ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪನಾಮ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಅವರು ದೇಶದಲ್ಲಿ "ದೊಡ್ಡ ವಿಪತ್ತು" ಎಂದು ಘೋಷಿಸಿದ್ದು, ನಾಗರಿಕರು ಶಾಂತಿ ಕಾಪಾಡುವಂತೆ ಮತ್ತು ವದಂತಿಗಳಿಗೆ ಕಿವಿಗೊಡದಂತೆ ವಿನಂತಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ.

Vishakha Bhat Heggar

View all posts by this author