ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IMF: ಭಾರತದ ಒತ್ತಾಯಕ್ಕೆ ಮಣೆ ಹಾಕದ ಐಎಂಎಫ್: ಪಾಕ್‌ಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು

ಪಾಕಿಸ್ತಾನಕ್ಕೆ ಸಾಲ ಕೊಡಕೂಡದು ಎಂದು ಭಾರತ ಎಷ್ಟೇ ಒತ್ತಾಯಿಸಿದರೂ ಅದಕ್ಕೆ ಮಣೆ ಹಾಕದ ಐಎಂಎಫ್ ಪಾಕಿಸ್ತಾನಕ್ಕೆ ಒಂದು ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ ಎಂಬ ಮಾಹಿತಿ ಪಾಕಿಸ್ತಾನದ ಪ್ರಧಾನಿ ಕಚೇರಿಯಿಂದ ಹೊರ ಬಿದ್ದಿದೆ.

ಐಎಂಎಫ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು

Profile Ramesh B May 10, 2025 12:07 AM

ಇಸ್ಲಾಮಾಬಾದ್: ಮೇ 7, ಮೇ 8, ಮೇ 9 ಹೀಗೆ ನಿರಂತರವಾಗಿ 3 ದಿನ ರಾತ್ರಿ ಭಾರತದ ಹಲವಾರು ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆಯ ಎದುರು ಪಾಕಿಸ್ತಾನ ಅಲ್ಲಾಡಿ ಹೋಗಿದೆ. ಪಾಕ್ ಸೇನೆ ಪ್ರಯೋಗಿಸಿದ ಕ್ಷಿಪಣಿ ಮತ್ತು ಡ್ರೋನ್‌ಗಳು ಸಂಪೂರ್ಣವಾಗಿ ವಿಫಲವಾಗಿವೆ. ಇದೆಲ್ಲದರ ಮಧ್ಯೆ ಪಾಕಿಸ್ತಾನವನ್ನು ಆರ್ಥಿಕವಾಗಿಯೂ ಹಿಂಡಿ ಹಾಕಲು ಭಾರತ ನಿರ್ಧರಿಸಿತ್ತು. ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಸಾಲ ಕೊಡಬಾರದು ಎಂದು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಎಂಎಫ್‌ (International Monetary Fund) ಅನ್ನು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೆ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಅಜಯ್ ಬಂಗಾ ಕೂಡ ಮೇ 8ರಂದು ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಇದು ಫಲ ನೀಡಿಲ್ಲ. ಪಾಕಿಸ್ತಾನಕ್ಕೆ ಸಾಲ ಕೊಡಕೂಡದು ಎಂದು ಭಾರತ ಎಷ್ಟೇ ಒತ್ತಾಯಿಸಿದರೂ ಅದಕ್ಕೆ ಮಣೆ ಹಾಕದ ಐಎಂಎಫ್ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ ಎಂಬ ಮಾಹಿತಿ ಪಾಕಿಸ್ತಾನದ ಪ್ರಧಾನಿ ಕಚೇರಿಯಿಂದ ಹೊರ ಬಿದ್ದಿದೆ.

ಪಾಕಿಸ್ತಾನಕ್ಕೆ ಆರ್ಥಿಕವಾಗಿ ಸಹಾಯ ಮಾಡಿದರೆ ಸಂಪೂರ್ಣ ಹಣವನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತದೆ ಎಂದು ಭಾರತ ಸರ್ಕಾರವು ಗಂಭೀರವಾಗಿ ಆರೋಪಿಸಿತ್ತು. ಹೀಗಾಗಿ ಐಎಂಎಫ್‌ಗೆ ಸಾಲ ಕೊಡದಂತೆಯೂ ಒತ್ತಾಯಿಸಿತ್ತು. ಆದರೆ ಐಎಂಎಫ್ ಸಾಲ ಮಂಜೂರು ಮಾಡಿದೆ. ಇದೀಗ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.