ಟೆಹರಾನ್: ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಇರಾನ್ (Iran war) ಈಗ ದಿನಕ್ಕೆ ಕೇವಲ ತೈಲ (Oil) ಸಾಗಾಟದಿಂದ 13,129.88 ಕೋಟಿ ರೂ ಆದಾಯ ಗಳಿಸುತ್ತಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ (US) ಮತ್ತು ಇಸ್ರೇಲ್ (Israel) ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ವಿಶ್ವದ ಗಮನ ಸೆಳೆದಿರುವ ಹೊರ್ಮುಜ್ ಜಲಸಂಧಿ ಈಗ ಇರಾನ್ ಗೆ ಬಹುದೊಡ್ಡ ಆದಾಯದ ಮೂಲವಾಗಿದೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸಿರುವ ದಾಳಿಗೆ ಪ್ರತಿಯಾಗಿ ಇಲ್ಲಿ ತೈಲ ಸಾಗಾಟಕ್ಕೆ ನಿರ್ಬಂಧ ಹೇರಿರುವ ಇರಾನ್ ಇದೀಗ ಈ ಜಲ ಸಂಧಿಯ ಮೂಲಕ ಕೇವಲ ತೈಲ ಸಾಗಾಟದಿಂದಲೇ ಭಾರಿ ಪ್ರಮಾಣದ ಆದಾಯವನ್ನು ಗಳಿಸುತ್ತಿದೆ.
ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಇರಾನ್ ತೈಲದಿಂದಲೇ ಕೋಟ್ಯಂತರ ರೂಪಾಯಿ ಆದಾಯವನ್ನು ಗಳಿಸುತ್ತಿದೆ. ಜಲಸಂಧಿ ಮೂಲಕ ಇಂಧನ ಹೊತ್ತುಕೊಂಡು ಸಾಗುವ ಪ್ರತಿ ಹಡಗುಗಳಿಗೆ ಸುಮಾರು 20 ಲಕ್ಷ ರೂಪಾಯಿ ಸಾಗಣೆ ಶುಲ್ಕವನ್ನು ವಿಧಿಸಿರುವ ಇರಾನ್ ಈ ಮೂಲಕ ಹೆಚ್ಚುವರಿ ಆದಾಯವನ್ನು ಪಡೆಯುತ್ತಿದೆ.
Petrol duty: ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರಿ ಕಡಿತ: ಪೆಟ್ರೋಲ್ ₹3, ಡೀಸೆಲ್ ಶೂನ್ಯ
ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಕೇವಲ ತೈಲ ಮಾರಾಟದಿಂದ ನೂರಾರು ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯವನ್ನು ಗಳಿಸಿದೆ. ಇದಕ್ಕಾಗಿ ಅದು ಹೊರ್ಮುಜ್ ಜಲಸಂಧಿಯನ್ನು ಬಳಸಿಕೊಳ್ಳುತ್ತಿದೆ.
ಯುದ್ಧದ ಆರಂಭದಿಂದಲೂ ತೈಲ ಬೆಲೆಯಲ್ಲಿ ಆಗುತ್ತಿರುವ ಬದಲಾವಣೆಗಳು ಇರಾನ್ ಗೆ ಹೆಚ್ಚಿನ ಲಾಭವನ್ನು ತಂದು ಕೊಟ್ಟಿದೆ. ಅದರ ಪ್ರಮುಖ ಕಚ್ಚಾ ತೈಲವು ಚೀನಾದಲ್ಲಿಅತ್ಯಂತ ಕಡಿಮೆ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ತಿಂಗಳು ಇರಾನ್‌ನ ರಫ್ತು ದಿನಕ್ಕೆ ಸುಮಾರು 1.6 ಮಿಲಿಯನ್ ಬ್ಯಾರೆಲ್‌ಗಳಾಗಿದ್ದು, ಇದು ಯುದ್ಧ ಪೂರ್ವ ಇದ್ದ ಅಂಕಿ ಅಂಶಗಳಾಗಿವೆ. ಇರಾನಿನ ಕಚ್ಚಾ ತೈಲವನ್ನು ಸಾಗಿಸುವ ಹಡಗುಗಳು ಖಾರ್ಗ್ ದ್ವೀಪದ ಟರ್ಮಿನಲ್‌ನಲ್ಲಿ ಲೋಡ್ ಮಾಡಲಾಗುತ್ತಿದ್ದು, ಇದು ಹೊರ್ಮುಜ್ ಜಲಸಂಧಿಯ ಮೂಲಕ ಪರ್ಷಿಯನ್ ಕೊಲ್ಲಿಯಿಂದ ನಿರ್ಗಮಿಸುತ್ತಿವೆ ಎನ್ನಲಾಗಿದೆ. ಗಲ್ಫ್ ರಾಷ್ಟ್ರಗಳಿಂದ ತೈಲ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವ ಇರಾನ್ ಇದಕ್ಕೆ ಪ್ರತಿಯಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ.
ಒಟ್ಟಿನಲ್ಲಿ ಈ ಯುದ್ಧ ಕಾಲದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜೊತೆ ಹೋರಾಡುತ್ತಿರುವ ಇರಾನ್ ಇದರೊಂದಿಗೆ ತನ್ನ ಅದಾಯವನ್ನೂ ಹೆಚ್ಚಿಸಿಕೊಂಡಿದೆ. ಯುದ್ಧದ ಪರಿಣಾಮ ತೈಲ ಬೆಲೆಗಳ ಮೇಲೆ ಬೀರದಂತೆ ಮಾಡಲು ವಾಷಿಂಗ್ಟನ್ ಪ್ರಯತ್ನಿಸುತ್ತಿರುವ ನಡುವೆಯೇ ಸಮುದ್ರದಲ್ಲಿರುವ ಟ್ಯಾಂಕರ್‌ಗಳಿಗೆ ಭಾರಿ ಪ್ರಮಾಣದ ತೆರಿಗೆ ವಿಧಿಸಿ ನಿರ್ಬಂಧಗಳನ್ನು ತೆರವುಗೊಳಿಸಿರುವುದು ಇರಾನ್ ಗೆ ಮತ್ತಷ್ಟು ಲಾಭ ತಂದುಕೊಡುತ್ತಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೊಲಂಬಿಯಾದ ಜಾಗತಿಕ ಇಂಧನ ನೀತಿ ಕೇಂದ್ರದ ಹಿರಿಯ ಸಂಶೋಧನಾ ವಿದ್ವಾಂಸ ರಿಚರ್ಡ್ ನೆಫ್ಯೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಗೆ ತೈಲ ಮಾರಾಟದಿಂದ ಹೆಚ್ಚು ಲಾಭವಾಗುವಂತೆ ಮಾಡುತ್ತಿದೆ. ಇರಾನಿನ ತೈಲ ಮಾರಾಟವನ್ನು ತಡೆಯುವುದು ಯುನೈಟೆಡ್ ಸ್ಟೇಟ್ಸ್‌ಗೆ ಆದ್ಯತೆಯಾಗಿತ್ತು ಎಂದು ಮೊದಲು ನಾನು ಭಾವಿಸಿದ್ದೆ ಎಂದು ಹೇಳಿದ್ದಾರೆ.
ಇರಾನ್ ನ ಜೀವನಾಡಿಯಾಗಿದೆ ಖಾರ್ಗ್ ದ್ವೀಪ
ಒಂದು ಕಡೆ ಇರಾಕ್ ಮತ್ತು ಕುವೈತ್ ನ ತೈಲ ಉತ್ಪಾದನೆ ಮೇಲೆ ನಿರ್ಬಂಧ ಇನ್ನೊಂದು ಕಡೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾಗಳಿಗೆ ಪರ್ಯಾಯ ರಫ್ತು ಮಾರ್ಗಗಳನ್ನು ಹುಡುಕುವಂತೆ ಮಾಡಿರುವ ಇರಾನ್ ಇದೀಗ ತನ್ನ ಕಚ್ಚಾ ತೈಲವನ್ನು ಟ್ಯಾಂಕರ್ ಗಳಲ್ಲಿ ತುಂಬಿಸಿ ಪರ್ಷಿಯನ್ ಕೊಲ್ಲಿಯಿಂದ ಹೊರಗೆ ಸಾಗುವಂತೆ ಮಾಡಿದೆ.
ಜಮ್ಮು-ಕಾಶ್ಮೀರದಲ್ಲಿ ಇರಾನ್‌ಗೆ ನೀಡಿದ್ದ ದೇಣಿಗೆ ದುರುಪಯೋಗ ಶಂಕೆ; ಮಧ್ಯವರ್ತಿಗಳ ವಿರುದ್ಧ ತನಿಖೆ ಶುರು
ಮಾರ್ಚ್ 1 ರಿಂದ 23 ರವರೆಗೆ ಇರಾನ್ ದಿನಕ್ಕೆ ಸರಾಸರಿ 1.6 ಮಿಲಿಯನ್ ಬ್ಯಾರೆಲ್ ತೈಲ ರಫ್ತು ಮಾಡಿದೆ ಎನ್ನುತ್ತದೆ ಅಂಕಿ ಅಂಶಗಳು. ಖಾರ್ಗ್ ದ್ವೀಪದಲ್ಲಿನ ತೈಲ ಮೂಲಸೌಕರ್ಯ ಯುಎಸ್ ಹೊಂದಿದ್ದರೂ ಕೂಡ ಅದು ಅಲ್ಲಿ ಮಿಲಿಟರಿ ಮೇಲೆ ಮಾತ್ರ ಗುರಿ ಇಡುತ್ತಿದೆ.
ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಬ್ರೌಸರ್‌ನ ಉಪಗ್ರಹವು ಮಾರ್ಚ್ 2 ರಿಂದ ಮಾರ್ಚ್ 22 ರವರೆಗೆ ತೆಗೆದಿರುವ ಚಿತ್ರಗಳಲ್ಲಿ ಟರ್ಮಿನಲ್‌ನಲ್ಲಿ ಲಂಗರು ಹಾಕಲಾದ ದೊಡ್ಡ ಕಚ್ಚಾ ತೈಲದ ಹಡಗುಗಳಿರುವುದನ್ನು ತೋರಿಸಿದೆ.