ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Imran Khan: ರಾವಲ್ಪಿಂಡಿಯ ವಿಶೇಷ ಜೈಲಿಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಥಳಾಂತರ?

ಭ್ರಷ್ಟಾಚಾರ, ಲಂಚ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಕಾಸಿಮ್ ಮಾರ್ಕೆಟ್ ಪ್ರದೇಶದ ಸ್ಪೆಷಲ್ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದರು. 2022ರಲ್ಲಿ ಇಮ್ರಾನ್ ಖಾನ್ ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.

ಪ್ರಧಾನಿ ಇಮ್ರಾನ್ ಖಾನ್

ರಾವಲ್ಪಿಂಡಿ: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಮತ್ತು PTI ಸ್ಥಾಪಕ ಇಮ್ರಾನ್ ಖಾನ್ (Imran Khan) ಅವರನ್ನು ರಾವಲ್ಪಿಂಡಿಯ (Rawalpindi) ಅಡಿಯಾಲಾ ಜೈಲಿನಿಂದ ಕಾಸಿಮ್ ಮಾರ್ಕೆಟ್ ಪ್ರದೇಶದ ಸ್ಪೆಷಲ್ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತೋಶಾಖಾನಾ-II ಕೇಸ್‌ನ ತೀರ್ಪು ಬಂದ ನಂತರ ಈ ಕ್ರಮ ಕೈಗೊಳ್ಳಬಹುದು. ಜೊತೆಗೆ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬೀ ಸಹ ಅಲ್ಲಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದು ಇಮ್ರಾನ್ ಖಾನ್ ಅವರ ಭದ್ರತೆಗಾಗಿ ತೆಗೆದ ಕ್ರಮವೆಂದು ಅಧಿಕಾರಿಗಳು ಹೇಳಿದ್ದಾರೆ.

ಜುಲೈ 31ರಿಂದ ಕಾಸಿಮ್ ಮಾರ್ಕೆಟ್‌ನಲ್ಲಿ 40 ಜೈಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಟ್ಟಾಕ್, ಚಕ್ವಾಲ್, ಜೆಹಲಂ ಜೈಲುಗಳಿಂದ ಸಿಬ್ಬಂದಿಯನ್ನು ಕೆಸಲಾಗಿದೆ ಎಂದು ವರದಿಯಾಗಿದೆ. ಭದ್ರತಾ ವ್ಯವಸ್ಥೆ ಮತ್ತು 24X7 ನಿಗಾ ವಹಿಸಲು ಸಿದ್ಧವಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನ ಆದೇಶದ ಮೇಲೆ ಇಮ್ರಾನ್ ಅವರನ್ನು ಅಡಿಯಾಲಾ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇಮ್ರಾನ್ ಖಾನ್, 2023ರ ಮೇ 9ರಂದು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಬಂಧನವಾದ ನಂತರ ಅಟ್ಟಾಕ್ ಜೈಲಿನಿಂದ ಅಡಿಯಾಲಾ ಜೈಲಿಗೆ ಕರೆತರಲಾಗಿತ್ತು. 2022ರಲ್ಲಿ ಅಧಿಕಾರದಿಂದ ತೆರವುಗೊಳಿಸಲ್ಪಟ್ಟ ನಂತರ ಅಲ್-ಕಾದಿರ್ ಟ್ರಸ್ಟ್, ತೋಶಾಖಾನಾ, ಸೈಫರ್ ಕೇಸ್‌ಗಳಲ್ಲಿ ಇಮ್ರಾನ್ ಖಾನ್ ಬಂಧನದಲ್ಲಿದ್ದಾರೆ. ಆಗಸ್ಟ್ 2025ರಲ್ಲಿ ಸುಪ್ರೀಂ ಕೋರ್ಟ್ 8 ಕೇಸ್‌ಗಳಲ್ಲಿ ಬೇಲ್ ಮಂಜೂರು ಮಾಡಿದ್ದರೂ, ಇನ್ನೂ ಜೈಲಿನಲ್ಲಿದ್ದಾರೆ.

ಈ ಸ್ಥಳಾಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. PTI ಬೆಂಬಲಿಗರು, “ಇದು ಇಮ್ರಾನ್ ಅವರ ಮೇಲಿನ ರಾಜಕೀಯ ಒತ್ತಡ” ಎಂದು ಆರೋಪಿಸಿದ್ದಾರೆ. ಸ್ಥಳಾಂತರಕ್ಕೆ ಭ್ರದ್ರತೆಯೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ವಕೀಲರ ಪ್ರಕಾರ, ನ್ಯಾಯಾಲಯದ ಕಾರ್ಯಕ್ರಮಗಳನ್ನು ಸುಗಮಗೊಳಿಸಲು ಸ್ಥಳಾಂತರ ಮಾಡಲಾಗುತ್ತಿದೆ. ಇಮ್ರಾನ್ ಖಾನ್ ಜೈಲಿನಲ್ಲಿದ್ದರೂ ಪಾಕಿಸ್ತಾನದಲ್ಲಿ PTI ಪಕ್ಷದ ಚಟುವಟಿಕೆಗಳು ಈಗಲೂ ಚುರುಕಾಗಿವೆ.

ಈ ಸುದ್ದಿಯನ್ನು ಓದಿ: Bank Holidays: ಗ್ರಾಹಕರೇ ಗಮನಿಸಿ; ಅಕ್ಟೋಬರ್‌ನಲ್ಲಿ ಈ ದಿನಗಳು ಬ್ಯಾಂಕ್‌ ಓಪನ್‌ ಇರುವುದಿಲ್ಲ

ಇಮ್ರಾನ್ ಖಾನ್ ಜೈಲಿಗೆ ಹೋಗಿದ್ಯಾಕೆ?

2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದರು. 2022ರಲ್ಲಿ ಇಮ್ರಾನ್ ಖಾನ್ ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಮನಸ್ತಾಪ ಹೊಂದಿದ್ದರು. ಈ ಬಿರುಕು ಇಮ್ರಾನ್ ಅವರ ಸರ್ಕಾರವನ್ನು ಬೀಳಿಸುವಾಗೇ ಮಾಡಿತ್ತು. ಜಾವೇದ್ ಬಜ್ವಾ ಸೇನೆಯ ಸಹಾಯದಿಂದ ಖಾನ್ ಸರ್ಕಾರವನ್ನು ಉರುಳಿಸಿ, ಅವರನ್ನು ಬಂಧಿಸಿತು. ಅವರ ಬೆಂಬಲಿಗರು ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ ಸೇರಿದಂತೆ ದೇಶಾದ್ಯಂತ ಮಿಲಿಟರಿ ನೆಲೆಗಳು ಮತ್ತು ಕಂಟೋನ್ಮೆಂಟ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್‌ಗೆ ಜಾಮೀನು ನೀಡಿತ್ತು.

ಆದರೆ, ಮೇ 2023 ರಲ್ಲಿ, ಭ್ರಷ್ಟಾಚಾರ, ಲಂಚ, ಸೇನೆಯ ವಿರುದ್ಧ ದಂಗೆಗೆ ಪ್ರಚೋದನೆ, ಕಾನೂನು ಉಲ್ಲಂಘನೆ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವಂತಹ ಸುಮಾರು 200 ಪ್ರಕರಣಗಳನ್ನು ದಾಖಲಿಸಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಯಿತು. ಪಂಜಾಬ್ ಮತ್ತು ಸಿಂಧ್‌ನಿಂದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದವರೆಗೆ ಇಮ್ರಾನ್ ಖಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.