ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕದನ ವಿರಾಮ ಮಾತುಕತೆಯಲ್ಲಿ ಪ್ರಗತಿಯಾದರೆ ಇರಾನ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದರು. ಇಲ್ಲಿ ಯಾವುದೇ ರೀತಿಯ ಆಟ ನಡೆಯುತ್ತಿಲ್ಲ. ಕದನ ವಿರಾಮ ಮಾತುಕತೆಯಲ್ಲಿ ಪ್ರಗತಿ ಕಂಡು ಬಂದರೆ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕರನ್ನು ಮುಖಾಮುಖಿಯಾಗಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಪಾಕಿಸ್ತಾನದ (Pakistan) ಇಸ್ಲಾಮಾಬಾದ್ (Islamabad) ನಲ್ಲಿ ನಡೆಯುವ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ (ceasefire talks) ಪ್ರಗತಿ ಕಂಡು ಬಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಇರಾನ್ ನಾಯಕರನ್ನು (Iran leaders) ಮುಖಾಮುಖಿಯಾಗಿ ಭೇಟಿ ಮಾಡುವ ಇಚ್ಛೆ ಹೊಂದಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (US Vice President J.D. Vance) ಹೇಳಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಂತಿ ಮಾತುಕತೆಗಾಗಿ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.

ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂತಿ ಮಾತುಕತೆಗೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಆರಂಭಿಸುವ ಸೂಚನೆ ನೀಡಿದ್ದಾರೆ, ಇರಾನ್ ಜೊತೆಗಿನ ಮಾತುಕತೆಗಳು ಪ್ರಗತಿ ಸಾಧಿಸಿದರೆ ಹಿರಿಯ ಇರಾನಿನ ನಾಯಕರನ್ನು ಅವರು ಭೇಟಿ ಮಾಡಲು ಸಿದ್ಧರಿದ್ದಾರೆ ಎಂದ ಅವರು, ಪಾಕಿಸ್ತಾನಕ್ಕೆ ಅಮೆರಿಕ ನಿಯೋಗದಲ್ಲಿ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಸಲಹೆಗಾರ ಜೇರೆಡ್ ಕುಶ್ನರ್ ಸೇರಿದಂತೆ ಇನ್ನು ಹಲವರು ತೆರಳುತ್ತಿದ್ದಾರೆ ಎಂದು ದೃಢಪಡಿಸಿದರು.

20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿಯನ್ನು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ ಸಾರ್ವಜನಿಕರು; ರೋಚಕ ವಿಡಿಯೊ ವೈರಲ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಅಮೆರಿಕದ ನಿಯೋಗ ಬೆಳಗ್ಗೆ ಇಲ್ಲಿಂದ ತೆರಳಲಿದೆ. ಸಮಯಕ್ಕೆ ಸರಿಯಾಗಿ ಅವರು ಇಸ್ಲಾಮಾಬಾದ್ ತಲುಪುತ್ತಾರೆ. ಜೆಡಿ ವ್ಯಾನ್ಸ್ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದರು.

ಕದನ ವಿರಾಮ ಒಪ್ಪಂದದ ಎರಡನೇ ಸುತ್ತಿನ ಮಾತುಕತೆಯಲ್ಲಿ ಇರಾನ್ ಭಾಗವಹಿಸುವುದಿಲ್ಲ ಎಂದು ಟೆಹರಾನ್ ಈಗಾಗಲೇ ಸ್ಪಷ್ಟಪಡಿಸಿದೆ. ಈ ಕುರಿತು ಇರಾನ್ ಮಾಧ್ಯಮವೊಂದು ವರದಿ ಮಾಡಿದ್ದು, ಮುಂದಿನ ಸುತ್ತಿನ ಶಾಂತಿ ಮಾತುಕತೆಗಾಗಿ ಇರಾನ್ ಭಾಗವಹಿಸುವ ಯಾವುದೇ ಯೋಜನೆಗಳಿಲ್ಲ. ವಾಷಿಂಗ್ಟನ್‌ನ ಅತಿಯಾದ ಬೇಡಿಕೆಗಳು, ಅವಾಸ್ತವಿಕ ನಿರೀಕ್ಷೆಗಳು, ನಿಲುವಿನಲ್ಲಿ ನಿರಂತರ ಬದಲಾವಣೆಗಳು, ಪುನರಾವರ್ತಿತ ವಿರೋಧಾಭಾಸಗಳು ಮತ್ತು ಮುಂದುವರಿದ ನೌಕಾ ದಿಗ್ಬಂಧನದ ಕಾರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

ಇರಾನ್ ನಾಯಕರು ಮಾತುಕತೆ ಬಾರದೇ ಇದ್ದರೆ ಮಾತುಕತೆ ಮೊದಲೇ ವಿಫಲವಾಗುತ್ತದೆ. ಈ ಕುರಿತು ಯಾವುದೇ ಕಳವಳ ಇಲ್ಲ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಮಾತುಕತೆಗಳನ್ನು ನಡೆಸಬೇಕು. ಈ ಹಂತದಲ್ಲಿ ಯಾರೂ ಆಟವಾಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಇಸ್ಲಾಮಾಬಾದ್ ನಲ್ಲಿ ಕಳೆದ ವಾರ ನಡೆದ ಮೊದಲ ಹಂತದ ಮಾತುಕತೆಗಳು ವಿಫಲವಾಗಿದೆ. ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಸಲಹೆಗಾರ ಜೇರೆಡ್ ಕುಶ್ನರ್ ಅವರೊಂದಿಗೆ ಅಮೆರಿಕದ ನಿಯೋಗವನ್ನು ಮುನ್ನಡೆಸಿದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ನಾವು ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂಬುದು ಕೆಟ್ಟ ಸುದ್ದಿ. ಇದು ಯುಎಸ್ ಗಿಂತ ಇರಾನ್‌ಗೆ ಕೆಟ್ಟ ಸುದ್ದಿ ಎಂದು ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ರುತ್ ಸೋಷಿಯಲ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾನು ಇರಾನ್ ನಾಯಕರನ್ನು ಭೇಟಿಯಾಗಲು ಯಾವುದೇ ಸಮಸ್ಯೆ ಇಲ್ಲ. ಅವರು ಭೇಟಿಯಾಗಲು ಬಯಸಿದರೆ ನಮ್ಮಲ್ಲಿ ಕೆಲವು ಸಮರ್ಥ ಜನರಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮವು ವಾಷಿಂಗ್ಟನ್‌ಗೆ ಪ್ರಮುಖ ವಿಷಯವಾಗಿದೆ. ಅವರ ಪರಮಾಣು ಶಸ್ತ್ರಾಸ್ತ್ರಗಳನ್ನು ತೊಡೆದು ಹಾಕಬೇಕು ಎಂದ ಅವರು, ಇರಾನ್ ಇದನ್ನು ಪಾಲಿಸಿದರೆ ಸಾಕಷ್ಟು ಪ್ರಯೋಜನ ಪಡೆಯಲಿದೆ. ಅದು ಅದ್ಭುತ ದೇಶ. ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್ ನನ್ನೊಂದಿಗೆ ಎಂದಿಗೂ ಮಾತನಾಡಲಿಲ್ಲ. ಇರಾನ್‌ನ ನಾಯಕತ್ವದಲ್ಲಿನ ಬದಲಾವಣೆಯು ದೇಶದ ಶ್ರೇಷ್ಠ ಮತ್ತು ಸಮೃದ್ಧ ಭವಿಷ್ಯಕ್ಕೆ ನಾಂದಿಯಾಗಬಹುದು ಎಂದು ತಿಳಿಸಿದರು.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತ ಚಾಣಕ್ಯ ನಡೆ: ಆರ್ಥಿಕ ಸಂಬಂಧ ವೃದ್ಧಿಗೆ ದಕ್ಷಿಣ ಕೊರಿಯಾದೊಂದಿಗೆ ಮಾತುಕತೆ

ಏಪ್ರಿಲ್ 22 ರಂದು ಕದನ ವಿರಾಮ ಅವಧಿ ಕೊನೆಗೊಳ್ಳಲಿದೆ. ಇದಕ್ಕೂ ಮೊದಲು ನಡೆಯುವ ಮಾತುಕತೆ ವಿಫಲವಾದರೆ ಮುಂದಿನ ನಡೆ ಬಗ್ಗೆ ಯಾವುದೇ ಮಾಹಿತಿ ನೀಡದ ಟ್ರಂಪ್, ಅದು ಒಳ್ಳೆಯದು ಆಗಿರುವುದಿಲ್ಲ ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author