ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Imran Khan: ಭ್ರಷ್ಟಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ 'ನೊಬೆಲ್​ ಶಾಂತಿ' ಪ್ರಶಸ್ತಿಗೆ ನಾಮನಿರ್ದೇಶನ!

ಭ್ರಷ್ಟಾಚಾರ, ದೇಶದ್ರೋಹ ಆರೋಪದ ಮೇಲೆ ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಅವರನ್ನು ಎರಡನೇ ಬಾರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕಿಸ್ತಾನದಿಂದ ನಾಮನಿರ್ದೇಶನ ಮಾಡಲಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು "ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ" ರಕ್ಷಣೆಗಾಗಿ ಮಾಡಿದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ದೇಶದಿಂದ ನಾಮನಿರ್ದೇಶನ ಮಾಡಲಾಗಿದೆ.

ಮಾಜಿ ಪಿಎಂ ಇಮ್ರಾನ್​ ಖಾನ್​ ನೊಬೆಲ್​ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ!

Profile Vishakha Bhat Apr 1, 2025 12:14 PM

ಇಸ್ಲಾಮಾಬಾದ್‌: ಭ್ರಷ್ಟಾಚಾರ, ದೇಶದ್ರೋಹ ಆರೋಪದ ಮೇಲೆ ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ( Imran Khan) ​ ಅವರನ್ನು ಎರಡನೇ ಬಾರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕಿಸ್ತಾನದಿಂದ ನಾಮನಿರ್ದೇಶನ ಮಾಡಲಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು "ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ" ರಕ್ಷಣೆಗಾಗಿ ಮಾಡಿದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ದೇಶದಿಂದ ನಾಮನಿರ್ದೇಶನ ಮಾಡಲಾಗಿದೆ ಎಂದು ಪಾಕಿಸ್ತಾನ್​ ವರ್ಲ್ಡ್ ಅಲೈಯನ್ಸ್ (PWA) ತಿಳಿಸಿದೆ.



ನಾರ್ವೆಯ ರಾಜಕೀಯ ಪಕ್ಷವಾದ ಪಾರ್ಟಿಯೆಟ್ ಸೆಂಟ್ರಮ್ ತನ್ನ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯಾವುದೇ ದೇಶಗಳು ಅರ್ಹ ವ್ಯಕ್ತಿಯನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ಪಾಕಿಸ್ತಾನದಿಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ನೊಬೆಲ್ ಶಾಂತಿ' ಪ್ರಶಸ್ತಿಗೆ ಎರಡನೇ ಸಲ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದೆ.2019 ರಲ್ಲಿ, ಭಾರತದೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಖಾನ್ ಮಾಡಿದ ಪ್ರಯತ್ನಗಳಿಗಾಗಿ ಖಾನ್‌ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಫೆಬ್ರವರಿ 2019 ರಲ್ಲಿ ಬಾಲಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಪಾಕಿಸ್ತಾನದ ಪ್ರದೇಶದೊಳಗೆ ಅವರ ವಿಮಾನವನ್ನು ಹೊಡೆದುರುಳಿಸಿದಾಗ ಸೆರೆಯಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವ ಖಾನ್ ಅವರ ನಿರ್ಧಾರವು ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವೇಷವನ್ನು ಕಡಿಮೆ ಮಾಡಿದೆ ಎಂದು ನಿರ್ಣಯವು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Qari Abdu Rehman: ಮತ್ತೊಂದು ಉಗ್ರ ಬೇಟೆ; ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಫೈನಾನ್ಸರ್ ಖಾರಿ ಅಬ್ದು ರೆಹಮಾನ್‌ನ ಹತ್ಯೆ

ಜೈಲಿನಲ್ಲಿರುವ ಖಾನ್‌

ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕರೂ ಆಗಿರುವ ಖಾನ್, 2023 ರಿಂದ ಜೈಲಿನಲ್ಲಿದ್ದಾರೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಜಿ ಪ್ರಧಾನಿಯ ಮೇಲೆ ಗುರುತರವಾದ ಆರೋಪಗಳುಳ್ಳ ನಾಲ್ಕು ಪ್ರಕರಣಗಳಿವೆ. ತೋಷಖಾನಾ ಪ್ರಕರಣ ಎಂದೇ ಕರೆಯಲಾಗುವ ಪ್ರಧಾನಿ ಬಂದ ಉಡುಗೊರೆಗಳ ಮಾರಾಟ, ದೇಶದ ರಹಸ್ಯಗಳ ಸೋರಿಕೆ, ಕಾನೂನುಬಾಹಿರ ವಿವಾಹದ ಆರೋಪಗಳು ಖಾನ್​ ಮೇಲಿವೆ. ಈ ಮೂರು ಪ್ರಕರಣಗಳ ಶಿಕ್ಷೆಯನ್ನು ನ್ಯಾಯಾಲಯಗಳು ರದ್ದುಗೊಳಿಸಿವೆ. 2022 ರಲ್ಲಿ ಅವಿಶ್ವಾಸ ಮತದಾನದ ನಂತರ ಅಧಿಕಾರ ಕಳೆದುಕೊಂಡ ಮಾಜಿ ಪ್ರಧಾನಿ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿ, ಅವುಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ.