ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ( India-US trade deal) ಯಾವುದೇ ಬದಲಾವಣೆ ಇಲ್ಲ. ಭಾರತ ಸುಂಕವನ್ನು ಪಾವತಿಸಲಿದೆ. ನಾವು ಪಾವತಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದರು. ಅಮೆರಿಕದ ಸುಪ್ರೀಂ ಕೋರ್ಟ್ (US Supreme Court) ಶುಕ್ರವಾರ ಡೊನಾಲ್ಡ್ ಟ್ರಂಪ್ (Donald Trump) ಅವರ ಜಾಗತಿಕ ಸುಂಕಗಳನ್ನು ( global tariffs) ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ನ್ಯಾಯಯುತ ಒಪ್ಪಂದವಾಗಿದೆ ಎಂದು ತಿಳಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಪರಿಗಣಿಸಿದ ಬಳಿಕ ಅವರು ಶೇ. 10 ಜಾಗತಿಕ ಸುಂಕಗಳನ್ನು ಘೋಷಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿ, ಈಗಾಗಲೇ ನಿರ್ಧರಿಸಿರುವ ಸುಂಕಗಳನ್ನು ಭಾರತ ಪಾವತಿಸುವುದನ್ನು ಮುಂದುವರಿಸುತ್ತದೆ. ಅಮೆರಿಕ ಯಾವುದೇ ಸುಂಕಗಳನ್ನು ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ.
Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು
ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಯಾವುದೂ ಬದಲಾಗುವುದಿಲ್ಲ. ಭಾರತ ಸುಂಕಗಳನ್ನು ಪಾವತಿಸಬೇಕು. ನಾವು ಸುಂಕಗಳನ್ನು ಪಾವತಿಸುವುದಿಲ್ಲ. ಭಾರತದೊಂದಿಗಿನ ಒಪ್ಪಂದದ ಪ್ರಕಾರ ಅವರು ಸುಂಕಗಳನ್ನು ಪಾವತಿಸುತ್ತಾರೆ. ಸುಪ್ರೀಂ ಕೋರ್ಟ್ ಆದೇಶವು ಈ ಹಿಂದಿನ ಸುಂಕ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಸುಂಕ ವಿಚಾರದಲ್ಲಿ ಅಮೆರಿಕವನ್ನು ವಿರೋಧಿಸುತ್ತಿದ್ದವರಿಗಿಂತ ಅವರು ಹೆಚ್ಚು ಬುದ್ಧಿವಂತರಾಗಿದ್ದರು ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಮೆರಿಕವು ಭಾರತೀಯ ರಫ್ತಿನ ಮೇಲೆ ಶೇ. 18ರಷ್ಟು ಸುಂಕವನ್ನು ವಿಧಿಸಲಿದೆ. ಅಮೆರಿಕ ರಫ್ತಿನ ಮೇಲಿನ ಸುಂಕಗಳು ಶೂನ್ಯವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಇದಾದ ಬಳಿಕ ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ವ್ಯವಸ್ಥೆಯ ಬಾಹ್ಯರೇಖೆಗಳನ್ನು ವಿವರಿಸುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗಾಗಿ ಭಾರತದ ಮೇಲೆ ವಿಧಿಸಲಾದ ಶೇ. 25ರಷ್ಟು ಸುಂಕಗಳನ್ನು ಅಮೆರಿಕ ಹಿಂತೆಗೆದುಕೊಳ್ಳುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಮುಂದಿನ ದಿನಗಳಲ್ಲಿ ಭಾರತದ ನಿಯೋಗವೊಂದು ಅಮೆರಿಕಕ್ಕೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ.
ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಸಿಟ್ಟಿನಲ್ಲಿ ಟ್ರಂಪ್, ವಿಭಿನ್ನ ಶಾಸನಬದ್ಧ ಮಾರ್ಗದ ಮೂಲಕ ಏಕರೂಪದ ಶೇ. 10ರಷ್ಟು ಜಾಗತಿಕ ಸುಂಕವನ್ನು ಪರಿಚಯಿಸುವ ಯೋಜನೆಗಳನ್ನು ಘೋಷಿಸಿದರು. ಈ ಸುಂಕಗಳು 150 ದಿನಗಳ ಅವಧಿಗೆ ಸೀಮಿತವಾಗಿದೆ. ಲಭ್ಯವಿರುವ ಇತರ ಕಾರ್ಯವಿಧಾನಗಳನ್ನು ಬಳಸಿಕೊಂಡು ತಮ್ಮ ವ್ಯಾಪಾರ ಕಾರ್ಯಸೂಚಿಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.
ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಶಾಕ್! ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್!
ತಮ್ಮ ಸುಂಕದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವು ನ್ಯಾಯಾಧೀಶರ ತುರ್ತು ಅಧಿಕಾರದ ಅನುಚಿತ ಬಳಕೆಯ ಮೂಲಕ ಜಾರಿಗೆ ತರಲಾಗಿದೆ. ಇದಕ್ಕಾಗಿ ನ್ಯಾಯಮೂರ್ತಿಗಳ ಬಗ್ಗೆ ಸಂಪೂರ್ಣವಾಗಿ ನಾಚಿಕೆಪಡುತ್ತೇನೆ. ಈ ತೀರ್ಪು ತೀವ್ರ ನಿರಾಶಾದಾಯಕ. ತೀರ್ಪಿನಲ್ಲಿ ತಪ್ಪಾಗಿದೆ. ತಮ್ಮ ಮುಂದೆ ಇನ್ನು ಹಲವಾರು ಆಯ್ಕೆಗಳಿವೆ ಎಂದು ಹೇಳಿದರು.