ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಪತಿ ಮೇಲಿನ ದಾಳಿಯ ಸುದ್ದಿ ಕೇಳಿ ಆಘಾತವಾಗಿತ್ತುʼʼ: ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್ ಪತ್ನಿ ಫಸ್ಟ್‌ ರಿಯಾಕ್ಷನ್‌

Smit Machchhar’s Wife Sonal Machchhar: ಫ್ಲೈದುಬೈ ವಿಮಾನದಲ್ಲಿ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ದಾಳಿಯ ಸುದ್ದಿ ಕೇಳಿದ ಕ್ಷಣ ತಾನು ತೀವ್ರ ಆಘಾತಕ್ಕೊಳಗಾಗಿದ್ದೆ ಎಂದು ಅವರ ಪತ್ನಿ ಸೋನಲ್ ಮಚ್ಚಾರ್ ಹೇಳಿದ್ದಾರೆ. ಪತಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಕುಟುಂಬ ಹಾಗೂ ಸ್ನೇಹಿತರು ಧೈರ್ಯ ತುಂಬಿದರು ಎಂದು ಅವರು ತಿಳಿಸಿದ್ದಾರೆ.

ಸೋನಲ್ ಮಚ್ಚಾರ್ ಮತ್ತು ಸ್ಮಿತ್‌ ಮಚ್ಚಾರ್‌ (ಸಂಗ್ರಹ ಚಿತ್ರ)

ನವದೆಹಲಿ/ದುಬೈ: ಫ್ಲೈದುಬೈ (Flydubai) ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಮೇಲೆ ನಡೆದ ದಾಳಿಯ ಸುದ್ದಿ ತಿಳಿದಾಗ ತಾನು ತೀವ್ರ ಆಘಾತಕ್ಕೊಳಗಾಗಿದ್ದೆ ಎಂದು ಅವರ ಪತ್ನಿ ಸೋನಲ್ ಮಚ್ಚಾರ್ (Sonal Machchhar) ಹೇಳಿದ್ದಾರೆ. ಆರಂಭದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯದಷ್ಟು ಮಾನಸಿಕವಾಗಿ ಕುಗ್ಗಿದ್ದೆ ಎಂದು ಅವರು ತಿಳಿಸಿದ್ದಾರೆ.

ಸ್ಮಿತ್ ಮಚ್ಚಾರ್ ಅವರ ಪತ್ನಿ ಸೋನಲ್ ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ, “ನಾನು ತುಂಬಾ ಆಘಾತಗೊಂಡಿದ್ದೆ. ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನೇ ಯೋಚಿಸುವಷ್ಟು ಮಾನಸಿಕ ಸಾಮರ್ಥ್ಯ ಆಗ ಇರಲಿಲ್ಲ” ಎಂದು ಘಟನೆ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ತಮ್ಮೊಂದಿಗೆ ಇದ್ದು ಧೈರ್ಯ ತುಂಬಿದರು ಎಂದು ಅವರು ಹೇಳಿದ್ದಾರೆ. ಕೆಲವೇ ಸಮಯದಲ್ಲಿ ಸ್ಮಿತ್ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ದೊರೆತಿದ್ದರಿಂದ ಆತಂಕ ಸ್ವಲ್ಪ ಕಡಿಮೆಯಾಯಿತು ಎಂದು ಸೋನಲ್ ತಿಳಿಸಿದ್ದಾರೆ.

ಫ್ಲೈದುಬೈ ವಿಮಾನದಲ್ಲಿ ಇರಿತಕ್ಕೊಳಗಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ನೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಪತಿಯ ಭೇಟಿಯಿಂದ ನೆಮ್ಮದಿ

ಸ್ಮಿತ್ ಅವರನ್ನು ಭೇಟಿಯಾಗಿರುವ ಸೋನಲ್, ಯುಎಇ ವೈದ್ಯರು ಹಾಗೂ ಸೇನಾ ವೈದ್ಯರಿಂದ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ನೆಮ್ಮದಿ ತಂದಿದೆ ಎಂದು ಹೇಳಿದ್ದಾರೆ. ಇದೀಗ ತಮ್ಮ ಪತಿಯ ಚೇತರಿಕೆಯೇ ಪ್ರಮುಖ ಆದ್ಯತೆಯಾಗಿದ್ದು, ಅವರು ಶೀಘ್ರವೇ ಮನೆಗೆ ಮರಳಲಿ ಎಂದು ಆಶಿಸುತ್ತಿರುವುದಾಗಿ ತಿಳಿಸಿದ್ದಾರೆ.

ಫ್ಲೈದುಬೈ ವಿಮಾನ ದುಬೈಯಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವೇಳೆ ಸಹ ಪೈಲಟ್ ದಾಳಿ ನಡೆಸಿದ್ದರಿಂದ ಸ್ಮಿತ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು. ವಿಮಾನವು ಸಾವಿರಾರು ಅಡಿ ಎತ್ತರ ಕಳೆದುಕೊಂಡು ತುರ್ತು ಪರಿಸ್ಥಿತಿಗೆ ಸಿಲುಕಿದ್ದರೂ, ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆದಿದ್ದರು. ಇರದಿಂದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಯಿತು.

ಸ್ಮಿತ್ ಮಚ್ಚಾರ್ ಅವರೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಸೋನಲ್, ಸ್ಮಿತ್ ಚೇತರಿಸಿಕೊಂಡ ಬಳಿಕ ಸೂಕ್ತ ಸಮಯದಲ್ಲಿ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.