ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-US trade deal: ಭಾರತದೊಂದಿಗೆ ವ್ಯಾಪಾರ ಒಪ್ಪಂದ ಇನ್ನೂ ಅಂತಿಮವಾಗಿಲ್ಲ- ಡೊನಾಲ್ಡ್‌ ಟ್ರಂಪ್

ತೆರಿಗೆ ಒಪ್ಪಂದಕ್ಕೆ (Trade deal) ಆಗಸ್ಟ್ 1ರಂದು ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆ ಭಾರತದೊಂದಿಗೆ ನಡೆಯುವ ವ್ಯಾಪಾರ ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವು ಶೇ. 20- 25ರಷ್ಟು ಸುಂಕ ದರಗಳನ್ನು ಎದುರಿಸಲಿದೆ. ತೆರಿಗೆ ಸಂಬಂಧ ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿಲ್ಲ. ಭಾರತವು ಇತರ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆ ಎಂದು ಹೇಳಿದರು.

ಭಾರತಕ್ಕೆ ಯುಎಸ್‌ನಿಂದ ಶೇ.20 ರಿಂದ 25ರಷ್ಟು ಸುಂಕ ಸಾಧ್ಯತೆ

ನವದೆಹಲಿ: ಭಾರತದೊಂದಿಗೆ ವ್ಯಾಪಾರ ಒಪ್ಪಂದ (India-US trade deal) ಇನ್ನೂ ಅಂತಿಮವಾಗಿಲ್ಲ. ಭಾರತಕ್ಕೆ ಶೇ. 20 ರಿಂದ 25ರಷ್ಟು ಸುಂಕ ವಿಧಿಸುವ (US tariffs) ಸಾಧ್ಯತೆ ಇದೆ. ಭಾರತ ನನ್ನ ಅತ್ಯುತ್ತಮ ಸ್ನೇಹಿತ. ಅವರು ನನ್ನ ಕೋರಿಕೆಯ ಮೇರೆಗೆ ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು. ಇತರ ದೇಶಗಳಿಗಿಂತ ಹೆಚ್ಚಿನ ಸುಂಕವನ್ನು ಭಾರತಕ್ಕೆ ವಿಧಿಸಲಾಗಿದೆ. ಆದರೆ ಈ ನಿಟ್ಟಿನಲ್ಲಿ ಎರಡು ರಾಷ್ಟ್ರಗಳ ನಡುವಿನ ಮಾತುಕತೆಗಳು ಮುಂದುವರಿದಿದ್ದು, ಸುಂಕ ದರವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ.

ತೆರಿಗೆ ಒಪ್ಪಂದಕ್ಕೆ ಆಗಸ್ಟ್ 1ರಂದು ಅಂತಿಮ ಗಡುವು ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದಕ್ಕೂ ಮುನ್ನವೇ ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ. ಸ್ಕಾಟ್ಲೆಂಡ್‌ನಿಂದ ಹಿಂದಿರುಗಿದ ಅನಂತರ ಏರ್ ಫೋರ್ಸ್ ಒನ್‌ನಲ್ಲಿ ಮಾತನಾಡಿದ ಅವರು, ಭಾರತವು ಶೇ. 20- 25ರಷ್ಟು ಸುಂಕ ದರಗಳನ್ನು ಎದುರಿಸಲಿದೆ ಎಂದ ಅವರು, ಭಾರತ ನನ್ನ ಸ್ನೇಹಿತ. ಅವರು ನನ್ನ ಕೋರಿಕೆಯ ಮೇರೆಗೆ ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು. ಆದರೆ ತೆರಿಗೆ ಸಂಬಂಧ ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿಲ್ಲ. ಭಾರತವು ಇತರ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆ ಎಂದು ಹೇಳಿದರು.

ಶೇ. 20- 25ರ ನಡುವಿನ ತಾತ್ಕಾಲಿಕ ಪರಸ್ಪರ ಸುಂಕ ದರವನ್ನು ಎದುರಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ವರದಿಯೊಂದು ಹೇಳಿದ್ದು ಇದರಿಂದ ಭಾರತದಿಂದ ರಫ್ತಾಗುವ ಕೆಲವು ವಸ್ತುಗಳ ಮೇಲೆ ಅಮೆರಿಕದಿಂದ ಹೆಚ್ಚಿನ ಸುಂಕ ಬೀಳುವ ಸಾಧ್ಯತೆ ಇದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ರಾಷ್ಟ್ರಗಳ ನಡುವೆ ಮಾತುಕತೆಗಳು ಪ್ರಗತಿಯಲ್ಲಿವೆ. ಆಗಸ್ಟ್ ಮಧ್ಯಭಾಗದಲ್ಲಿ ದೆಹಲಿಯಿಂದ ನಿಯೋಗ ಬರುವ ನಿರೀಕ್ಷೆಯಿದೆ. ಈ ಕುರಿತು ಭಾರತೀಯ ಸರ್ಕಾರಿ ಅಧಿಕಾರಿಗಳಲ್ಲಿ ಒಬ್ಬರು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಐದು ಸುತ್ತಿನ ವ್ಯಾಪಾರ ಮಾತುಕತೆಗಳ ಬಳಿಕ ಇದು ತಾತ್ಕಾಲಿಕ ಕ್ರಮವಾಗಿದೆ. ಶೀಘ್ರದಲ್ಲೇ ಒಪ್ಪಂದವನ್ನು ರೂಪಿಸಲಾಗುವುದು ಎಂದು ಭಾರತದ ಅಧಿಕಾರಿ ತಿಳಿಸಿದ್ದಾರೆ ಎಂದು ಅವರು ಹೇಳಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ.ಕೆ. ವಿಜಯಕುಮಾರ್, ಮಾರುಕಟ್ಟೆಯ ಮೇಲಿನ ಒತ್ತಡ ಭಾರತ ಮತ್ತು ಯುಎಸ್ ವ್ಯಾಪಾರ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ಭಾರತವು ಶೇ. 20- 25ರಷ್ಟು ಸುಂಕವನ್ನು ಪಾವತಿಸಬೇಕಾಗಬಹುದು ಎಂಬ ಟ್ರಂಪ್ ಅವರ ಹೇಳಿಕೆ, ಅಲ್ಪಾವಧಿಯ ಮಾರುಕಟ್ಟೆ ದೃಷ್ಟಿಕೋನದಿಂದ ಬಹಳ ನಕಾರಾತ್ಮಕವಾಗಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಟ್ರಂಪ್ ಹೆಚ್ಚಿನ ಸುಂಕಗಳನ್ನು ಘೋಷಿಸಿದ್ದರು. ಆದರೆ ಮಾತುಕತೆಗೆ ಅವಕಾಶ ನೀಡಿ ಶೇ. 10ರಷ್ಟು ಕಡಿಮೆ ಸುಂಕ ವಸೂಲಿ ಮಾಡುವುದಾಗಿ ಹೇಳಿ ಅದನ್ನು ವಿಳಂಬಗೊಳಿಸಿದರು. ಈಗ ಆಗಸ್ಟ್ 1ರ ಗಡುವು ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಹೇಳಿದರು.

ಅಮೆರಿಕದ ಸುಂಕ ನೀತಿಯ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಅಧಿಕಾರಿಯೊಬ್ಬರು, ಈ ನಿಟ್ಟಿನಲ್ಲಿ ಎರಡೂ ದೇಶಗಳ ನಡುವೆ ಆರನೇ ಸುತ್ತಿನ ವ್ಯಾಪಾರ ಮಾತುಕತೆ ಆಗಸ್ಟ್ 25 ರಂದು ಭಾರತದಲ್ಲಿ ನಡೆಯಲಿದೆ. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ಐದನೇ ಸುತ್ತಿನ ಮಾತುಕತೆ ನಡೆಸಲಾಗಿತ್ತು. ಎರಡೂ ಕಡೆಯವರ ನಡುವಿನ ಮಾತುಕತೆಗಳು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿವೆ. ಆದರೆ ಇನ್ನು ಪೂರ್ಣ ಒಪ್ಪಂದ ಆಗಿಲ್ಲ. ವಿಶೇಷವಾಗಿ ಮಾರುಕಟ್ಟೆ ಪ್ರವೇಶ ಮತ್ತು ಕೆಲವು ಪ್ರಮುಖ ಉತ್ಪನ್ನಗಳ ಮೇಲಿನ ಸುಂಕಗಳ ಕುರಿತು ಚರ್ಚೆ ಅಂತಿಮಗೊಂಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Actress Ramya: ದರ್ಶನ್‌ ಅಭಿಮಾನಿಗಳ ವಿರುದ್ಧದ ರಮ್ಯಾ ದೂರು ತನಿಖೆ ಸಿಸಿಬಿಗೆ

ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಳು ಅಗತ್ಯವಿದೆ. ನಾವು ಭಾರತೀಯ ಸಹವರ್ತಿಗಳೊಂದಿಗೆ ಮಾತನಾಡುವುದನ್ನು ಮುಂದುವರಿಸಿದ್ದೇವೆ. ಅವರು ತಮ್ಮ ಮಾರುಕಟ್ಟೆಯ ಭಾಗಗಳನ್ನು ತೆರೆಯುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದ್ದಾರೆ. ಹೀಗಾಗಿ ಅವರೊಂದಿಗೆ ಮಾತನಾಡುವುದನ್ನು ಮುಂದುವರಿಸಲು ಸಿದ್ಧರಿದ್ದೇವೆ. ಶೀಘ್ರದಲ್ಲೇ ಒಪ್ಪಂದ ನಡೆಯುವ ನಿರೀಕ್ಷೆ ಇದೆ. ಆದರೆ ಭಾರತದ ದೇಶೀಯ ಮಾರುಕಟ್ಟೆಗಳನ್ನು ರಕ್ಷಿಸುವ ದೀರ್ಘಕಾಲದ ನೀತಿಯಿಂದಾಗಿ ಇದು ವಿಳಂಬವಾಗುತ್ತಿದೆ ಎಂದು ಹೇಳಿದರು.