ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚೀನಾ ಒಡೆತನದ ಕಂಪನಿಯ ಡೋರ್‌ಮ್ಯಾಟ್ ಮೇಲೆ ಪುರಿ ಜಗನ್ನಾಥ ದೇವರ ಚಿತ್ರ; ಹಿಂದೂ ಭಕ್ತರಿಂದ ಆಕ್ರೋಶ

Jagannath of Puri on a doormat: ಇ-ಕಾಮರ್ಸ್ ಸೈಟ್ ಅಲಿಎಕ್ಸ್‌ಪ್ರೆಸ್, ಒಡಿಶಾದ ಪುರಿ ಜಗನ್ನಾಥ ದೇವರ ಚಿತ್ರವನ್ನು ಹೊಂದಿರುವ ಡೋರ್‌ಮ್ಯಾಟ್ ಅನ್ನು ಮಾರಾಟ ಮಾಡಿದೆ. ಚೀನಾದ ಒಡೆತನದ ಜನಪ್ರಿಯ ಇ-ಕಾಮರ್ಸ್ ಸೈಟ್ ಇದಾಗಿದೆ. ಸಂಸ್ಥೆಯ ಈ ನಡವಳಿಕೆಯು ಹಿಂದೂ ಭಕ್ತರಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.

ಡೋರ್‌ಮ್ಯಾಟ್ ಮೇಲೆ ಪುರಿ ಜಗನ್ನಾಥ ದೇವರ ಚಿತ್ರ; ತೀವ್ರ ಆಕ್ರೋಶ

Priyanka P Priyanka P Jul 30, 2025 8:33 PM

ಭುವನೇಶ್ವರ: ಇ-ಕಾಮರ್ಸ್ ಸೈಟ್ ಅಲಿಎಕ್ಸ್‌ಪ್ರೆಸ್ (AliExpress), ಒಡಿಶಾದ ಪುರಿ ಜಗನ್ನಾಥ ದೇವರ (Lord Jagannath) ಚಿತ್ರವನ್ನು ಹೊಂದಿರುವ ಡೋರ್‌ಮ್ಯಾಟ್ ಅನ್ನು ಮಾರಾಟ ಮಾಡಿದೆ. ಚೀನಾದ ಒಡೆತನದ ಜನಪ್ರಿಯ ಇ-ಕಾಮರ್ಸ್ ಸೈಟ್ ಇದಾಗಿದೆ. ಸಂಸ್ಥೆಯ ಈ ನಡವಳಿಕೆಯು ಹಿಂದೂ ಭಕ್ತರಲ್ಲಿ (Viral News) ತೀವ್ರ ಆಕ್ರೋಶವನ್ನುಂಟು ಮಾಡಿದೆ.

ಪಾದಗಳನ್ನು ಒರೆಸಲು ಉದ್ದೇಶಿಸಲಾದ ಡೋರ್‌ಮ್ಯಾಟ್ ಅಥವಾ ನೆಲಹಾಸು ಮೇಲೆ ಜಗನ್ನಾಥ ದೇವರ ಮುಖವನ್ನು ಚಿತ್ರಿಸಲಾಗಿದೆ. ಅಷ್ಟೇ ಅಲ್ಲ ನೆಲಹಾಸುವಿನ ಮೇಲೆ ಯಾರೋ ಹೆಜ್ಜೆ ಹಾಕುತ್ತಿರುವ ಫೋಟೊವೂ ಇದೆ. ಕಾಲು ಒರೆಸುವ ನೆಲಹಾಸುವಿನ ಮೇಲೆ ದೇವರ ಚಿತ್ರವಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಗನ್ನಾಥ ದೇವಾಲಯ ನಿರ್ವಹಣಾ ಸಮಿತಿಯ ಮಾಜಿ ಸದಸ್ಯ ಮಾಧಾಬ್ ಪೂಜಾಪಂಡ ಕಂಪನಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಎಚ್ಚೆತ್ತು ಕ್ರಮ ಕೈಗೊಳ್ಳುವಂತೆ ದೇವಾಲಯ ಆಡಳಿತವು, ಒಡಿಶಾ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. ಇಂತಹ ಅಗೌರವದ ವಸ್ತುಗಳ ಮಾರಾಟ ಮತ್ತು ಮಾರುಕಟ್ಟೆಯನ್ನು ನಿಲ್ಲಿಸಲು ಚೀನಾದ ಅಧಿಕಾರಿಗಳೊಂದಿಗೆ ರಾಜತಾಂತ್ರಿಕವಾಗಿ ಮಾತನಾಡುವಂತೆ ಮನವಿ ಮಾಡಿದೆ.

ತಮ್ಮ ಲಾಭಕ್ಕಾಗಿ ಧಾರ್ಮಿಕ ಚಿಹ್ನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಧಾರ್ಮಿಕ ಚಿಹ್ನೆಗಳು ಮತ್ತು ಪದಗಳನ್ನು ಕಾನೂನುಬದ್ಧವಾಗಿ ರಕ್ಷಿಸಲು ಕ್ರಮಗಳನ್ನು ಪ್ರಾರಂಭಿಸಲಾಗಿದ್ದರೂ, ಪ್ರಕ್ರಿಯೆಯನ್ನು ವೇಗಗೊಳಿಸಬೇಕಾಗಿದೆ ಎಂದು ಪೂಜಾಪಾಂಡ ಹೇಳಿದರು.



ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

ಈ ಫೋಟೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಭಕ್ತರು ಉತ್ಪನ್ನವನ್ನು ಖಂಡಿಸಿದ್ದಾರೆ. ಅದನ್ನು ತೆಗೆದುಹಾಕಲು ಹಾಗೂ ಕ್ಷಣೆ ಕೇಳುವಂತೆ ಒತ್ತಾಯಿಸಿದ್ದಾರೆ. #RespectJagannath ಮತ್ತು #BoycottAliExpressನಂತಹ ಹ್ಯಾಶ್‌ಟ್ಯಾಗ್‌ಗಳು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದು, ಕ್ರಮ ಕೈಗೊಳ್ಳುವ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಜಗನ್ನಾಥ ಕೇವಲ ದೇವರಲ್ಲ, ಬದಲಾಗಿ ಒಡಿಯಾ ಗುರುತು ಮತ್ತು ನಂಬಿಕೆಯ ಅತ್ಯಂತ ಪೂಜ್ಯ ಸಂಕೇತ. ದೇವರ ಚಿತ್ರದ ಯಾವುದೇ ದುರುಪಯೋಗವು ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಹಾನಿಯನ್ನುಂಟು ಮಾಡಬಹುದು ಎಂದು ಸಾರ್ವಜನಿಕರು ಹೇಳಿದ್ದಾರೆ.