ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Taroor: ಉಗ್ರರ ವಿರುದ್ಧ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ; ಅಮೆರಿಕದಲ್ಲಿ ಪಾಕ್‌ ವಿರುದ್ಧ ಗುಡುಗಿದ ಶಶಿ ತರೂರ್‌

ಪಹಲ್ಗಾಮ್‌ ದಾಳಿ ಬಳಿಕ ಭಾರತ ಸರ್ಕಾರ ಭಯೋತ್ಪಾದನೆ ವಿರುದ್ಧ (Shashi Taroor) ಹೋರಾಟ ಪ್ರಾರಂಭಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು.

ಅಮೆರಿಕದಲ್ಲಿ ಪಾಕ್‌ ವಿರುದ್ಧ ಗುಡುಗಿದ ಶಶಿ ತರೂರ್‌

Profile Vishakha Bhat May 25, 2025 9:31 AM

ವಾಷಿಂಗ್ಟನ್‌: ಪಹಲ್ಗಾಮ್‌ ದಾಳಿ ಬಳಿಕ ಭಾರತ ಸರ್ಕಾರ ಭಯೋತ್ಪಾದನೆ ವಿರುದ್ಧ ಹೋರಾಟ ಪ್ರಾರಂಭಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದೆ. ಶಶಿ ತರೂರ್ (Shashi Taroor) ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು. ಈ ಸಂದರ್ಭದಲ್ಲಿ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಈ ಭಾರತೀಯ ನಿಯೋಗ ಬಂದಿದೆ ಎಂದು ಸಂಸದ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಹೇಗೆ ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ಶಶಿ ತರೂರ್ ನೇತೃತ್ವದ ನಿಯೋಗವು ದಕ್ಷಿಣ ಅಮೆರಿಕಾದ ದೇಶಗಳಾದ ಗಯಾನಾ, ಪನಾಮ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೂ ಭೇಟಿ ನೀಡಲಿದೆ. ಭಯೋತ್ಪಾದನೆಯ ಪಿಡುಗಿನ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲುವುದು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ವಿವರಿಸಲು ಬಯಸಿದ್ದೇವೆ. 9/11 ರ ನಂತರ ಅಮೆರಿಕ ತನ್ನ ದೃಢಸಂಕಲ್ಪ ತೋರಿಸಿದಂತೆಯೇ, ನಮ್ಮ ದೇಶವೂ ಏಪ್ರಿಲ್ 22 ರಂದು ನಮ್ಮ ಮೇಲೆ ದಾಳಿ ಮಾಡಿದ ದುಷ್ಟ ಶಕ್ತಿಗಳ ವಿರುದ್ಧ ನಿಂತಿದೆ ಎಂದು ತರೂರ್ ಹೇಳಿದರು.

ಸರ್ವಪಕ್ಷ ನಿಯೋಗದ ಭೇಟಿಯ ಉದ್ದೇಶದ ಕುರಿತು ಮಾತನಾಡಿದ ಶ್ರೀ ತರೂರ್, ನಾವು ಹೋಗುತ್ತಿರುವ ಪ್ರತಿಯೊಂದು ದೇಶದಲ್ಲೂ ಸಾರ್ವಜನಿಕ ಮತ್ತು ರಾಜಕೀಯ ಅಭಿಪ್ರಾಯದ ವಿವಿಧ ವರ್ಗಗಳೊಂದಿಗೆ ಮಾತನಾಡುವುದು ನಮ್ಮ ಆಲೋಚನೆಯಾಗಿದೆ. ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ಭಾರತ ಪಣ ತೊಟ್ಟಿದೆ ಎಂದು ತರೂರ್‌ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Sindoor: ನಾಗರಿಕರ ರಕ್ಷಣೆ ಕುರಿತು ಮಾತನಾಡುವ ಯೋಗ್ಯತೆ ಪಾಕಿಸ್ತಾನಕ್ಕಿಲ್ಲ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಪಹಲ್ಗಾಮ್‌ ದಾಳಿ ಬಳಿಕ ಭಾರತ ಸರ್ಕಾರ ಭಯೋತ್ಪಾದನೆ ವಿರುದ್ಧ ಹೋರಾಟ ಪ್ರಾರಂಭಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರವನ್ನು ಕೋರಿತು. ಈ ಸಂದರ್ಭದಲ್ಲಿ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಈ ಭಾರತೀಯ ನಿಯೋಗ ಬಂದಿದೆ ಎಂದು ಸಂಸದ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಹೇಗೆ ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.